IPL 2024 schedule : ಬಹುನಿರೀಕ್ಷಿತ ಐಪಿಎಲ್ 2024 ನೇ ಸಾಲಿನ ಟ್ವೆಂಟಿ-20 ಕ್ರಿಕೇಟ್ ಟೂರ್ನಿಯ ವೇಳಾ ಪಟ್ಟಿ ಬಿಡುಗಡೆಯಾಗಿದೆ. ಹೌದು, ಮಾರ್ಚ್ 22 ರಂದು ಉದ್ಘಾಟನಾ ಪಂದ್ಯ ನಡೆಯಲಿದೆ. ಮೊದಲ ದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಾಲಿ ಚಾಂಪಿಯನ್ ಚೆನೈ ಸೂಪರ್ ಕಿಂಗ್ಸ್ ತಂಡದ ಸವಾಲನ್ನು ಎದುರಿಸಲಿದೆ. ಈ ಪಂದ್ಯವು ಚೆನೈ ನಲ್ಲಿ ನಡೆಯಲಿದೆ.
ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮೊದಲ 17 ದಿನಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆಗೊಳಿಸಲಾಗಿದೆ. ಈ ಅವಧಿಯಲ್ಲಿ 1ದ ದಿನಗಳ ಕಾಲ 10 ನಗರಗಳಲ್ಲಿ ಒಟ್ಟು 21 ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ Bara parihara bidugade: ಈ ರೈತರಿಗೆ 8.90 ಕೋಟಿ ಬರ ಪರಿಹಾರ ಜಮೆ
ಸಾರ್ವತ್ರಿಕ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಬಿಡುಗಡೆಗೊಳಿಸಿದ ನಂತರ ಉಳಿದ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
ಐಪಿಎಲ್ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿದ್ದು, ತಲಾ ಐದು ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಲೀಗ್ ಹಂತದಲ್ಲಿ ಎಲ್ಲಾ ತಂಡಗಳು 14 ಪಂದ್ಯಗಳನ್ನು ಆಡಲಿವೆ.
IPL 2024 schedule 2024 ಐಪಿಎಲ್ ವೇಳಾಪಟ್ಟಿ ಇಲ್ಲಿದೆ.
ಐಪಿಎಲ್ ಮೊದಲ ದಿನ, ಎರಡನೇ ದಿನ, ಮೂರನೇ ದಿನ ಹಾಗೂ ಹತ್ತು ದಿನಗಳ ಕಾಲ ಯಾವ ಯಾವ ತಂಡಗಳು ಯಾವ ತಂಡದ ವಿರುದ್ಧ ಆಡಲಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ
ಐಪಿಎಲ್ ವೇಳಾಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಕ್ರಿಕೇಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ
ಹಬ್ಬದ ವಾತಾವರಣ ಮನೆಮಾಡಿದೆ. ಹೌದು, ದೇಶದ ಮೂಲೆ ಮೂಲೆಗಳಲ್ಲಿಯೂ ಐಪಿಎಲ್ ನದ್ದೆ ಚರ್ಚೆಯಾಗಿರುತ್ತದೆ. ಪ್ರತಿಯೊಂದು ಮನೆಯಲ್ಲಿ ಕ್ರಿಕೇಟ್ ನೋಡದ ಜನ ಕಾಣುವುದಿಲ್ಲ. ಬೇಸಿಗೆ ಕಾಲ ಅದರಲ್ಲೂ ಮಕ್ಕಳಿಗೆ ಶಾಲೆಯ ರಜೆ ಇರುತ್ತದೆ. ಕುಟುಂಬ ಸಮೇತವಾಗಿ ಐಪಿಎಲ್ ಮ್ಯಾಚ್ ಗಳನ್ನು ನೋಡಿ ಆನಂದಪಡುತ್ತಾರೆ.
ಈ ಸಲ ಯಾವ ತಂಡ ಕಪ್ ಗೆಲ್ಲಲಿದೆ?
ತಮಗೆಲ್ಲಾ ಗೊತ್ತಿದ್ದ ಹಾಗೆ ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್.ಸಿ.ಬಿ ತಂಡ ಒಮ್ಮೆಯೂ ಕಪ್ ಗೆದ್ದಿಲ್ಲ. ಆದರೆ ಸಲ ಬೆಂಗಳೂರು ತಂಡ ಕಪ್ ಗೆಲ್ಲಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೂ ಈ ಐಪಿಎಲ್ ಕ್ರಿಕೇಟ್ ಟೂರ್ನಿಯಲ್ಲಿ ಯಾವ ತಂಡ ಯಾವಾಗ ತಿರುಗಿ ಬೀಳುತ್ತದೆ. ಯಾವ ತಂಡ ಸೋಲುತ್ತದೆ ಈಗಲೇ ಹೇಳಲಿಕ್ಕಾಗುವುದಿಲ್ಲ. ಕರ್ನಾಟಕದ ಜನತೆಯಂತೆ ಆರ್.ಸಿಬಿ. ತಂಡ ಗೆಲ್ಲಬೇಕೆಂದು ಬಯಸುತ್ತಾರೆ. ಆದರೆ ಪಂದ್ಯ ನಡೆಯುವ ಆಟದ ದಿಕ್ಕೇ ಬದಲಾಗಿರುತ್ತದೆ. ಹಾಗಾಗಿ ಐಪಿಎಲ್ ಟೂರ್ನಿಯಲ್ಲಿ ಯಾವ ತಂಡ ಕಪ್ ಎತ್ತಿ ಹಿಡಿಯುತ್ತೋ ಸಮಯವೇ ಹೇಳುತ್ತದೆ.