ಕೊನೆಗೂ ಜಮೆಯಾಯಿತು18ನೇ ಕಂತಿನ ಗೃಹಲಕ್ಷ್ಮೀ ಹಣ

Written by Ramlinganna

Published on:

Gruhalakshmi 18th installment credited :  ರಾಜ್ಯದ ಮಹಿಳೆಯರ ಖಾತೆಗೆ ಕೊನೆಗೆ ಎರಡೂ ತಿಂಗಳ ಗೃಹಲಕ್ಷ್ಮೀ ಹಣ ಜಮೆಯಾಯಿತು. ಹೌದು, ಕಳೆದ ವಾರ 17ನೇ ಕಂತಿನ ಹಣ ಜಮೆಯಾಗಿತ್ತು. ಸೋಮವಾರ 18ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗಿದೆ. ಹಾಗಾದರೆ ಯಾವ ಯಾವ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಯಿತು. ಯಾರ ಯಾರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಯಿತು ಎಂಬುದನ್ನು ಫಲಾನುಭವಿಗಳು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆನೋಡಿ ಮಾಹಿತಿ.

Gruhalakshmi 18th installment credited ನಿಮಗೆಷ್ಟು ಕಂತು ಗೃಹಲಕ್ಷ್ಮೀ ಹಣ ಜಮೆಯಾಗಲಿದೆ? ಮೊಬೈಲ್ ನಲ್ಲಿ ಚೆಕ್ ಮಾಡಿ

ಸರ್ಕಾರದ ವಿವಿಧ ಯೋಜನೆಗಳಿಂದ ತಮಗೆಷ್ಟು ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಗೂಗಲ್ ಪ್ಲೇ ಸ್ಟೋರ್ ನಲ್ಲಿ

DBT Karnataka  ಎಂದು ಟೈಪ್ ಮಾಡಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಅಥವಾ ಈ

https://play.google.com/store/apps/details?id=com.dbtkarnataka

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಡಿಬಿಟಿ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ ಇನಸ್ಟಾಲ್ ಮೇಲೆ ಕ್ಲಿಕ್ ಮಾಡಿದ ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು.  ನಂತರ ಅಲೋ ಡಿಬಿಟಿ ಕೆಳಗಡೆ ಅಲೋ ಮೇಲೆ ಕ್ಲಿಕ್ ಮಾಡಬೇಕು.  ಮತ್ತೊಂದು ಸಲ ಅಲೋ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಬೇಕು. ನಂತರ ಅಲ್ಲಿ ಕೆಳಗಡೆ ಕಾಣಿಸುವ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು.

ಆಗ ನಿಮ್ಮ ಆಧಾರ್ ಕಾರ್ಡಿಗೆ ನೋಂದಣಿಯಾಗಿರುವ ಮೊಬೈಲ್ ನಂಬರಿಗೆ  ಓಟಿಪಿ ಬರುತ್ತದೆ. ಆ ಓಟಿಪಿ ನಮೂದಿಸಿದ ನಂತರ ನೀವು ಪಿನ್ ಕ್ರಿಯೇಟ್ ಮಾಡಿಕೊಳ್ಳಬೇಕು. ಮೇಲ್ಗಡೆ ನಮೂದಿಸಿ ಪಿನ್ ನ್ನು ಮತ್ತೇ ಕೆಳಗಡೆ ಹಾಕಬೇಕು. ಈ ಪಿನ್ ಅನ್ನು ನೀವು ನೆನಪಿಟ್ಟುಕೊಳ್ಳಬೇಕು. ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು..ಆಗ ನಿಮ್ಮ ಫೋಟೋ ಕಾಣಿಸುತ್ತದೆ.

ಗೃಹಲಕ್ಷ್ಮೀ ಫಲಾನುಭವಿಗಳ ಅರ್ಹತೆ

ಗೃಹಲಕ್ಷ್ಮೀ ಯೋಜನೆಯ ಹಣ ಪಡೆಯಲು ಯಾರು ಯಾರು ಅರ್ಹತೆ ಪಡೆದಿದ್ದಾರೆ ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗಲು  ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಹೊಂದಿರಬೇಕು.  ಈ ರೇಶನ್ ಕಾರ್ಡ್ ನಲ್ಲಿ  ಮಹಿಳೆಯ ಹೆಸರು ಕುಟುಂಬದ ಯಜಮಾನಿ ಎಂದು ಬರೆದಿರಬೇಕು.

ಇದನ್ನೂ ಓದಿ ನಿಮ್ಮೂರಿನ ನಕ್ಷೆ ಮೊಬೈಲ್ ನಲ್ಲಿ ಹೀಗೆ ಡೌನ್ಲೋಡ್ ಮಾಡಿ

ಆದಾಯ ತೆರಿಗೆ ಪಾವತಿ ಮಾಡುವವರ ಕುಟುಂಬದವರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಗುವುದಿಲ್ಲ.  ಸರ್ಕಾರಿ ಉದ್ಯೋಗಿಗಳಿಗೆ, ಪೆನ್ಶನ್ ಪಡೆಯುವವರಿಗೆ ಯೋಜನೆಯ ಲಾಭ ಸಿಗುವುದಿಲ್ಲ. ಜಿಎಸ್.ಟಿ ಪಾವತಿ ಮಾಡುತ್ತಿರುವ ಮಹಿಳೆಯರಿಗೂ ಯೋಜನೆಯ ಲಾಭ ಸಿಗುವುದಿಲ್ಲ.

ನಿಮಗೆ ಇಲ್ಲಿಯವರೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗುತ್ತಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ನೀವೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡಿಬಿಟಿ ಕರ್ನಾಟಕ ಎಂದು ಟೈಪ್ ಮಾಡಬೇಕು. ನಂತರ ಆ ಆಪ್  ಇನಸ್ಟಾಲ್ ಮಾಡಿ ನಿಮಗೆ ಎಸ್ಟು ಕಂತುಗಳು ಜಮೆಯಾಗಿದೆ ಎಂಬುದನ್ನುಚೆಕ್ ಮಾಡಬಹುದು.

ಡಿಬಿಟಿ ಆ್ಯಪ್ ಲಿಂಕ್ ನ್ನು ಡಿಸ್ಕ್ರಿಪಶನ್ ಬಾಕ್ಸ್ ನಲ್ಲಿ ನೀಡಲಾಗಿದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ಡಿಬಿಟಿ ಆ್ಯಪ್ ಇನಸ್ಟಾಲ್  ಮಾಡಿಕೊಂಡು ಡಿಬಿಟಿ ಸ್ಟೇಟಸ್ ಚೆಕ್ ಮಾಡಬಹುದು. ಹೌದು ಕೇವಲ ಒಂದೇ ನಿಮಿಷದಲ್ಲಿ ಫಲಾನುಭವಿಗಳು ತಮ್ಮ ಬಳಿ ಇರುವ ಮೊಬೈಲ್ ನಲ್ಲಿ ಗೃಹಲಕ್ಷ್ಮೀ ಯೋಜನೆಯ ಸ್ಟೇಟಸ್ ಚೆಕ್ ಮಾಡಬಹುದು.

Leave a Comment