Nari Suvarna Breed sheep ಕೊಪ್ಪಳ ಜಿಲ್ಲೆಯಲ್ಲಿ ನಾರಿ ಸುವರ್ಣ ಕುರಿ (Nari Suvarna Breed sheep) ತಳಿಯ ಸಂವರ್ಧನಾ ಕೇಂದ್ರ ಸ್ಥಾಪನೆ ಮಾಡವುದರ ಬಗ್ಗೆ ಇದೇ ತಿಂಗಳ ಮಾರ್ಚ್ 8 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಂಡಿಸಿದ ಬಜೆಟ್ ನಲ್ಲಿ ಘೋಷಿಸಿದ್ದು ತಮಗೆಲ್ಲರಿಗೂ ಗೊತ್ತಿದ ಸಂಗತಿ.
ಗ್ರಾಮಾಂತರ ಪ್ರದೇಶದ ಆರ್ಥಿಕ ಸುಧಾರಣೆಯಲ್ಲಿ ಕುರಿ ಮಹತ್ವದ ಪಾತ್ರವಹಿಸುತ್ತದೆ. ಕುರಿಯನ್ನು ಬಡವರ ಸಣ್ಣ ಮತ್ತು ಅತಿ ಸಣ್ಣ ರೈತರ ‘ಕಿರುಕಾಮಧೇನು’ ಎಂದು ಕರೆಯುತ್ತಾರೆ. ಉಣ್ಣೆ, ಮಾಂಸ, ಚರ್ಮ, ಗೊಬ್ಬರ ಇತ್ಯಾದಿ ಉಪಯುಕ್ತ ವಸ್ತುಗಳಿಂದ ದೇಶದ ಆರ್ಥಿಕ ಸುಧಾರಣೆಯಲ್ಲಿ ಕುರಿ ಉತ್ತಮ ಪಾತ್ರ ವಹಿಸಿದೆ. ಕುರಿ ಸಾಕಾಣಿಕೆ ಸಣ್ಣ, ಅತಿ ಸಣ್ಣ ರೈತರ ಮತ್ತು ಕೃಷಿ ಕಾರ್ಮಿಕರ ಮುಖ್ಯ ಕಸುಬಾಗಿದೆ ಎಂದು ಸಹ ಹೇಳಬಹುದು.
ಕುರಿಯಲ್ಲಿ ಡೆಕ್ಕನಿ, ಬನ್ನೂರು, ಮೌಳಿ, ಹಾಸನ ಕುರಿ, ಮಂಡ್ಯ ಕುರಿ ಹೀಗೆ ಹಲವಾರು ತಳಿಗಳಿವೆ. ಆದರೆ ನಾರಿ ಸುವರ್ಣ ಕುರಿ ಇವೆಲ್ಲ ತಳಿಗಳಿಂದ ಸ್ವಲ್ಭ ಭಿನ್ನವಾಗಿದೆ. ಇದು ಹೆಚ್ಚು ಲಾಭವೂ ತಂದು ಕೊಡುತ್ತದೆ ಮತ್ತು ಹೆಚ್ಚು ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಅದಕ್ಕಾಗಿಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೊಪ್ಪಳದಲ್ಲಿ ನಾರಿ ಸುವರ್ಣ ಕುರಿ ತಳಿಯ ಸಂವರ್ಧನಾ ಕೇಂದ್ರ ಸ್ಥಾಪನೆ ಮಾಡುವ ಕುರಿತು ಘೋಷಿಸಿದರು. ಹಾಗಾದರೆ ಈ ನಾರಿ ಸುವರ್ಣ ಕುರಿಯ ವಿಶೇಷತೆ ಏನೆಂಬುದ್ನು ತಿಳಿದುಕೊಳ್ಳೋಣವೇ….. ಇಲ್ಲಿದೆ ಮಾಹಿತಿ.
Nari Suvarna Breed sheep ನಾರಿ ಸುವರ್ಣ ತಳಿಯ ವೈಶಿಷ್ಟ್ಯವೇನು ಗೊತ್ತೇ
ನಾರಿ ಸುವರ್ಣ ಒಂದು ವಿಶೇಷ ತಳಿಯಾಗಿದ್ದು, ಪಶ್ಚಿಮ ಬಂಗಾಳದ ಅವಳಿ ಮರಿ ನೀಡುವ ಗೆರೋಲ್ ತಳಿ ಕುರಿಗಳನ್ನು ಡೆಕ್ಕನಿ ತಳಿ ಕುರಿಗಳೊಂದಿಗೆ ಸಂಕರಣ ಮಾಡಿ ಫಲ್ವಾನಿನ ನಿಂಬಕರ್ ಅಗ್ರಿಕಲ್ಚರ್ ರಿಸರ್ಚ್ ಸೆಂಟರ್ ನಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ
ಇವುಗಳು ಕಂದು ಅಥವಾ ಬಿಳಿ ಬಣ್ಣದಿಂದ ಕೂಡಿದ್ದು ಸರಾಸರಿ 25 ರಿಂದ 30 ಕಿಲೋ ಗ್ರಾಂ ತೂಕವಿರುತ್ತದೆ. ಹುಟ್ಟಿದ ಟಗರುಗಳನ್ನು ಹೊಮೋಜೈಗಸ್ ಜೀನ್ಸ್ ಗಳಿದ್ದರೆ ಎಱಡರಿಂದ ಮೂರು ಮರಿಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಪಶು ಇಲಾಖೆಯವರು ಸರ್ಕಾರದ ಭೂ ಸಮೃದ್ಧಿ ಯೋಜನೆಯಂತೆ ಕುರಿಗಾಹಿಗಳಿಗೆ ಸಾಕಲು ಕೊಡುತ್ತಾರೆ. ಕುರಿಗೆ ಜೀವವಿಮೆ ಸಹ ಮಾಡಿಸುತ್ತಾರೆ. ಒಂದು ವೇಳೆ ಯಾವುದಾದರೂ ಅವಘಡದಲ್ಲಿ ಕುರಿಯು ಸತ್ತರೆ ರೈತರಿಗೆ ಸರ್ಕಾರವು ವಿಮಾ ಪರಿಹಾರ ನೀಡುತ್ತದೆ.
