ನಿಮ್ಮ ಜಮೀನಿನ ಸರ್ವೆ ಸ್ಕೆಚ್ ಮೊಬೈಲ್ ನಲ್ಲಿ ಹೀಗೆ ಪಡೆಯಿರಿ

Written by Ramlinganna

Published on:

Land Survey sketch : ರೈತರಿಗೆ ಗುಡ್ ನ್ಯೂಸ್, ಈಗ ರೈತರಿಗೆ ಜಮೀನಿನ ಎಲ್ಲಾ ದಾಖಲೆಗಳು ಮೊಬೈಲ್ ನಲ್ಲೇ ಸಿಗುತ್ತವೆ.

ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ ಇಂತಹ ಮಾಹಿತಿ ಪಡೆಯಿರಿ

ಹೌದು, ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಕೇವಲ ಒಂದೇ ನಿಮಿಷದಲ್ಲಿ ಸರ್ವೆ ಸ್ಕೆಚ್ ಮೊಬೈಲ್ ನಲ್ಲಿ ಪಡಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

Land Survey sketch  ಮೊಬೈಲ್ ನಲ್ಲಿ ಸರ್ವೆ ಸ್ಕೆಚ್ ಪಡೆಯುವುದು ಹೇಗೆ?

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಸರ್ವೆ ಸ್ಕೆಚ್ ಪಡೆಯಲು ಈ

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಡಿಜಿಟೈಸ್ಡ್ ಸರ್ವೆ ಸ್ಕೆಚ್ ಪೇಜ್ ಕಾಣಿಸುತ್ತದೆ. ಅಂದು ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಪೇಜ್ ತೆರೆದುಕೊಳ್ಳುತ್ತದೆ.

ಅಲ್ಲಿ  ಗ್ರಾಮವನ್ನು ಆಯ್ಕೆ ಮಾಡಲು ಕ್ಲಕ್ ಮಾಡಿ ಬಾಕ್ಸ್  ಆಯ್ಕೆ ಮಾಡಿಕೊಳ್ಳಬೇಕು.  ಅಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ಯಾವ ಸರ್ವೆ ನಂಬರಿನ ಸ್ಕೆಚ್ ನೋಡಬೇಕೆಂದುಕೊಂಡಿದ್ದೀರೋ ಆ ಸರ್ವೆ ನಂಬರ್ ನಮೂದಿಸಬೇಕು.

ಸರ್ವೆ ನಂಬರ್ ಹಾಕಿದ ನಂತರ ಸರ್ನಾಕ್ ನಲ್ಲಿ  ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಹಿಸ್ಸಾ ನಂಬರ್ ನಲ್ಲಿಯೂ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಹುಡುಕು ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಮಾಲಿಕರ ವಿವರಗಳು ಕಾಣಿಸುತ್ತವೆ. ಅಂದರೆ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿಯಾವ ಯಾವ ಜಮೀನಿನ ಮಾಲಿಕರು ಇದ್ದಾರೆ ಎಂಬ ಹೆಸರುಗಳು ಕಾಣಿಸುತ್ತವೆ.

ಅದರ ಕೆಳಗಡೆ ನಿಮಗೆ ನೀವ ನಮೂದಿಸಿದ ಸರ್ವೆ ನಂಬರಿನ ಸ್ಕೆಚ್ ಕಾಣಿಸುತ್ತದೆ. ನೀವು ನಮೂದಿಸಿದ ಸರ್ವೆ ನಂಬರಿನ ಸ್ಕೆಚ್ ಕಾಣಿಸುತ್ತದೆ.  ಜಮೀನಿನ ಮ್ಯಾಪ್  ಕಾಣಿಸುತ್ತದೆ. ಇದನ್ನು ನೀವು ವೀಕ್ಷಿಸಲು ಬಳಸಬಹದು.

ಇದನ್ನೂ ಓದಿ ನೀವು ನಿಂತಿರುವ ಸ್ಥಳ ಯಾವ ಸರ್ವೆ ನಂಬರಿನಲ್ಲಿದೆ? ಚೆಕ್ ಮಾಡಿ

ಗಮನಿಸಿ ಅಳತೆಗಳು ಸ್ಕೇಲ್  ಮಾಪನ  ಅನುಗುಣವಾಗಿರುವುದಿಲ್ಲ.(ಎಲ್ಲಾ ಅಳತೆಗಳು ಮೀಟರಗಳಲ್ಲಿವೆ) ಇದು ವೀಕ್ಷಣೆಯ ಉದ್ದೇಶಕ್ಕಾಗಿ ಮಾತ್ರವೇ ಹೊರತು ಕಾನೂನು ಉದ್ದೇಶಕ್ಕಾಗಿ ಅಲ್ಲ.  ಡಿಜಿಟೈಸ್ ಸ್ಕೆಚ್ ಅನ್ನು ಮುದ್ರಿಸಲು ಪ್ರಿಂಟ್ ಬಟನ್ ಬಳಸಿ ಪ್ರಿಂಟ್ ಪಡೆಯಬಹುದು.

