Meghdoot app rain alert ರೈತರಿಗೆ, ಸಾರ್ವಜನಿಕರಿಗೆ ಐದು ದಿನ ಮೊದಲೇ ಮಳೆಯ ಮುನ್ಸೂಚನೆ ನೀಡುತ್ತದೆ ಮೇಘದೂತ ಆ್ಯಪ್. ಹೌದು, ವಾರದ ಮೊದಲು ನಿಖರವಾದ ಮಾಹಿತಿ ನೀಡುತ್ತದೆ ಈ ಆ್ಯಪ್. ಇದು ದೇಶದ 10 ಭಾಷೆಗಳಲ್ಲಿ ಲಭ್ಯವಿದೆ.
ಮೋಡ, ಮಳೆ ಹಾಗೂ ಬಿತ್ತನೆ ಕುರಿತಂತೆ ರೈತರಿಗೆ ಅವಶ್ಯಕವಾಗಿರುವ ಭವಿಷ್ಯದ ಮಾಹಿತಿಯನ್ನು ರೈತರ ಅಂಗೈನಲ್ಲೇ ಕೊಡುವ ಆ್ಯಪ್ ಇದಾಗಿದೆ. ಇದರಿಂದ ರೈತರು ಇನ್ನೂ ಮುಂದೆ ಆಕಾಶ ನೋಡಿ, ಮೋಡ ಮಳೆ ನೋಡಿ ಕೆಲಸ ಮಾಡುವಂತಿಲ್ಲ. ತಮ್ಮ ಮೊಬೈಲ್ ನೋಡಿಯೇ ಎಲ್ಲಾ ಮಾಹಿತಿ ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ.. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
Meghdoot app rain alert ರೈತರು ಮೇಘದೂತ್ ಆ್ಯಪ್ ಇನಸ್ಟಾಲ್ ಮಾಡಿಕೊಳ್ಳುವುದು ಹೇಗೆ?
ಮೇಘದೂತ್ ಆ್ಯಪ್ ಮೊಬೈಲ್ ನಲ್ಲೇ ಇನಸ್ಟಾಲ್ ಮಾಡಲು ತಮ್ಮ ಫೋನ್ ನಲ್ಲಿರು ಗೂಗುಲ್ ಪ್ಲೇ ಸ್ಟೋರ್ ನಲ್ಲಿ Meghdoot ಎಂದು ಟೈಪ್ ಮಾಡಬೇಕು. ಆಗ ಮೇಘದೂತ್ ಆ್ಯಪ್ ನಿಮಗೆ ಕಾಣಿಸುತ್ತದೆ. ಅಲ್ಲಿ Install ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಲ್ಲಿ ಇನಸ್ಟಾಲ್ ಮಾಡಿಕೊಳ್ಳಬಹುದು. ಅಥವಾ ಈ
https://play.google.com/store/apps/details?id=com.aas.meghdoot&hl=en_IN&gl=US&pli=1
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೇಘದೂತ್ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ Install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೇಘದೂತ್ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ ನೀವು ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ಈ ಆ್ಯಪ್ ಕನ್ನಡದಲ್ಲಿಯೂ ಲಭ್ಯವಿರುವುದರಿಂದ ನೀವು ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು.
ಆಗ ನಿಮಗೆ ನಿಖರವಾದ ಬೆಳೆ ಸಲಹೆ ಪಡೆಯಿರಿ ಎಂಬ ಸಂದೇಶ ಕಾಣಿಸುತ್ತದೆ. ಅದರ ಕೆಳಗಡೆಯಿರುವ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ನಂತರ ವಿವಿಧ ಭಾಷೆಗಳಲ್ಲಿ ಪಡೆಯಿರಿ ಎಂಬ ಸಂದೇಶ ಕಾಣಿಸುತ್ತದೆ. ಅಲ್ಲಿಯೂ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಇದಾದನಂತರ ಹವಾಮಾನ ಮುನ್ಸೂಚನೆ ಎಂಬ ಸಂದೇಶ ಕಾಣಿಸುತ್ತದೆ.ಈ ಅಪ್ಲಿಕೇಶನ್ ಮುಂದಿನ ಐದು ದಿನಗಳವರೆಗೆ ನಿರ್ಣಾಯಕ ಹವಾಮಾನ ಸೂಚಕಗಳಿಗೆ(ಮಳೆ, ತಾಪಮಾನ, ಗಾಳಿ, ಆರ್ದ್ರತೆ ಮತ್ತು ಮೋಡ) ಪರಿಮಾಣಾತ್ಮಕ ಹವಾಮಾನ ಮುನ್ಸೂಚನೆಯನ್ನು ಪ್ರದರ್ಶಿಸುತ್ತದೆ.
