ಜಮೀನಿನ ಪೋಡಿ11 ಇ ನಕ್ಷೆ Mobileನಲ್ಲಿ ಹೀಗೆ ಪಡೆಯಿರಿ

Written by By: janajagran

Updated on:

download land 11e map ರೈತರಿಗಿಲ್ಲಿದೆ ಸಂತಸದ ಸುದ್ದಿ. ಇನ್ನುಮುಂದೆ ರೈತರು ಮನೆಯಲ್ಲೇ ಕುಳಿತು ಮೊಬೈಲ್ ನಲ್ಲೆ‌ ಜಮೀನಿನ ಪೋಡಿ, 11 ಇ ನಕ್ಷೆ ಹಾಗೂ ಭೂ ಪರಿವರ್ತನೆ ಸ್ಕೆಚ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಪಡೆಯಬಹುದು.

ಹೌದು ರೈತರು ಜಮೀನಿಗೆ ಸಂಬಂದಿಸಿದ ದಾಖಲೆಗಳನ್ನು ಪಡೆಯಲು ಕಚೇರಿಗಳಿಗೆ ಅಲೆದಾಡಬೇಕಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲೆ ಜಮೀನುಗಳ ನಕ್ಷೆ ಡೌನ್ಲೋಡ್ ಮಾಡಿಕೊಳ್ಳಬಹುದು. ಅಥವಾ ಆನ್ಲೈನ್‌ ನಲ್ಲೇ‌ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಬಹುದು.

ಸಾರ್ವಜನಿಕರು ತಮ್ಮ ಜಮೀನಿಗೆ ಸಂಬಂಧಿಸಿದ 11ಇ ನಕ್ಷೆ, ಪೋಡಿ, ಭೂ ಪರಿವರ್ತನೆ ಸ್ಕೆಚ್ , ಹದ್ದುಬಸ್ತು ಮತ್ತು ಇತರ ಜಮೀನಿನ ನಕ್ಷೆಗಳನ್ನು ಆನ್ಲೈನ್ ನಲ್ಲೆ ಪಡೆದುಕೊಳ್ಳಬಹುದು ಎಂದು ಸರ್ವೆಮಾಪನ ಮತ್ತು ಭೂ ದಾಖಲೆಗಳ ಆಯುಕ್ತ ಮುನಿಷ್ ಮೌದ್ಗಿಲ್ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು 11ಇ ನಕ್ಷೆ, ಪೋಡಿ, ಭೂ ಪರಿವರ್ತನೆ ಸ್ಕೆಚ್ , ಹದ್ದುಬಸ್ತು ಮತ್ತು ಇತರ ಜಮೀನಿನ ನಕ್ಷೆಗಳಿಗೆ ಅರ್ಜಿ‌ ಸಲ್ಲಿಸಿದ ನಾಗರಿಕರು ಈ

http://103.138.196.154/service19/Report/ApplicationDetails

 ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೋಜಿ ಕಂದಾಯ ಇಲಾಖೆಯ ಒಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ Survey Documents (pay and download original Survey documents) ಮುಂದಿನ ಬಾಕ್ಸ್ click Here  ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ರೈತರು ಮೊಬೈಲ್ ನಂಬರ್ ನಮೂದಿಸಿ ಸೆಂಡ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಮೊಬೈಲಿಗೆ ಒಂದು ಓಟಿಪಿ ಬರುತ್ತದೆ.ಅದನ್ನು ನಮೂದಿಸಿ ಯಾವ ದಾಖಲೆ ಡೌನ್ಲೋಡ್ ಮಾಡಿಕೊಳ್ಳಬೇಕೆಂದುಕೊಳ್ಳುವಿರೋ ಅದನ್ನು ನಮೂದಿಸಿ ಆನ್ಲೈನ್ನಲ್ಲಿ ಹಣ ಪಾವತಿಸಿ ಡೌನ್ಲೋಡ್ ಮಾಡಿಕೊಳ್ಳಬಹುದು.

ವೆಬ್ಸೈಟ್ ಮೂಲಕ ತಮ್ಮ‌ ಅರ್ಜಿಯ ಸ್ಥಿತಿಗತಿಯನ್ನು ಸಹ ವೀಕ್ಷಿಸಬಹುದು. ಅರ್ಜಿ ಸ್ವೀಕಾರಗೊಂಡು ಸರ್ವೆ ಸಿಬ್ನಂದಿಬತಮ್ಮ ಜಮೀನಿಗೆ ಬಂದು ಸಂಬಂಧಿಸಿದ ಮಾಪನಾ ಕಾರ್ಯ  ಮುಗಿಸಿ ನಕ್ಷೆ ಅನುಮೋದಿಸಿದ ತಕ್ಷಣ ಇದೇ ವೆಬ್ಸೈಟ್ ನಲ್ಲಿ ಆ ನಕ್ಷೆಗಳನ್ನು ರೈತರು ಮುದ್ರಣ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಿದಾಗ ರೈತರು ನಾಗರಿಕರು ಹಣ ಪಾವತಿಸಿರುವುದರಿಂದ ಪ್ರಿಂಟ್ ಪಡೆದುಕೊಳ್ಳುವಾಗ ರೈತರು ಹೆಚ್ಚುವರಿ ಹಣ ಪಡೆದುಕೊಳ್ಳಬೇಕಾಗಿಲ್ಲ. ಇಷ್ಟೇ ಅಲ್ಲ ರೈತರು ದಾಖಲೆಗಳ ಪ್ರಿಂಟ್‌ ಪಡೆಯಲು ಕಚೇರಿಗಳಿಗೂ ಅಲೆಯುವ ಅಗತ್ಯವಿಲ್ಲ‌ ಎಂದು‌ ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಜಮೀನುಗಳ ಸರ್ವೆ ನಂಬರ್ ಸಹಿತ ಬಂಡಿದಾರಿ, ಹಳ್ಳಕೊಳ್ಳಗಳ ಮ್ಯಾಪ್ ಬೇಕೆ? ಇಲ್ಲಿದೆ ಮಾಹಿತಿ

