Pmkisan scheme beneficiary list ಪಿಎಂ ಕಿಸಾನ್ ಹಣ ಇನ್ನೂ ಮುಂದೆ ಯಾವ ರೈತರಿಗೆ ಜಮೆಯಾಗುತ್ತದೆ? ಯಾವ ರೈತರಿಗೆ ಜಮೆಯಾಗುವುದಿಲ್ಲ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ರೈತರು ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರುವ ಫೋನ್ ನಲ್ಲೇ ಯಾವ ರೈತರಿಗೆ ಜಮೆಯಾಗುತ್ತದೆ? ಯಾವ ರೈತರಿಗೆ ಜಮೆಯಾಗುವುದಿಲ್ಲ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಜಮೆಗಾಗಿ ಕಾಯುತ್ತಿರುವ ರೈತರು ಈಗ ತಮ್ಮ ಬಳಿಯಿರುವ ಫೋನ್ ನಲ್ಲೇ ತಮಗೆ ಜಮೆಯಾಗುತ್ತೋ ಇಲ್ಲವೋ ಎಂಬುದನ್ನು ಚೆಕ್ ಮಾಡಬುದು. ನೀವು ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿದ್ದೀರೋ ಅನರ್ಹರಾಗಿದ್ದೀರೋ ಎಂಬುದೆನ್ನೆಲ್ಲಾ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
Pmkisan scheme beneficiary list ಯಾರಿಗೆ ಪಿಎಂ ಕಿಸಾನ್ ಹಣ ಜಮೆ ಯಾರಿಗೆ ಜಮೆಯಿಲ್ಲ? ಹೀಗೆ ಚೆಕ್ ಮಾಡಿ
ಪಿಎಂ ಕಿಸಾನ್ ಯೋಜನೆಗೆ ನೀವು ಅರ್ಹರೋ ಅನರ್ಹರೋ ಚೆಕ್ ಮಾಡಲು ಈ
https://pmkisan.gov.in/VillageDashboard_Portal.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಓಪನ್ ಆಗುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ವಿಲೇಜ್ ಡ್ಯಾಶಬೋರ್ಡ್ ಪೇಜ್ ಲ್ಲಿ ಕರ್ನಾಟಕ ಆಯ್ಕೆ ಮಾಡಿಕೊಳ್ಳಬೇಕು. ನಂತರ ಜಿಲ್ಲೆ, ತಾಲೂಕು, ಗ್ರಾಮ ಆಯ್ಕೆ ಮಾಡಿಕೊಂಡು ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ನಂತರ ಆಧಾರ್ ಅಥೆಂಟಿಕೇಶನ್ ಸ್ಟೇಟಸ್ ಪೇಜ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಸಕ್ಸೆಸಫುಲಿ ಅಥೆಂಟಿಕೇಟೆಡ್ ಕೆಳಗಡೆ ಇರುವ ರೈತರ ಹೆಸರುಗಳು ಪಿಎಂ ಕಿಸಾನ್ ಯೋಜನೆಗೆ ಅರ್ಹ ರೈತರಾಗಿದ್ದಾರೆ.
ಟೋಟಲ್ ಇನಎಲಿಜಿಬಲ್ ಕೆಳಗಡೆ ಇರುವ ಹೆಸರುಗಳೆಲ್ಲಾ ಪಿಎಂ ಕಿಸಾನ್ ಯೋಜನೆಗೆ ಅನರ್ಹರಾಗಿದ್ದಾರೆ. ಈ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗುವುದಿಲ್ಲ.