ಇದನ್ನೂ ಓದಿ : ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಇಲ್ಲೇ ಚೆಕ್ ಮಾಡಿ
ಇಲ್ಲಿಯೂ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ನಂತರ ಲಾಗಿನ್ ಅಥವಾ ಸೈನ್ ಅಪ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲೋ ಮೇಘೂತ್ ಟು ಆ್ಯಕ್ಸೆಸ್ ದಿಸ್ ಡಿವೈಸ್ ಲೋಕೇಶನ್ ಮೇಸೆಜ್ ಕಾಣಿಸುತ್ತದೆ. ಅಲ್ಲಿ ವೈಲ್ ಯೂಸಿಂಗ್ ದಿ ಆ್ಯಪ್ ಮೇಲೆ ಕ್ಲಿಕ್ ಮಾಡಬೇಕು.ಆಗ ನಿಮ್ಮ ಜಿಲ್ಲೆ ಕಾಣಿಸುತ್ತದೆ. ವಾರ, ದಿನಾಂಕ ಹವಾಮಾನದ ವರದಿ ಕಾಣಿಸುತ್ತದೆ. ಅಂದರೆ ಮೋಡಿ ಕವಿದ ವಾತಾವರಣವಿದ್ದರೆ ಮಳೆ, ಗಾಳಿಯ ವೇಗ, ತೇವಾಂಶ, ಗಾಳಿಯ ದಿಕ್ಕು ಅಂದರೆ ಯಾವ ಕಡೆ ಬೀಸುತ್ತಿದೆ ಎಂಬ ಮಾಹಿತಿ ಕಾಣಿಸುತ್ತದೆ.
ಕೆಳಗಡಿ ಕಾಣಿಸುವ ಮುನ್ಸೂಚನೆ ಮೇಲೆ ಕ್ಲಿಕ್ ಮಾಡಿದರೆ ಮಂದಿನ ಐದು ದಿನಗಳ ಹವಾಮಾನ ವರದಿ ರಿಪೋರ್ಟ್ ಕಾಣಿಸುತ್ತದೆ. ಸ್ಥಳಗಳು ಮೇಲೆ ಕ್ಲಿಕ್ ಮಾಡಿದರೆ ಯಾವ ಜಿಲ್ಲೆಯಲ್ಲಿ ಮಳೆಯಾಗಬಹುದು ಎಂಬ ಮಾಹಿತಿ ಕಾಣಿಸುತ್ತದೆ.
ಜಿಲ್ಲೆಯ ಬೆಳೆಗಳಿಗೆ ಹೋಗಿ
ಜಿಲ್ಲೆಯ ಬೆಳೆಗಳಿಗೆ ಹೋಗಿ ಮೇಲೆ ಕ್ಲಿಕ್ ಮಾಡಿದರೆ ನೀವು ಯಾವ ಯಾವ ಬೆಳಗೆಗಳ ಕುರಿತಂತೆ ಸಲಹೆ ಪಡೆಯಬಹುದು ಎಂಬ ಮಾಹಿತಿ ಕಾಣಿಸುತ್ತದೆ. ಅಲ್ಲಿ ನೀವು ಆ ಬೆಳೆಗಳ ಮೇಲೆ ಕ್ಲಿಕ್ ಮಾಡಿದರೆ ಸಾಕು, ಆ ಬೆಳೆಯನ್ನು ಯಾವ ಅವಧಿಯಲ್ಲಿ ಬಿತ್ತಬಹುದು ಎಂಬ ಮಾಹಿತಿ ಕಾಣಿಸಿುತ್ತದೆ.