ಭೂ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳುವಾಗ ರೈತರು ಯಾವ ದಾಖಲೆ ಪಡೆಯಬೇಂದುಕೊಳ್ಳುತ್ತಾರೋ ಆ ಅರ್ಜಿಯ ನಂಬರ್, ಮೊಬೈಲ್ ಸಂಖ್ಯೆ, ಸರ್ವೆ ನಂಬರ್, ಗ್ರಾಮ, ಹೋಬಳಿ, ತಾಲೂಕು, ಜಿಲ್ಲೆ ನಮೂದಿಸಿ ದಾಖಲೆಗಳನ್ಮು ಪಡೆದುಕೊಳ್ಳಬಹುದು.

download land 11e map ಜಮೀನಿನ ಪೋಡಿ ಎಂದರೇನು?

ಜಮೀನಿನ ಪೋಡಿ ಎಂದರೆ ಜಮೀನಿನ ಭಾಗ‌ ಮಾಡುವುದು ಎಂದರ್ಥ.  ಜಮೀನಿನ ಒಂದೇ ಸರ್ವೆ ನಂಬರಿನಲ್ಲಿ ಇಬ್ಬರು ಅಥವಾ ಇಬ್ಬರಿಗಿಂತ ಹೆಚ್ಚು ಜನರ ಹೆಸರಿದ್ದರೆ ಅದನ್ನು ಅಳಿಸಿ ಪ್ರತ್ಯೇಕವಾಗಿ ಅವರ ಹೆಸರಿಗೆ ದಾಖಲೆ ಮಾಡುವುದಕ್ಕೆ ಪೋಡಿ ಎನ್ನುತ್ತಾರೆ.

ಜಮೀನಿನ ಪೋಡಿಗೆ ಅರ್ಜಿ ಸಲ್ಲಿಸಿದ ನಂತರ ಅರ್ಜಿ ಪ್ರಕ್ರಿಯೆಯ ಮಾಹಿತಿಯನ್ನುಈಗ ಆನ್ಲೈನ್ ನಲ್ಲೇಯ ನೋಡಬಹುದು. ಪೋಡಿ ಪ್ರಕ್ರಿಯೆ ಪೂರ್ಣಗೊಂಡಿದೆಯೋ ಅಥವಾ ಪೋಡಿ ಪ್ರಕ್ರೀಯೆಯಲ್ಲಿ ಯಾವುದಾದರೂ ಲೋಪದೋಶಗಳಿವೆ ಎಂಬುದನ್ನುಆನ್ಲೈನ್ ನಲ್ಲ್ಲೇನೋಡಲು ಅನಕೂಲ ಮಾಡಿಕೊಡಲಾಗಿದೆ. ಇದಕ್ಕಿಂತ ಮುಂಚಿತವಾಗಿ ರೈತರು ಕಚೇರಿಗಳಿಗೆ ಅಲೆದಾಡಬೇಕಾಗುತ್ತಿತ್ತು. ಸಮಯ ಹಾಗೂ ಹಣವೂ ವ್ಯರ್ಥವಾಗುತ್ತಿತ್ತು. ರೈತರ ಈ ಸಮಸ್ಯೆಯನ್ನು ಮನಗಂಡು ಈಗ ಆನ್ಲೈನ್ ವ್ಯವಸ್ಥೆ ಮಾಡಲಾಗಿದೆ.

ಹದ್ದುಬಸ್ತು ಎಂದರೇನು?

ಪೋಡಿಯಾದ ಜಮೀನು ಅಥವಾ ಜಾಗ ಬೇರೆಯವರಿಂದ ಒತ್ತುವರಿಯಾಗಿದ್ದರೆ ಅಳತೆ ಮಾಡಿ ನಿಖರ ಗಡಿ ಗುರುತಿಸಿ ಬಂದೋಬಸ್ತ್ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಹದ್ದುಬಸ್ತು ಎನ್ನುವರು.

ಹದ್ದುಬಸ್ತಿಗೆ ಅರ್ಜಿ ಸಲ್ಲಿಸಿದರೆ ಭೂ ಮಾಪಕರು ಅರ್ಜಿ ಸಲ್ಲಿಸಿದ ರೈತರ ಜಮೀನಿಗೆ ಬಂದು ಅಅಳಕೆ ಕಾರ್ಯ ಮಾಡುತ್ತಾರೆ. ರೈತರ ಸಮ್ಮುಖದಲ್ಲಿಯೇ ಅಳತೆ ಮಾಡಿ ಗಡಿಭಾಗಗಳನ್ನು ಪತ್ತೆ ಹಚ್ಚಿ ಜಮೀನಿಗೆ ಗಡಿ ಭಾಗಗಗಳನ್ನು ಗುರುತು ಮಾಡುವ ಪ್ರಕ್ರಿಯೆಯನ್ನು ಹದ್ದುಬಸ್ತು ಎನ್ನುವರು. ಹದ್ದು ಬಸ್ತಿಗಾಗಿ ಅರ್ಜಿ ಸಲ್ಲಿಸಿದ ನಂತರ ಯಾವಾಗ ಭೂ ಮಾಪಕರು ಬರುತ್ತಾರೆ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಈಗ ರೈತರು ಆನ್ಲೈನ್ ನಲ್ಲೇ ಪಡೆಯಬಹುದು.

Leave a Comment