ಅಥೆಂಟಿಕೇಶನ್ ಅಂಡರ್ ಪ್ರೊಸೆಸ್ ಕೆಳಗಡೆ ಇರುವ ರೈತರ ಹೆಸರು ಇನ್ನೂ ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿಲ್ಲ. ಅತೀ ಶೀಘ್ರದಲ್ಲಿ ಈ ರೈತರ ದಾಖಲಗಳನ್ನು ಪರಿಶೀಲಿಸಿ ಅರ್ಹ ಮತ್ತು ಅನರ್ಹ ರೈತರ ಪಟ್ಟಿಗೆ ಸೇರಿಸಲಾಗುವುದು. ಯಾವ ರೈತರ ದಾಖಲೆಗಳು ಸರಿಯಾಗಿಯೋ ಅವರು ಅರ್ಹ ರೈತರ ಪಟ್ಟಿಗೆ ಸೇರಿಸಲಾಗುವುದು. ಯಾವ ರೈತರ ದಾಖಲೆಗಳು ಒಂದಕ್ಕೊಂದು ಹೋಂದಾಣಿಕೆಯಾಗುವುದಿಲ್ಲವೋ ಅಂತಹ ರೈತರನ್ನು ಅನರ್ಹರ ಪಟ್ಟಿಯಲ್ಲಿ ಸೇರಿಸಲಾಗುವುದು.
ಇದನ್ನೂ ಓದಿ : ಆಧಾರ್ ನಂಬರ್ ಹಾಕಿ ಇಲ್ಲೇ ಫ್ರೂಟ್ಸ್ ಐಡಿ ಚೆಕ್ ಮಾಡಿ
ಅಥೆಂಟಿಕೇಶನ್ ಫೆಲ್ಡ್ ಪಟ್ಟಿಯಲ್ಲಿರುವ ರೈತರ ಹೆಸರು ನೋಂದಣಿ ಮಾಡಿಸುವಾಗ ದಾಖಲೆಗಳು ಸರಿಯಿಲ್ಲದ ಕಾರಣ ಅಥವಾ ಟೆಕ್ನಿಕಲಿ ಸಮಸ್ಯೆಯಿಂದಾಗಿ ಪಿಎಂ ಕಿಸಾನ್ ಯೋಜನೆಗೆ ನೋಂದಣಿಯಾಗಿಲ್ಲ.
ಯಾವ ರೈತರು ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿರುತ್ತಾರೆ?
ಪಿಎಂ ಕಿಸಾನ್ ಯೋಜನೆಯನ್ನು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಆರ್ಥಿಕ ನೆರವಾಗುವ ಉದ್ದೇಶದಿಂದಾಗಿ ಜಾರಿಗೆ ತರಲಾಗಿದೆ. ಐದು ಎಕರೆಯೊಳಗೆ ಜಮೀನಿರುವ ರೈತರು ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿರುತ್ತಾರೆ. ಇದರೊಂದಿಗೆ ಆ ಕುಟುಂಬದಲ್ಲಿ ಅಂದರೆ ಪತಿ, ಪತ್ನಿ ಅಥವಾ ಮಕ್ಕಳು ಸರ್ಕಾರಿ ನೌಕರರಾಗಿರಬಾರದು. ಆ ಕುಟುಂಬದಲ್ಲಿ ಪತಿ, ಪತ್ನಿ ಅಥವಾ ಮಕ್ಕಳು ಪಿಂಚಣಿ ಪಡೆಯುತ್ತಿರಬಾರದು. ಇದರೊಂದಿಗೆ ಆ ಕುಟುಂಬದಲ್ಲಿ ತೆರಿಗೆ ಪಾವತಿಸುವವರಾಗಿರಬಾರದು. ಇದನ್ನು ಹೊರತು ಪಡಿಸಿ ಉಳಿದ ರೈತರೆಲ್ಲರೂ ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿರುತ್ತಾರೆ.
ಪಿಎಂ ಕಿಸಾನ್ ಯೋಜನೆಯ 3 ಕಂತುಗಳಲ್ಲಿ ತಲಾ 2 ಸಾವಿರ ರೂಪಾಯಿಯಂತೆ ಪ್ರತಿ ನಾಲ್ಕು ತಿಂಗಳಿಗೆ ಜಮೆ ಮಾಡಲಾಗುವುದು. ಒಂದು ವರ್ಷದಲ್ಲಿ ಸಮಾನ ಮೂರು ಕಂತುಗಳಲ್ಲಿ ಆರು ಸಾವಿರ ರೂಪಾಯಿ ಜಮೆ ಮಾಡಲಾಗುವುದು.