ಜಮೀನಿನ ಖಾತಾ ಮೊಬೈಲ್ ನಲ್ಲಿ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Written by By: janajagran

Published on:

How to download khata  ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ಖಾತಾ ಮೊಬೈಲ್ ನಲ್ಲೇ ಪಡೆದುಕೊಳ್ಳಬಹುದು. ರೈತರ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲಿ ಯಾರ ಸಹಾಯವೂ ಇಲ್ಲದೆ ಪಡೆದುಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ  ಮಾಹಿತಿ.

ರೈತರಿಗೆ ಪಹಣಿ, ಮುಟೇಷನ್ ಬಗ್ಗೆ ಗೊತ್ತಿರುತ್ತದೆ. ಹಾಗೂ ಅದರ ದಾಖಲೆಗಳು ಇರುತ್ತವೆ. ಪಹಣಿಯ ನಂಬರ್ ಗೊತ್ತಿರುತ್ತದೆ. ಆದರೆ ಖಾತಾ ಸಂಖ್ಯೆ ಬಹುತೇಕ ರೈತರಿಗೆ ಗೊತ್ತಿರುವುದಿಲ್ಲ. ಖಾತಾ ಅಥವಾ ಪಟ್ಟಾ ಎಂದು ಕರೆಯಲ್ಪಡುವ ಖಾತೆಯ ಪ್ರತಿ ಬಹಳಷ್ಟು ರೈತರಲ್ಲಿ ಇರುವುದಿಲ್ಲ. ಖಾತೆಯ ನಂಬರ್ ಮೊಬೈಲ್ ನಲ್ಲಿಯೇ ಪರಿಶೀಲಿಸುವುದು ಹಾಗೂ ಖಾತೆಯ ಪ್ರತಿ ಪಡೆಯುವುದು ಹೇಗೆ ಎಂಬುದರ  ಸಂಪೂರ್ಣ ಮಾಹಿತಿ ಇಲ್ಲಿದೆ.

How to download khata  ಜಮೀನಿನ ಖಾತಾ ಮೊಬೈಲ್ ನಲ್ಲಿ ಪಡೆಯಲು ರೈತರು ಏನು ಮಾಡಬೇಕು?

ಪಹಣಿಯಂತೆ ಖಾತೆಯಲ್ಲಿಯೂ ಸಹ ಸರ್ವೆ ನಂಬರ್, ರೈತರ ಹೆಸರು, ಜಮೀನಿನ ವಿಸ್ತೀರ್ಣ, ಆಕಾರ, ಕರ ಅಂದರೆ ಟ್ಯಾಕ್ಸ್ ಎಷ್ಟು ಕಟ್ಟಬೇಕೆಂಬ ಸಂಪೂರ್ಣ ಮಾಹಿತಿ ಇರುತ್ತದೆ. ನಿಮ್ಮ ಜಮೀನಿನ ಖಾತೆ ಅಥವಾ ಪಟ್ಟಾ ಪುಸ್ತಕದ ಪ್ರತಿ ನೋಡಲು ಈ

 https://landrecords.karnataka.gov.in/service2/RTC.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆದ ಒಂದು ಪೇಜ್ ಓಪನ್ ಆಗುತ್ತದೆ. ಮೇಲ್ಗಡೆ Khata Extract ಮೇಲೆ ಕ್ಲಿಕ್ ಮಾಡಬೇಕು.  ನಿಮಗೆ ಖಾತಾ ನಂಬರ್ ಗೊತ್ತಿದ್ದರೆ search by kahta number ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಖಾತಾ ನಂಬರ್ ನಮೂದಿಸಿ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಖಾತಾ ಪ್ರತಿ ಓಪನ್ ಆಗುತ್ತದೆ. ಇಲ್ಲಿ ನಿಮ್ಮ ಹೆಸರು, ಸರ್ವೆ ನಂಬರ್, ಹಿಸ್ಸಾನ ನಂಬರ್, ಜಮೀನಿನ ವಿಸ್ತೀರ್ಣ, ಆಕಾರ, ಟ್ಯಾಕ್ಸ್ ಮಾಹಿತಿ ಕಾಣುತ್ತದೆ.

ಒಂದು ವೇಳೆ ನಿಮಗೆ ಖಾತಾ ಸಂಖ್ಯೆ ಗೊತ್ತಿಲ್ಲದಿದ್ದರೆ search by survey number ಮೇಲೆ ಕ್ಲಿಕ್ ಮಾಡಬೇಕು. ನಂತರ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ನಮೂದಿಸಿ ಗೋ ಮೇಲೆ ಕ್ಲಿಕ್ ಮಾಡಬೇಕು. ನಂತರ select sumoc ನಲ್ಲಿ * ಸೆಲೆಕ್ಟ್ ಮಾಡಿದ ನಂತರ ಹಿಸ್ಸಾ ನಂಬರ್ ಸೆಲೆಕ್ಟ್ ಮಾಡಿಕೊಳ್ಳಬೇಕು.

ಇದನ್ನೂ ಓದಿ : ನಿಮ್ಮ ಜಮೀನನ ಮ್ಯಾಪ್ ಮೊಬೈಲ್ ನಲ್ಲಿ ಹೀಗೆ ಡೌನ್ಲೋಡ್ ಮಾಡಿ

ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿದಾಗ ರೈತರ ಜಮೀನಿನ ಸರ್ವೆ ನಂಬರ್, ರೈತರ ಹೆಸರು, ವಿಸ್ತೀರ್ಣ ಹಾಗೂ ಖಾತೆ ನಂಬರ್ ಕಾಣಿಸುತ್ತದೆ. ಈ ಖಾತೆ ನಂಬರ್ ನೀವು ನೆನಪಿಟ್ಟುಕೊಳ್ಳಬೇಕು. ಅಥವಾ ಬರೆದಿಟ್ಟುಕೊಂಡ ನಂತರ ಈ

https://landrecords.karnataka.gov.in/service64/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಓಪನ್ ಆಗುವ ಪೇಜ್ ನಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಹಾಗೂ ಖಾತಾ ನಂಬರ್ ನಮೂದಿಸಿದ ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಜಮೀನಿನ ಖಾತಾ ಪ್ರತಿ ಓಪನ್ ಆಗುತ್ತದೆ. ಅಲ್ಲಿ ಪ್ರಿವಿವ್ ಮೇಲೆ ಕ್ಲಿಕ್ ಮಾಡಬೇಕು.  ಇಲ್ಲಿ ಸರ್ವೆ ನಂಬರ್, ರೈತರ ಹೆಸರು, ಒಟ್ಟು ಜಮೀನಿನ ವಿಸ್ತೀರ್ಣ, ಆಕಾರ, ಒಟ್ಟು ಕರ ಎಂಬ ಮಾಹಿತಿ ಕಾಣುತ್ತದೆ. 15 ರೂಪಾಯಿ ಪಾವತಿಸಿ ಪ್ರಿಂಟ್ ಸಹ ತೆಗೆದಕೊಳ್ಳಬಹುದು. ರೈತರಿಗೆ ಇದು ಉಪಯುಕ್ತ ಮಾಹಿತಿಯಾಗಿದೆ.

Leave a Comment