Nanna Bele nanna sameekshe : 2024-25ನೇ ಸಾಲಿನ ನನ್ನ ಬೆಳೆ ನನ್ನ ಸಮೀಕ್ಷೆ ಧ್ಯೇಯದೊಂದಿಗೆ ಜಿಲ್ಲೆಯ ರೈತರು 2024-25 ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಮಾಡಲು ಅನುಕೂಲವಾಗುವಂತೆ ತಮ್ಮ ಮೊಬೈಲ್ ಗಳಲ್ಲಿ ಗೂಗಲ್ ಪ್ಲೇ ಸ್ಟೋರ್ ನಿಂದ ಬೆಳೆ ಸಮೀಕ್ಷೆಆ್ಯಪ್ ನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಹೊಲದಲ್ಲಿ ತಾವು ಬೆಳೆದ ಬೆಳೆಗಳ ಸಮೀಕ್ಷೆ ಕೈಗೊಳ್ಳಬೇಕೆಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಎಲ್ಲಾ ರೈತರು ಕೃಷಿ ಇಲಾಖೆಯು ಮೊಬೈಲ್ ಆಪ್ಲಿಕೇಶನ್ ಬಳಸಿ ಬೆಳೆ ಸಮೀಕ್ಷೆ ಮಾಡುವ ಮೂಲಕ ಬೆಳೆ ಪ್ರದೇಶ ನಿಖರ ಅಂಕಿ ಅಂಶಗಳ ಕ್ರೂಢೀಕರಣಕ್ಕಾಗಿಹಾಗೂ ಋತುಮಾನಕ್ಕನುಗುಣವಾಗಿ ಪಹಣಿಗಳಲ್ಲಿ ನೈಜ ಬೆಳೆ ಮೀಹಿತಿ ದಾಖಲೆಗಳಿಗಾಗಿ ಬೆಳೆ ಸಮೀಕ್ಷೆ ಕಾರ್ಯ ಅನುಷ್ಠಾನಕ್ಕೆ ತರಲಾಗಿದೆ.
ರೈತರು ತಾವು ಬೆಳೆದ ಬೆಳೆಗಳ ನೈಜ ಸಮೀಕ್ಷೆಯಿಂದ ಸರ್ಕಾರದಿಂದ ಕಾಲಕಾಲಕ್ಕೆ ಘೋಷಿಸಲ್ಪಡುವ ಬರ ಪರಿಹಾರ, ಕೃಷಿ ವಿಮೆ ಪರಿಹಾರ, ಸರಳವಾಗಿ ಸಿಗಲು ಸಾಧ್ಯ.ಬೆಳೆ ಮಿಸ್ ಮ್ಯಾಜ್ ಆದಲ್ಲಿ ಅವುಗಳಿಂದ ವಂಚಿತರಾಗುತ್ತಾರೆ. ಬ್ಯಾಂಕ್ ಗಳಲ್ಲಿ ರೈತರಿಗೆ ಬೆಳೆ ಸಾಲವನ್ನು ಬೆಳೆ ಸಮೀಕ್ಷೆ ಆಧರಿತ ತಂತ್ರಾಂಶವನ್ನು ಪರಿಗಣಿಸಿ ಮಂಜೂರಾತಿ ನೀಡಲು ಸಾಧ್ಯವಾಗುತ್ತದೆ.
ರೈತರು ಕೊನೆ ಪಕ್ಷ ಸ್ವತಃ ಬೆಳೆ ಸಮೀಕ್ಷೆ ಮಾಡಲಾಗದಿದ್ದಲ್ಲಿ ತಮ್ಮ ಗ್ರಾಮದಲ್ಲಿರುವ ಪಿ.ಆರ್ (ಖಾಸಗಿ ನಿವಾಸಿ ಸಮೀಕ್ಷಕ) ರವರನ್ನು ತಮ್ಮ ಹೊಲಕ್ಕೆ ಕರೆದೊಯ್ದು ಅವರ ಸಹಾಯದಿಂದ ಸಮೀಕ್ಷೆ ಮಾಡಿಸಿ ಬೆಳೆಯ ಜಿಪಿಎಸ್ ಛಾಯಾಚಿತ್ರವನ್ನು ವೆಬ್ಸೈಟ್ ಗೆ ಅಪ್ಲೋಡ್ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.
Nanna Bele nanna sameekshe ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮಾಡುವುದು ಹೇಗೆ?
ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮಾಡಲು ಈ
https://play.google.com/store/apps/details?id=com.csk.farmer23_24.cropsurvey&hl=kn
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಮುಂಗಾರು ರೈತರ ಬೆಳೆ ಸಮೀಕ್ಷೆ 2024 ಕಾಣಿಸುತ್ತದೆ. ನಂತರ
ಇನ್ಸ್ ಸ್ಟಾಲ್ ಮಾಡಿ ಮೇಲೆ ಕ್ಲಿಕ್ ಮಾಡಬೇಕು. .ನಂತರ ಆಧಾರ್ ಕಾರ್ಡ್ ನಲ್ಲಿರುವ ಕ್ಯೂ ಆರ್ ಕೋಡ್ ನ್ನು ಸ್ಕ್ಯಾನ್ ಮಾಡಿ ತಮ್ಮ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ನೋಂದಾಯಿಸಿಕೊಂಡು ತಮ್ಮ ಜಮೀನಿನ ವಿವರಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ತದನಂತರ ತಮ್ಮ ಜಮೀನುಗಳಿಗೆ ತೆರಳಿ ಸಂಬಂಧಪಟ್ಟ ಸರ್ವೆ ನಂಬರಿನಲ್ಲಿ ಬೆಳೆದಿರುವ ಬೆಳೆಗಳ ಛಾಯಾಚಿತ್ರಗಳನ್ನು ತೆಗೆದು ಅಪ್ಲೋಡ್ ಮಾಡಬೇಕು.
Nanna Bele nanna sameekshe ರೈತರೇಕೆ ಬೆಳೆ ಸಮೀಕ್ಷೆ ಮಾಡಿಸಬೇಕು?
ಕೃಷಿ, ರೇಷ್ಮೆ, ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಎಣಿಕೆ ಕಾರ್ಯಗಳಲ್ಲಿ ಬೆಳೆ ವಿಮೆ ಯೋಜನೆಯ ಸರ್ವೆ ನಂಬರ್ ವಾರು ಬೆಳೆ ಪರಿಶೀಲನೆ ಹಾಗೂ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು ಉಪಯೋಗವಾಗುತ್ತದೆ. ಸರ್ವೆ ನಂಬರ್ ಆಯ್ಕೆ ಮಾಡಲು ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲು ಬೆಳೆ ಸಮೀಕ್ಷೆಯ ಕೆಲಸಕ್ಕೆ ಬರುತ್ತದೆ. ಅರ್ಹ ಫಲಾನುಭವಿಗಳನ್ನು ಗುರುತಿಸಲು, ಆರ್.ಟಿ.ಸಿ ಯಲ್ಲಿ ಬೆಳೆ ವಿವರಗಳನ್ನು ದಾಖಲಾತಿಗಾಗಿ ಬೆಳೆ ಸಮೀಕ್ಷೆ ಉಪಯೋಗವಾಗುತ್ತದೆ.
ಎನ್.ಡಿ.ಆರ್.ಎಫ್, ಎಸ್.ಬಿ. ಆರ್. ಎಫ್ ಅಡಿಯಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಹಾನಿಗೊಳಗಾದ ಬೆಳೆಯ ವಿಸ್ತೀರ್ಣದ ವಿವರ ಹಾಗೂ ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸುವ ಸಂದರ್ಭದಲ್ಲಿ ಬೆಳೆ ಸಮೀಕ್ಷೆ ಬಳಸಬಹುದು.
ಇದನ್ನೂ ಓದಿ : ನಿಮ್ಮ ಯಾವ ಯಾವ ಜಮೀನು ಜಂಟಿಯಲ್ಲಿದೆ? ಇಲ್ಲೇ ಚೆಕ್ ಮಾಡಿ
ರೈತರು ಹೆಚ್ಚಿನ ಆಸಕ್ತಿಯೊಂದಿಗೆ ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡು ತಮ್ಮ ಜಮೀನಿನಲ್ಲಿರುವ ಕೃಷಿ, ತೋಟಗಾರಿಕೆ, ರೇಷ್ಮೆ ಇತರೆ ಬೆಳೆಗಳ ವಿವರಗಳನ್ನು ಬೆಳೆ ಸಮೀಕ್ಷೆ ಆ್ಯಪ್ ನಲ್ಲಿ ನಮೂದಿಸಬೇಕಾಗುತ್ತದೆ.