ವರ್ಷಕ್ಕೆ 25 ರಿಂದ 30 ಸಾವಿರ ಬೆಲೆ
ವರ್ಷಕ್ಕೆ ಎಱಡು ಬಾರಿ ಮರಿ ಹಾಕುವ ಈ ತಳಿಯಲ್ಲಿ ಎರಡು ಬಗೆಯಿದೆ. ಒಂದು ಹೋಮೋಜೈಗಸ್ ಇನ್ನೊಂದು ಹೆಟ್ರೋಜೆಗಸ್ .
ಹೋಮೋಜೈಗಸ್ ಕುರಿಗಳಉ ಒಂದು ಬಾರಿಗೆ ಎರಡರಿಂದ ಮೂರು ಮರಿಗಳನ್ನು ಹಾಕುತ್ತದೆ. ಹೆಟ್ರೋಜೈಗಸ್ ಕುರಿಗಳು ಒಂದು ಬಾರಿಗೆ ಅಥವಾ ಒಂದು ಅಥವಾ ಎಱಡು ಮರಿಗಳನ್ನು ಹಾಕುತ್ತವೆ. ಹೋಮೋಜೈಗಸ್ ಕುರಿಮರಿಗೆ ಅವುಗಳ ವಯಸ್ಸು ಮತ್ತು ತೂಕಕ್ಕನುಗುಣವಾಗಿ 30 ರಿಂದ 35 ಸಾವಿರದಷ್ಟು ಬೆಲೆಯಿದೆ. ಹೆಟ್ರೋಜೈಗಸ್ ಕುರಿಮರಿಯೊಂದಕೇಕೆ 25 ರಿಂದ 30 ಸಾವಿರದಷ್ಟು ಬೆಲೆಯಿದೆ. ಮರಿಗಳು ಕೇವಲ 5 ತಿಂಗಳಾಗುವಷ್ಟರಲ್ಲಿಯೇ ಮರಿಗಳನ್ನು ಹಾಕಲು ಸಿದ್ದವಾಗುತ್ತವೆ. ಆದ್ದರಿಂದ ಈ ಕುರಿ ಸಾಕಾಣಿಕೆಯು ಲಾಭದಾಯಕ ಉದ್ಯಮವಾಗಿ ಬೆಳೆದಿದೆ.
ಮೇವಿಗೆ ಪರದಾಟವಿಲ್ಲ
ನಾಟಿ ಕುರಿಗಳಂತೆಯೇ ನಾರಿ ಸುವರ್ಣ ತಳಿಯ ಕುರಿಗಳಿಗೂ ಮೇವು ನೀಡಲಾಗುತ್ತದೆ. ನಾಟಿ ಕುರಿಗಳ ಮೇವಿಗಾಗಿ ಕಾಡಿಗೆ ಹೊಡೆದುಕೊಂಡು ಹೋಗಲಾಗುತ್ತದೆ. ಆದರೆ ನಾರಿ ಸುವರ್ಣ ತಳಿ ಕುರಿಗಳಿಗೆ ಮಾತ್ರ ಶೆಡ್ನಲ್ಲಿ ನಿಗದಿತ ಸಮಯಕ್ಕೆ ಮೇವು ನೀಡಲಾಗುತ್ತದೆ. ಮೇವನ್ನು ತಾವೇ ಸ್ವಂತ ಬೆಳೆದರೆ ಅಷ್ಟು ಖರ್ಚು ಬರಲ್ಲ.
ನಿರ್ವಹಣೆ ಕಷ್ಟವಿಲ್ಲ
ಸಾಮಾನ್ಯ ಕುರಿಯಂತೆ ಹೋಲುವ ಈ ತಳಿ ಕುರಿಯ ಅಭಿವೃದ್ಧಿ ನಿರ್ವಹಣೆ ಅಷ್ಟೇನೂ ಕಷ್ಟವಲ್ಲ. ನಾಟಿ ತಳಿಯ ಕುರಿಗಳನ್ನು ಮೇವಿಗಾಗಿ ಹೊರಗಡೆ ಕರೆದೊಯ್ಯಬೇಕು. ಆದರೆ ಈ ತಳಿಯ ಕುರಿಗಳು ಹಾಗಲ್ಲ. ಬಿದಿರು, ತೆಂಗಿನ ಗರಿಗಳಿಂದ ಶೆಡ್ ನಿರ್ಮಿಸಿ ಅದರಲ್ಲೇ ಮೇವು ಹಾಕಿ ಸಾಕುವುದಾಗಿದೆ. ಮಾಮೂಲಿ ಕುರಿಗಳಿಗೆ ನೀಡುವ ಔಷಧೋಪಚಾರವನ್ನೇ ಈ ತಳಿಗೂ ನೀಡಲಾಗುತ್ತದೆ.