ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ತೀವ್ರಗೊಂಡಿರುವುದರಿಂದ ರಾಜ್ಯದ ಕರಾವಳಿ ಸೇರಿದಂತೆ ಇತರೆಡೆ ಜೂನ್ 1 ರಿಂದ ಜೂನ್ 3 ರವರೆಗೆ ವ್ಯಾಪಕ ಮಳೆಯಾಗುವ (Monsoon-rain alert) ಸಾಧ್ಯತೆಯಿರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Monsoon-rain alert ಯಾವ ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ?
ಉತ್ತರಕನ್ನಡ, ದಕ್ಷಿಣ ಕನ್ನಡ, ಕೊಪ್ಪಳ, ರಾಯಚೂರು, ವಿಜಯಪುರ, ಬಳ್ಳಾರಿ, ಉಡುಪಿ, ಬೀದರ್, ಗದಗ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಶಿವಮೊಗ್ಗ ಕೊಡಗು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಈ ಜಿಲ್ಲೆಗಳಲ್ಲಿ ಜೂನ್ 3 ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕಲಬುರಗಿ, ಗದಗ, ಕೊಪ್ಪಳ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ಜೂನ್ 1 ಮತ್ತು 2 ರಂದು ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳದಲ್ಲಿ 7 ಸೆಂ.ಮೀ, ಕಾರವಾರದಲ್ಲಿ 5, ಕುಂದಾಪುರದಲ್ಲಿ 4 ಸೆಂ.ಮೀ ಹಾಗೂ ಚಿಂತಾಮಣಿಯಲ್ಲಿ ಮೂರು 3 ಸೆಂ.ಮೀಟರ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ನೈರುತ್ಯ ಮಾನ್ಸೂನ್ ಜೂಲ್ 3 ರ ಸುಮಾರಿಗೆ ಕೇರಳ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆಯಿದ್ದು, ರಾಜ್ಯಕ್ಕೆ ಜೂನ್ 5 ರಂದು ಬರುವ ಸಾಧ್ಯತೆಯಿದೆ. ಕರಾವಳಿ ಭಾಗದಲ್ಲಿ ಮುಂಗಾರು ಪೂರ್ವ ಮಳೆ ಇನ್ನಷ್ಟು ಚುರುಕಾಗಿದೆ.
ಇದನ್ನೂ ಓದಿ : ಸಿಡಿಲಿನ ಆಘಾತದಿಂದ ತಪ್ಪಿಸಿಕೊಳ್ಳಲು ದಯವಿಟ್ಟು ಹೀಗೆ ಮಾಡಿ.
ಪಿಯುಸಿ, ಡಿಗ್ರಿ ಪಾಸಾದವರಿಗೆ ಉದ್ಯೋಗಾವಕಾಶ- ಈ ದಿನದೊಳಗೆ ಅರ್ಜಿ ಸಲ್ಲಿಸಿ
ಪಿಯುಸಿ, ಡಿಗ್ರಿ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗ ಪಡೆಯು ಅರ್ಜಿ ಆಹ್ವಾನಿಸಲಾಗಿದೆ. ಹೌದು, ಕಲಬುರಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅನುದಾನಿತ ಯೋನೆಯಾದ ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರ ಯೋಜನೆಯನ್ನು ಸ್ವಯಂ ಸೇವಾ ಸಂಸ್ಥೆಯಾದ ಶ್ರೀ ಗೋಪಾಲ ಜಾಧವ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಅನುಷ್ಠಾನಗೊಳಿಸಲು ಸರ್ಕಾರದಿಂದ ಮಂಜೂರಾತಿ ನೀಡಲಾಗಿರುತ್ತದೆ.
ಈ ಕೆಳಕಂಡ ವಿವಿಧ ಹುದ್ದೆಗಳನ್ನು ಜಿಲ್ಲಾ ಸಮಿತಿ ಮೂಲಕ ತಾತ್ಕಾಲಿಕವಾಗಿ ಗೌರವಧನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಹುದ್ದೆಗಳ ವಿವರ ಇಂತಿದೆ
ಅಕೌಂಟೆಂಟ್ ಕಂ ಕ್ಲರ್ಕ್ ಕಂ ಸ್ಟೋರ್ ಕೀಪರ್ ಹುದ್ದೆಗೆ ಬಿಕಾಂ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಕಂಪ್ಯೂಟರ್ ಆಪರೇಟರ್ (ಗಣಕಯಂತ್ರ) ಹುದ್ದೆಗೆ ದ್ವಿತೀಯ ಪಿಯುಸಿ ಮತ್ತು ಕಂಪ್ಯೂಟರ್ ತರಬೇತಿ ಹೊಂದಿರಬೇಕು.
ಕಚೇರಿ ಸೇವಕ ಹುದ್ದೆಗೆ ಎಸ್ಎಸ್ಎಲ್ಸಿ ಪಾಸಾಗಿರಬೇಕು. ಕೃತಕಾಂಗ ಜೋಡಣೆಂ (ಪಿ.ಆ್ಯಂಡ್ ಒ) ಅಭಿಯಂತರ ಹುದ್ದೆಗೆ ಪಿ.ಆ್ಯಂಡ್ ಒ ಇಂಜಿನಿಯರಿಂಗ್ ಪದವಿ ಅಥವಾ ಡಿಪ್ಲೋಮಾದೊಂದಿಗೆ 2 ರಿಂದ 5 ವರ್ಷಗಳ ಅನುಭವ ಹೊಂದಿರಬೇಕು. ಲೆದರ್ ವರ್ಕ್ ಅಥವಾ ಶೂ ಮೇಕರ್ ಹುದ್ದೆಗೆ ಪ್ರಮಾಣ ಪತ್ರದೊಂದಿಗೆ 2 ವರ್ಷಗಳ ಅನುಭವ ಹೊಂದಿರಬೇಕು.
ಸ್ವೀಚ್ ಥೆರಾಪಿಸ್ಟ್ ಮತ್ತು ಆಡಿಯೋಲಾಡಿಸ್ಟ್ ಹುದ್ದೆಗೆ ಬಿ.ಎಸ್.ಸಿ ಇನ್ ಸ್ವಿಚ್ ಆ್ಯಂಡ್ ಅಡಿಯೋಲಾಜಿ ವಿದ್ಯಾರ್ಹತೆ ಹೊಂದಿರಬೇಕು. ಫಿಸಿಯೋಥಾರೆಪಿಸ್ಟ್ ಆಥವಾ ಅಕ್ಯುಪೇಶನಲ್ ಥೆರಾಪಿಸ್ಟ್ ಹುದ್ದಗೆ ಫಿಸಿಯೋಥೆರಾಪಿಸ್ಟ್ ಅಕ್ಯುಪೇಶನಲ್ ಥೆರಾಪಿ ಪದವಿ ವಿದ್ಯಾರ್ಹತೆ ಹೊಂದಿರಬೇಕು.