Inam land act amendment ರೈತರಿಗೆ ನೆರವಾಗುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರವು ಜಮೀನು ಹಕ್ಕು (ಇನಾಂ ಜಮೀನು) ಕಾಯ್ದೆಗೆ ತಿದ್ದುಪಡಿ ತರಲು ಚಿಂತನೆ ನಡೆಸಲಾಗಿದೆ ಎಂದು ಎಂದು ಕಂದಾಯ ಸಚಿವ ಆರ್. ಅಶೋಕ (R. Ashok) ತಿಳಿಸಿದ್ದಾರೆ.
ಹೌದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇನಾಂ ಭೂಮಿ (inam land amendment act) ಯನ್ನು ಉಳಿಮೆ ಮಾಡುತ್ತಿರುವ ರೈತರ ಹೆಸರಿಗೆ ಜಮೀನು ಹಕ್ಕು ನೀಡಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ನೇಮಿಸಲಾಗಿದ್ದು ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್. ವಸ್ತ್ರದ ಸಮಿತಿಯ ಶಿಫಾರಸ್ಸು ಪರಿಗಣಿಸಿ ಕಾಯ್ದೆ ತಿದ್ದುಪಡಿ ತರಲಾಗುವುದು ಈ ಕಾಯ್ದೆ ತಿದ್ದುಪಡಿಯಿಂದ ರಾಜ್ಯದ ಸುಮಾರು 70 ಸಾವಿರ ಎಕರೆ ಜಮೀನು ಲಕ್ಷಾಂತರ ರೈತರ ಹೆಸರಿನಲ್ಲಿ ದಾಖಲಾಗಲಿದೆ ಎಂದು ಕಂದಾಯ ಸಚಿವರು ತಿಳಿಸಿದ್ದಾರೆ.
ಹಿಂದೆ ರಾಜ-ಮಹಾರಾಜರು, ಬ್ರಿಟಿಷ್ ಕಾಲದಲ್ಲಿ ಬಳವಳಿ (ಇನಾಂ) ರೂಪದಲ್ಲಿ ಜಮೀನು ನೀಡುವ ಪದ್ಧತಿಯಿತ್ತು. ಸುಮಾರು 100, 200 ಎಕರೆಯವರೆಗೂ ಭೂಮಿಯನ್ನು ಬಳುವಳಿಯಾಗಿ ನೀಡುತ್ತಿದ್ದರು. ಆದರೆ ಭೂಮಿ ಪಡೆದವರೆಲ್ಲರೂ ಉಳುಮೆ ಮಾಡಲಾಗದೆ ರೈತರಿಗೆ ನೀಡುತ್ತಿದ್ದರು. ಇನಾಂ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದ ರೈತರಿಗೆ ಪಹಣಿ ಕೊಡುವ ಕೆಲಸ ಆಗುತ್ತಿತ್ತು. ಇನಾಂ ಕಾಯ್ದೆ ರದ್ದಾದಾಗ ತಿಳಿವಳಿಕೆ ಕೊರತೆಯಿಂದಾಗಿ ಲಕ್ಷಾಂತರ ರೈತರು ಅರ್ಜಿಯನ್ನು ಸಲ್ಲಿಸಿಲ್ಲ. ಹಾಗಾಗಿ ಜಮೀನು ಹಾಗೆಯೇ ಉಳಿದುಕೊಂಡಿದೆ.
ಇದನ್ನೂ ಓದಿ ನಿಮ್ಮ ಜಮೀನಿನ ಭೂ ಮಾಲಿಕರ ವಿವರ ಮೊಬೈಲ್ ನಲ್ಲೇ ಚೆಕ್ ಮಾಡಿ
ರೈಆದರೆ ರೈತರಿಗೆ ನೀಡಲಾದ ಭೂಮಿಯ ಹಕ್ಕನ್ನು ಆಯಾ ರೈತರಿಗೆ ನೀಡಬೇಕೆಂದು ಬಹಳ ವರ್ಷಗಳಿಂದ ಬೇಡಿಕೆಯಿದ್ದುದ್ದರಿಂದ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಇನಾಂ ಕಾಯ್ದೆಗೆ ತಿದ್ದುಪಡಿ ತರಲು ಚಿಂತನೆ ನಡೆದಿದೆ ಎಂದಿದ್ದಾರೆ.
Inam land act amendment ಮಾಹಿತಿಯ ಕೊರತೆಯಿಂದ ಅರ್ಜಿಯಲ್ಲಿ ವಿಳಂಬ
ರಾಜ್ಯದಲ್ಲಿ ಈಗಾಗಲೇ 12 ವಿವಿಧ ಇನಾಂ ರದ್ದತಿ ಕಾಯ್ದೆಗಳಿವೆ. ಇನಾಂ ಜಮೀನುಗಳ ಹಕ್ಕನ್ನು ನೀಡುವಂತೆ ಸಕ್ಷಮ ಪ್ರಾಧಿಕಾರಗಳಾದ ಜಿಲ್ಲಾಧಿಕಾರಿ, ಉಪ ನೋಂದಣಾಧಿಕಾರಿ, ತಹಶೀಲ್ದಾರ ಮತ್ತು ಭೂ ನ್ಯಾಯ ಮಂಡಳಿಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಇನಾಂ ಭೂಮಿ ಹಕ್ಕು ಕುರಿತು ಅರ್ಜಿ ಸಲ್ಲಿಸಲು ಈ ಹಿಂದೆ ಅವಕಾಶ ನೀಡಲಾಗಿತ್ತಾದರೂ, ಮಾಹಿತಿ ಕೊರತೆಯಿಂದಾಗಿ ಅನೇಕ ರೈತರು ಅರ್ಜಿ ಸಲ್ಲಿಸಿರಲಿಲ್ಲ. ಇನಾಂ ಜಮೀನು ತಮ್ಮ ಸ್ವಾಧೀನಕ್ಕೆ ನೀಡುವಂತೆ ಅರ್ಜಿ ಸಲ್ಲಿಸದೆ ಹಾಗೆಯೇ ಉಳಿದುಕೊಂಡಿದೆ. ಇದರಿಂದ ರೈತರಿಗೆ ಬ್ಯಾಂಕುಗಳಲ್ಲಿ ಸಾಲ ದೊರೆಯುತ್ತಿಲ್ಲ. ಅಲ್ಲದೆ ಭೂಮಿಯ ಮೇಲೆ ಯಾವುದೇ ಅಧಿಕೃತ ಹಕ್ಕು ಇಲ್ಲದೆ ಶತಮಾನಗಳಿಂದ ದುಡಿಯುತ್ತಿದ್ದರೂ ಅಧಿಕೃತ ಪಹಣ ಪತ್ರ ಇಲ್ಲದಿರುವುದರಿಂದ ಜಮೀನಿನ ಮೇಲೆ ಯಾವುದೇ ರೀತಿಯ ಹಕ್ಕಿಲ್ಲದೆ ಜೀವನ ನಡೆಸುತ್ತಿದ್ದಾರೆ. ಈಗ ರೈತರಿಗೆ ಮತ್ತೆರಡು ವರ್ಷ ಕಾಲಾವಕಾಶ ನೀಡಿ ಆಯಾ ರೈತರ ಹೆಸರಿಗೆ ಜಮೀನು ಹಕ್ಕು ನೀಡಲು ಶಿಫಾರಸ್ಸು ಮಾಡಿದೆ. .