Grampanchayat number : ರೈತರು, ಸಾರ್ವಜನಿಕರು ಈಗ ತಮ್ಮ ಮೊಬೈಲ್ ನಲ್ಲೇ ಗ್ರಾಮ ಪಂಚಾಯತಿಯ ಮಾಹಿತಿಯನ್ನು ಪಡೆದುಕೊಳ್ಳಬಹುದು. ಹೌದು, ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಎಲ್ಲಾ ಮಾಹಿತಿ ಪಡೆಯಬಹುದು.
ನಮ್ಮ ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ ಇಂತಹ ಮಾಹಿತಿ ಪಡೆಯಿರಿ
ಹೌದು, ಕೇವಲ ಒಂದೇ ನಿಮಿಶದಲ್ಲಿ ಗ್ರಾಮ ಪಂಚಾಯತಿಯ ಮಾಹಿತಿಯನ್ನು ಸಾರ್ವಜನಿಕರು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
ಗ್ರಾಮ ಪಂಚಾಯತಿ ಮಾಹಿತಿ ಪಡೆಯಲು ಈಗ ಪಂಚಾಯತಿ ಕಚೇರಿಗೆ ಹೋಗಬೇಕಿಲ್ಲ, ನೀವು ನಿಮ್ಮ ಗ್ರಾಮ ಪಂಚಾಯತಿಯ ಸದಸ್ಯರಿಗೆ ಕರೆ ಮಾಡಬೇಕಿಲ್ಲ. ಗ್ರಾಪಂ ಕಾರ್ಯದರ್ಶಿ, ಅಥವಾ ಲೆಕ್ಕಾಧಿಕಾರಿಗಳಿಗೂ ಮಾಹಿತಿ ಕೇಳಬೇಕಿಲ್ಲ. ಮೊಬೈಲ್ ನಲ್ಲೇ ಎಲ್ಲಾ ಮಾಹಿತಿ ಸಿಗಲಿದೆ. ಹೌದು ಕೆಳಗೆ ನೀಡಲಾದ ಮೊಬೈಲ್ ನಂಬರನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಂಡರೆ ಸಾಕು, ಕೆಳಗೆ ನೀಡಲಾದ ಮಾಹಿತಿಯಂತೆ ಅತೀ ಸುಲಭವಾಗಿ ಚೆಕ್ ಮಾಡಬಹುದು.
ಗ್ರಾಮೀಣ ಜನರು ತಮ್ಮ ಮನೆಯಲ್ಲಿಯೇ ಕುಳಿತು ಗ್ರಾಮ ಪಂಚಾಯತಿಗಳ ವಿವಿಧ ಮಾಹಿತಿ ಸೇವೆಗಳಿಗೆ ಅರ್ಜಿ ಹಾಗೂ ಕುಂದುಕೊರತೆಗಳನ್ನು ದಾಖಲಿಸಲು ಪಂಚಮಿತ್ರ ಪೋರ್ಟಲ್ ನ್ನು ಆರಂಭಿಸಲಾಗಿದೆ. ಇದರೊಂದಿಗೆ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಸೇವೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಹಾಗೂ ಅರ್ಜಿ ಸಲ್ಲಿಸಿ ನಂತರ ಅರ್ಜಿಗಳ ಸ್ಟೇಟಸ್ ಪರಿಶೀಲಿಸಲು ಪಂಚಮಿತ್ರ ವ್ಯಾಟ್ಸ್ ಆ್ಯಪ್ ಚಾಟ್ ಆರಂಭಿಸಲಾಗಿದೆ.
ಇದನ್ನೂ ಓದಿ : ನಿಮ್ಮ ಜಮೀನಿನ ಮೇಲೆ ಸಾಲ ಇದೆಯೇ? ಇಲ್ಲೇ ಚೆಕ್ ಮಾಡಿ
ಹೌದು, ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ದಾಖಲಿಸಲು, ದೇಶದಲ್ಲಿ ಪ್ರಪ್ರಥಮ ಬಾರಿಗೆ ಪಂಚಮಿತ್ರ ವ್ಯಾಟ್ಸ್ ಆ್ಯಪ್ ಚಾಟ್ ಆರಂಭಿಸಲಾಗಿದೆ.
ಏನಿದು ಪಂಚಮಿತ್ರ ಪೋರ್ಟಲ್?
