ನಿಮ್ಮ ಜಮೀನಿನ ಅಳತೆ ಮೊಬೈಲ್ ನಲ್ಲೇ ಮಾಡಿ

Written by Ramlinganna

Updated on:

Measure your land in mobile ರೈತರು ತಮ್ಮ ಜಮೀನು ಎಷ್ಟು ಎಕರೆ ಹೊಂದಿದೆ ಎಂಬುದನ್ನು ಮೊಬೈಲ್ ನಲ್ಲೇ ಅಳತೆ ಮಾಡಬಹುದು. ಹೌದು, ಇದು ತುಂಬಾ ಸರಳವಿಧಾನವಾಗಿದೆ. ರೈತರು ನಿಂತಲ್ಲೇ ತಮ್ಮ ಜಮೀನಿನ ಅಳತೆ ಮಾಡಬಹುದು.

ಸಾಮಾನ್ಯವಾಗಿ ರೈತರು ಪಹಣಿಯಲ್ಲಿದ್ದಂತೆ ತಮ್ಮ ಜಮೀನು ಇದೆ ಅಂದುಕೊಂಡಿರುತ್ತಾರೆ. ಕೆಲವು ರೈತರ ಜಮೀನು ಪಹಣಿಯಲ್ಲಿ ತೋರಿಸಿದಂತಿರುವುದಿಲ್ಲ. ಅಕ್ರಮಣದಿಂದಾಗಿ ಜಮೀನು ಕಡಿಮೆಯಿರುತ್ತದೆ. ಆದರೆ ಪಹಣಿಯಲ್ಲಿ ಹೆಚ್ಚು ತೋರಿಸುತ್ತಿರುತ್ತದೆ. ಆದರೆ ರೈತರು ನಿಜವಾಗಿ ತಮ್ಮ ಜಮೀನು ಎಷ್ಟು ಎಕರೆ ಹೊಂದಿದೆ ಎಂಬುದು ಗೊತ್ತಿರುವುದಿಲ್ಲ. ಅಂತಹ ರೈತರು ಯಾರ ಸಹಾಯವೂ ಇಲ್ಲದೆ,  ಯಾರ ಬಳಿಯೂ ಹೋಗದೆ ತಮ್ಮ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲೇ ಜಮೀನಿನ ಅಳತೆ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Measure your land in mobile ರೈತರು ತಮ್ಮ ಜಮೀನು ಮೊಬೈಲ್ ನಲ್ಲೇ ಅಳತೆ ಮಾಡಲೇನು ಮಾಡಬೇಕು?

ರೈತರು ತಮ್ಮ ಜಮೀನಿನ ಅಳತೆ ಮಾಡಲು ಈ

https://play.google.com/store/apps/details?id=com.ksrsac.sslr&hl=en_IN

ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.  ಲಿಂಕ್ ಕ್ಲಿಕ್ ಮಾಡಿದ ಮೇಲೆ ರೈತರಿಗೆ  Dishaank  ಆ್ಯಪ್ ಓಪನ್ ಆಗುತ್ತದೆ. ಆಗ ರೈತರಿಗೆ ಕಾಣುವ  install ಕ್ಲಿಕ್ ಮಾಡಬೇಕಾಗುತ್ತದೆ. ಆಗ ನಿಮ್ಮ ಮೊಬೈಲಿಗೆ ದಿಶಾಂಕ್ ಆ್ಯಪ್ ಇನಸ್ಟಾಲ್ ಆಗುತ್ತದೆ. ನಂತರ ನೀವು ಭಾಷೆ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನೀವು ಕನ್ನಡ ಭಾಷೆ ಆಯ್ಕೆ ಮಾಡಿಕೊಂಡ ನಂತರ ನಮ್ಮ ಹೆಸರು, ಮೇಲ್ ಐಡಿ ನಮೂದಿಸಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ ಓಟಿಪಿ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲಿಗೆ ಓಟಿಪಿ ಬರುವುದು. ನಿಮ್ಮ ಮೊಬೈಲಿಗೆ ಬಂದ ಓಟಿಪಿಯನ್ನು ಹಾಕಿ ನೋಂದಾಯಿಸಿ ಮೇಲೆ ಕ್ಲಿಕ್ ಮಾಡಬೇಕು.

ಆಗ ನೀವು ಯಾವ ಸರ್ವೆ ನಂಬರಿನಲ್ಲಿ ನಿಂತಿದ್ದೀರೋ  ಅಲ್ಲಿ ಪೈಂಟ್ ಕಾಣುತ್ತದೆ.  ನೀವು ನಿಮ್ಮ ಮೊಬೈಲ್ ನಲ್ಲಿ ಝೂಮ್ ಮಾಡಿ ವೀಕ್ಷಿಸಿದರೆ ನೀವು ಎಲ್ಲಿ ನಿಂತಿದ್ದೀರಿ ಎಂಬುದನ್ನು ತೋರಿಸುತ್ತದೆ. ನಿಮಗೆ ಕಾಣುವ ಪೈಂಟ್ ಮೇಲ ಒತ್ತಬೇಕು.  ನಂತರ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಆಗ ನಿಮಗೆ ಸರ್ವೆ ನಂಬರ್, ಗ್ರಾಮದ ಹೆಸರು, ಹೋಬಳಿ, ನಿಮ್ಮ ತಾಲೂಕು ಹಾಗೂ ಜಿಲ್ಲೆಯ ಹೆಸರು ತೋರಿಸುತ್ತದೆ.