View Sketch On Map  ವಿವ್ ಸ್ಕೆಚ್ ಆನ್ ಮ್ಯಾಪ್

View Sketch on Map ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮಗೆ ಮ್ಯಾಪ್ ಕಾಣಿಸುತ್ತದೆ.  ಅದರ ಅಕ್ಕಪಕ್ಕದ ಸರ್ವೆ ನಂಬರ್ ಗಳು ಸಹ ಕಾಣಿಸುತ್ತವೆ.

ಭೂ ಸುರಕ್ಷಾ ಯೋಜನೆ

ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಭೂ ಸುರಕ್ಷಾ ಯೋಜನೆಯೂ ಒಂದಾಗಿದೆ. ಈ ಯೋಜನೆಯ ರಾಜ್ಯದಾದ್ಯಂತ  ಲೋಕಾರ್ಪಣೆ ಆಗಿದೆ.

ಈ ಯೋಜನೆಗಳಡಿಯಲ್ಲಿ ಭೂ ದಾಖೆಲೆಗಳು ಡಿಜೀಟಲೀಕರಣ ಮಾಡಲಾಗುತ್ತದೆ. ಹಳೆಯ ದುಸ್ಥಿತಿಯಲ್ಲಿ ಇರುವ ಭೂ ದಾಖಲೆಗಳನ್ನು ಡಿಜಿಟಲ್  ಮಾದರಿಯಲ್ಲಿ ಸರಿಪಡಿಸುವುದೇ ಭೂ ಸುರಕ್ಷಾ ಯೋಜನೆ ಆಗಿದೆ. ದಾಖಲೆಗಳ ಕೊಠಡಿಯಲ್ಲಿ ಜನರಿಗೆಭೂ ದಾಖಲೆಗಳನ್ನುವಿತರಣೆ ಮಾಡುವ ಕೆಲಸ ಮಾಡಲಾಗುತ್ತದೆ.

ಏನಿದು ಭೂ ಸುರಕ್ಷಾ ಯೋಜನೆ?

ಹಳೆಯ ಶಿಥಿಲದಗೊಂಡ  ದಾಖಲೆಗಳನ್ನು ಶಾಸ್ವತವಾಗಿ  ಡಿಜಿಟಲ್ ರೂಪದಲ್ಲಿ ಉಳಿಸಿಕೊಳ್ಳಲು ನಕಲಿ ದಾಖಲೆಗಳ ಸೃಷ್ಟಿಯನ್ನು ತಡೆಗಟ್ಟಲು ಮತ್ತು ಅವುಗಳನ್ನು ಆನ್ಲೈನ್ ನಲ್ಲಿ ನಾಗರಿಕರಿಗೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಭೂ ಸುರಕ್ಷಾ ಯೋಜನೆಯನ್ನುಅನುಷ್ಠಾನಗೊಳಿಸಲಾಗಿದೆ.

ಭೂ ಸುರಕ್ಷಾ ಯೋಜನೆಯು ರಾಜ್ಯದ ಕಂದಾಯ ಇಲಾಖೆಯು ಕೈಗೊಂಡಿರುವ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆಯಡಿಸ್ವಾತಂತ್ರ್ಯ ಪೂರ್ವ ಮತ್ತು ನಂತರ ಭೂ ದಾಖಲೆಗಳು ಸಹ ಡಿಜೀಟಲೀಕರಣ ಮಾಡಿ ರಕ್ಷಿಸಲು ಈ ಯೋಜನೆ ಜಾರಿಗೆ ತರಲಾಗಿದೆ. ರೈತರು ಭೂ ದಾಖಲೆ ಪಡೆಯಲು ಕಚೇರಿಗೆ ಅಲೆಯಬೇಕಿಲ್ಲ. ನೇರವಾಗಿ ಜನರಿಗೆ ಸಿಗುತ್ತದೆ. ಸ್ವಾತಂತ್ರ್ಯ ಪೂರ್ವದ ಅವಧಿಯ ದಾಖಲೆಗಳ್ನು ಇಂಡೆಕ್ಸಿಂಗ್, ಕ್ಯಾಲಾಗಿಂಗ್, ಸ್ಕ್ಯಾನಿಂಗ್ ಹಾಗೂ ಅಪಲೋಡಿಂಗ್ ಮಾಡಿ ಗಣಕೀಕರಣಗೊಳಿಸಲಾಗುತ್ತಿದೆ.

Leave a Comment