ಪಂಚಮಿತ್ರ ಪೋರ್ಟಲ್ ಮೂಲಕ ಗ್ರಾಮ ಪಂಚಾಯತ್ ಗಳ ಮಾಹಿತಿಗಳಾದ ಚುನಾಯಿತ ಜನಪ್ರತಿನಿಧಿಗಳ ವಿವರ, ಸಿಬ್ಬಂದಿ ವಿವರ, ಪೂರ್ಣಗೊಂಡ ಗ್ರಾಮ ಪಂಚಾಯತ್ ಸಭೆಗಳ ನಡವಳಿ ಮುಂಬರುವ ಸಭೆಗಳ ಮಾಹಿತಿ, ಆದಾಯ ಸಂಗ್ರಹ ವಿವರಗಳು, ಸೇವೆಗಳ ವಿವರಗಳು, ಸ್ವ ಸಹಾಯ ಗುಂಪಿನ ವಿವರಗಳು, ಸೇರಿದಂತೆ ಇನ್ನಿುತರ ವಿವರಗಳನ್ನುಪಡೆಯಬಹುದು.
Grampanchayat number ಇಲ್ಲಿದೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅಭಿವೃದ್ಧಿಪಡಿಸಿರುವ ಮಹತ್ವದ ಪಂಚಮಿತ್ರ ಎಂಬ ವ್ಯಾಟ್ಸ್ ಆ್ಯಪ್ ಚಾಟ್ ನಂಬರ್ 8277506000 ಆಗಿುತ್ತದೆ. ಈ ನಂಬರ್ ನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಂಡು ವ್ಯಾಟ್ಸ್ ಆ್ಯಪ್ ಚಾಟ್ ಮಾಡಬಹುದು.
ವ್ಯಾಟ್ಸ್ ಆ್ಯಪ್ ನಲ್ಲಿ ಚಾಟ್ ಹೇಗೆ ಮಾಡಬೇಕು?
ನಿಮ್ಮಮೊಬೈಲ್ ನಲ್ಲಿ ಪಂಚಮಿತ್ರದ ಇಲಾಖೆಯ ವ್ಯಾಟ್ಸ್ ಆ್ಯಪ್ ಚಾಟ್ ನಂಬರ್ 8277506000 ಅನ್ನು ಸೇವ್ ಮಾಡಿಕೊಂಡು ಚಾಟ್ ಆರಂಭಿಸಿದರೆ ಮೊದಲಿಗೆ ಭಾಷೆ ಕೇಳುತ್ತದೆ. ಅಲ್ಲಿ ನೀವು ಕನ್ನಡ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಂತರ ನಿಮ್ಮ ಹೆಸರು, ವಿಳಾಸ, ಮೊಬೈಲ್ ನಂಬರ್ ಮಾಹಿತಿ ನೀಡಿ ಲಾಗಿನ್ ಆಗಬೇಕು. ನಂತರ ತಾನಾಗಿಯೇ ಕೆಲ ಆಯ್ಕೆಗಳು ಆರಂಭವಾಗುತ್ತಾ ಸಾಗುತ್ತದೆ. ಕ್ರಮ ಸಂಖ್ಯೆಗಳನ್ನು ನಮೂದಿಸುವ ಮೂಲಕ ಜಿಲ್ಲೆ, ತಾಲೂಕು, ಹಾಗೂ ಗ್ರಾಮ ಆಯ್ಕೆ ಮಾಡಿಕೊಂಡು ನೀವು ಬಯಸುವ ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಂಡು ಅಲ್ಲಿನ ಚುನಾಯಿತ ಪ್ರತಿನಿಧಿಗಳು ಸಿಬ್ಬಂದಿಯ ಮಾಹಿತಿ ಪಡೆಯಬಹುದು.
ನೀವು ಯಾವುದರ ಕುರಿತು ತಿಳಿದುಕೊಳ್ಳಬೇಕೆಂದುಕೊಂಡಿದ್ದೀರೋ ಅದನ್ನು ಸರಿಯಾಗಿ ನಮೂದಿಸಬೇಕಾಗುತ್ತದೆ. ಒಂದು ವೇಳೆ ನೀವು ತಪ್ಪಾಗಿ ನಮೂದಿಸಿದರೆ ಹಿಂದೆ ಹೋಗುವ ಆಯ್ಕೆ ಸಹ ಇರುತ್ತದೆ. ಇಲ್ಲಿ ಹಿಂದಿನ ಮೆನುವಿಗೆ ಹೋಗಿ ನೀವು ಕೇಳಲಿಚ್ಚಿಸುವ ಮಾಹಿತಿಯನ್ನು ಪಡೆದುಕೊಳ್ಳಬಹುದು.