ಇದನ್ನೂ ಓದಿ : ನಿಮ್ಮ ಸರ್ವೆ ನಂಬರ್ ಅಕ್ಕಪಕ್ಕದ ಯಾವ ಮಾಲಿಕರಿಗೆ ಎಷ್ಟು ಜಮೀನಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಅಲ್ಲಿ ಕಾಣುವ ಹೆಚ್ಚಿನ ವಿವರಗಳು ಮೇಲೆ ಒತ್ತಿದರೆ ಸಾಕು, ಇನ್ನೊಂದು ಪೇಜ್ ಓಪನ್ ಆಗುತ್ತದೆ. ಸರ್ನೋಕ್ ಸಂಖ್ಯೆಯಲ್ಲಿ ಸ್ಟಾರ್ ಆಯ್ಕೆ ಮಾಡಿದ ನಂತರ ನಿಮಗೆ ಹಿಸ್ಸಾ ನಂಬರ್ ಗೊತ್ತಿದ್ದರೆ ಹಿಸ್ಸಾ ನಂಬರ್ ಸೆಲೆಕ್ಟ್ ಮಾಡಬೇಕು. ನಿಮಗೆ ಹಿಸ್ಸಾ ನಿಂಬರ್ ಗೊತ್ತಿಲ್ಲದಿದ್ದರೆ ಅಲ್ಲಿ ಕಾಣುವ ಹಿಸ್ಸಾ ನಂಬರ್ ಗಳನ್ನು ಒಂದೊಂದಾಗಿ ಚೆಕ್ ಮಾಡಿಕೊಳ್ಳಬಹುದು. ಹಿಸ್ಸಾ ನಂಬರ್ ಸೆಲೆಕ್ಟ್ ಮಾಡಿಕೊಂಡ ನಂತರ ಮಾಲಿಕರು ಮೇಲೆ ಒತ್ತಬೇಕು. ಆಗ ನೀವು ನಿಂತಿರುವ ಜಮೀನಿನ ಮಾಲಿಕರು ಯಾರಿದ್ದಾರೆ? ಆ ಜಮೀನು ಎಷ್ಟು ಎಕರೆ ಹೊಂದಿಗೆ ಎಂಬುದು ಸಹ ಕಾಣುತ್ತದೆ.

ಜಮೀನು ಅಳತೆ ಮಾಡುವುದು ಹೇಗೆ?

ರೈತರು ಜಮೀನು ಅಳತೆ ಮಾಡಲು ಅಲ್ಲಿ ಕಾಣುವ ಮಾಪನ ಸಾಧನಗಳು ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದಾದಮೇಲೆ ನಿಮಗೆ ಮೂರು ಆಯ್ಕೆಗಳು ಕಾಣಿಸುತ್ತದೆ. ಅಲ್ಲೇ ಕಾಣುವ ಲೈನ್ ಸೆಲೆಕ್ಟ್ ಮಾಡಿಕೊಂಡನಂತರ ನೀವು ನಿಂತಿರುವ ಜಮೀನು ನಾಲ್ಕು ಭಾಗಗಳು ಕಾಣುತ್ತಿರುತ್ತವೆ.

ಅದರಲ್ಲಿ ಒಂದು ಮೂಲೆಯಲ್ಲಿ ಕ್ಲಿಕ್ ಮಾಡಬೇಕು. ಅದೇ ರೀತಿ ಇನ್ನೊಂದು ಮೂಲೆ ಹೀಗೆ ನಾಲ್ಕು ಮೂಲೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಒಂದೊಂದು ಮೂಲೆ ಆಯ್ಕೆ ಮಾಡಿಕೊಳ್ಳುವಾಗ ಉದ್ದವೆಷ್ಟಿದೆ ಎಂಬುದನ್ನು ಚೆಕ್ ಮಾಡಬಹುದು. ಮೀಟರ್, ಫೀಟರ್, ಕಿಲೋ ಮೀಟರ್ ಹೀಗೆ ಮೂರು ಆಯ್ಕೆಗಳಿರುತ್ತವೆ. ಇದರಲ್ಲಿ ನೀವು ಯಾವುದಾರೊಂದನ್ನು ಆಯ್ಕೆ ಮಾಡಿಕೊಂಡು ಜಮೀನಿನ ಅಳತೆ ಮಾಡಬಹುದು.

ಜಮೀನಿನ ಅಳತೆ

ಒಂದು ಎಕರೆಗೆ = 43560 ಸ್ಕ್ವೆರ್ ಫೀಟ್, ಅಥವಾ ಒಂದು ಎಕರೆ = 4046.4046.86 ಸ್ಕ್ವೈರ್ ಮೀಟರ್ ಆಗಿರುತ್ತದೆ.

Leave a Comment