Kisan credit card amount : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ರೈತರಿಗೆ ಬಂಪರ್ ಸುದ್ದಿ ದೊರೆತಿದೆ.
ಹೌದು, ಶನಿವಾರ 3035-26 ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿಯನ್ನು 3 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಯವರೆಗೆ ಹೆಚ್ಚಿಸಲಾಗುವುದು ಎಂದು ಘೋಷಿಸಿದ್ದಾರೆ.
7.7 ಕೋಟಿ ರೈತರು, ಮೀನುಗಾರರು ಹಾಗೂ ಹೈನುಗಾರರಿಗೆ ಅಲ್ಪಾವಧಿ ಸಾಲವನ್ನು ಒದಗಿಸುವುದು.ಇದರ ಉದ್ದೇಶವನ್ನು ಕೆಸಿಸಿ ಮೂಲಕ ಪಡೆದ ಸಾಲಗಳಿಗೆ ಮಾರ್ಪಡಿಸಿದ ಬಡ್ಡಿ ಸಬ್ಸೆನ್ಶನ್ ಯೋಜನೆಯಡಿ ಸಾಲದ ಮಿತಿಯನ್ನು 3 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಯರೆಗೆ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.
Kisan credit card amount ಏನಿದು ಕಿಸಾನ್ ಕ್ರೆಡಿಟ್ ಕಾರ್ಡ್ ಎಂದರೇನು?
ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ರೈತರ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ. 1998 ರಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿದೆ. ಕೆಸಿಸಿ ಯೋಜನೆಯು ರೈತರಿಗೆ ಸಾಲ ಪ್ರಕ್ರಿಯೆಯನ್ನು ಸರಳಗೊಳಿಸುವ ಗುರಿ ಹೊಂದಿದೆ. ಈ ಯೋಜನೆಯಡಿಯಲ್ಲಿ ಕೃಷಿ ಚಟುವಟಿಕೆಗಳಿಗೆ ಶೇ. 4 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಕೆಸಿಸಿ ಯೋಜನೆಯ ಲಾಭ ಪಡೆಯಲು 18 ವರ್ಷ ತುಂಬಿರಬೇಕು. ಐದು ವರ್ಷಗಳ ಅವಧಿಗೆ 3 ಲಕ್ಷ ರೂಪಾಯಿಯವರೆಗೆ ಸಾಲ ಸಿಗುತ್ತಿತ್ತು. ಇದೀಗಐದು ಲಕ್ಷ ರೂಪಾಯಿಯವರೆಗೆ ಏರಿಕೆ ಮಾಡಲಾಗುವುದು. ಇನ್ನೂ ಕಿಸಾನ್ ಕ್ರೆಡಿಟ್ ಕಾರ್ಡ್ ಸಿಂಧುತ್ವವು ಐದು ವರ್ಷಗಳಾಗಿವೆ.
ಕಿಸಾನ್ ಕ್ರೆಡಿಟ್ ಸಾಲದ ಉಪಯೋಗಗಳು?
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದಿಂದ ರೈತರು ತಮ್ಮ ಕೃಷಿ ಅಗತ್ಯಗಳಿಗಾಗಿ ಇದು ಸಕಾಲಿಕ ಸಾಲಗಳನ್ನು ನೀಡುತ್ತದೆ. ಭಾರತ ಸರ್ಕಾರ ಈ ಯೋಜನೆಯನ್ನು ಪರಿಚಯಿಸಿದ್ದು, ಇದು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸುಲಭ ಮತ್ತು ಕೈಗೆಟಕುವ ಸಾಲವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಬೆಳೆ ಕೃಷಿ ಬೀಜಗಳು ಮತ್ತು ರಸಗೊಬ್ಬರಗಳಂತಹ ಒಳಹರಿವಿನ ಖರೀದಿ ಮತ್ತು ಸುಗ್ಗಿಯ ನಂತರದ ಚಟುವಟಿಕೆಗಳಿಗೆ ಸಂಬಂಧಿಸಿದ ವೆಚ್ಚಗಳಿಗೆ ಇದು ಸಹಾಯವಾಗಲಿದೆ. ಅದರಲ್ಲೂ ಈ ಬಾರಿ ಸಾಲದ ಮಿತಿಯನ್ನು ಏರಿಕೆ ಮಾಡುವ ಮೂಲಕ ಸರ್ಕಾರ ರೈತರಿಗೆ ನೆರವಾಗಲಿದೆ. ಇದರಿಂದಾಗಿ ಈ ಬಾರಿ ಬಜೆಟ್ ರೈತರಿಗೆ ಸಂತಸವನ್ನು ತಂದಿದೆ ಎನ್ನಬಹುದು. ಇನ್ನೂ ೀ ಸಾಲಗಳು ರೈತರ ಅಗತ್ಯತೆಗಳಿಗೆ ಅನುಗುಣವಾಗಿ ಇರುತ್ತವೆ. ಬೆಳೆ, ಜಮೀನಿನ ಗಾತ್ರ, ರೈತರ ಚಟುವಟಿಕೆಗಳಿಗೆ ಅನುಗುಣವಾಗಿ ಈ ಸಲದ ಮೊತ್ತಗಳು ಬದಲಾಗುತ್ತವೆ.
ರೈತರಿಗಾಗಿ ಧನ್ ಧಾನ್ಯ ಕೃಷಿ ಯೋಜನೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ಧನ್ ಧಾನ್ಯ ಕೃಷಿ ಯೋಜನೆಯನ್ನು ಘೋಷಿಸಿದ್ದಾರೆ. ಇದು ದೇಶದ 1 ಕೋಟಿಗೂ ಹೆಚ್ಚು ರೈತರಿಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಶನಿವಾರ 2025-26ರ ಕೇಂದ್ರ ಬಜೆಟ್ ಮಂಡಿಸುತ್ತಾ, ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಯು ಕಡಿಮೆ ಇಳುವರಿ, ಆಧುನಿಕ ಬೆಳೆ ತೀವ್ರತೆ ಮತ್ತು ಸರಾಸರಿಗಿಂತ ಕಡಿಮೆ ಸಾಲದ ನಿಯತಾಂಕಗಳನ್ನು ಹೊಂದಿರುವ 100 ಜಿಲ್ಲೆಗಳನ್ನು ಒಳಗೊಳ್ಳುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ನೀವು ಖರೀದಿಸುವ ಜಮೀನಿನ ಮಾಲೀಕರಾರು? ಇಲ್ಲೇ ಚೆಕ್ ಮಾಡಿ
ರಾಜ್ಯಗಳ ಸಹಭಾಗಿತ್ವದಲ್ಲಿ ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಯನ್ನು ಕೈಗೊಳ್ಳಲಿದೆ. ಅಸ್ತಿತ್ವದಲ್ಲಿರುವ ಯೋಜನೆಗಳು ಮತ್ತು ವಿಶೇಷ ಕ್ರಮಗಳು ಒಮ್ಮುಖದ ಮೂಲಕ, ಈ ಕಾರ್ಯಕ್ರಮವು ಕಡಿಮೆ ಉತ್ಪಾದಕತೆ, ಮಧ್ಯಮ ಬೆಳೆ ತೀವ್ರತೆ ಮತ್ತು ಸರಾಸರಿಗಿಂತ ಕಡಿಮೆ ಸಾಲದ ನಿಯತಾಂಕಗಳನ್ನು ಹೊಂದಿರುವ 100 ಜಿಲ್ಲೆಗಳನ್ನು ಒಳಗೊಳ್ಳುತ್ತದೆ. ಇದು ಸಾಂಸ್ಕೃತಿಕ ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.