Grama panchayat Panchamitra ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನದಲ್ಲಿರುವ ಗ್ರಾಮ ಪಂಚಾಯತಿಗಳಲ್ಲಿ ಗ್ರಾಪಂ ಸದಸ್ಯರು, ಫಲಾನುಭವಿಗಳು, ಕಾಮಗಾರಿಗಳು, ಆಸ್ತಿ ತೆರಿಗೆ ಸೇರಿದಂತೆ ಮತ್ತಿತರ ಮಾಹಿತಿಯನ್ನು ಸಾರ್ವಜನಿಕರಿಗೆ ಆನ್ಲೈನ್ ನಲ್ಲಿಯೇ ಒದಗಿಸುವುದಕ್ಕಾಗಿ ಪಂಚತಂತ್ರ ತಂತ್ರಾಂಶ ಆರಂಭಿಸಲಾಗಿದೆ.
ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ ನಿಮ್ಮೂರಿನ ಮಾಹಿತಿ ತಿಳಿಯಿರಿ
Grama panchayat Panchamitra ಪಂಚಮಿತ್ರದಲ್ಲಿ ಅಡಗಿದೆ ಗ್ರಾಪಂನ ಸರ್ವ ಮಾಹಿತಿ
ಗ್ರಾಮದ ಜನರು ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ಈ ವರ್ಷ ಪಾವತಿಸಿದ ತೆರಿಗೆ ಎಷ್ಟು ಇನ್ನೂ ಎಷ್ಟು ತೆರಿಗೆ ಪಾವತಿಸಬೇಕಾಗಿದೆ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ನಿಮ್ಮ ಆಸ್ತಿ ಈ ಸ್ವತ್ತಿನಲ್ಲಿ ನೋಂದಣಿಯಾಗಿದೆಯೇ ಎಂಬುದನ್ನು ನೋಡಬಹುದು. ಹಾಗೂ ಸರ್ಕಾರದಿಂದ ಸಿಗುವ ಇಂದಿರಾ ಅವಾಸ್ ಯೋಜನೆ, ಆಶ್ರಯ ಯೋಜನೆಯಡಿ ಯಾರ್ಯಾರಿಗೆ ಮನೆ ಮಂಜೂರಾಗಿದೆ ಎಂಬ ಫಲಾನುಭವಿಗಳ ಪಟ್ಟಿಯನ್ನು ಪಂಚತಂತ್ರ ತಂತ್ರಾಂಶದಲ್ಲಿ ನೋಡಬಹುದು. ಹೌದು, ಇದಕ್ಕಾಗಿ ನೀವು ಯಾರಿಗೂ ಕೇಳಬೇಕಿಲ್ಲ. ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ನೋಡಬಹುದು.
ನೀವು
ಪಂಚತ್ರಂತ್ರದಂತೆ
https://panchatantra.karnataka.gov.in/USER_MODULE/userLogin/loadPanchamitra
ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಂಚಮಿತ್ರ ವೆಬ್ ಪೇಜ್ ತೆರೆಯಲ್ಪಡುತ್ತದೆ. ಅಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. . ನಂತರ ನಿಮ್ಮ ತಾಲೂಕು ಆಯ್ಕೆ ಮಾಡಬೇಕು. ಇದಾದ ನಂಂಂ ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಳ್ಳಬೇಕು.. ಅಲ್ಲಿ ನಿಮ್ಮ ಗ್ರಾಮ ಪಂಚಾಯತ್ ಹೆಸರು ಆಯ್ಕೆ ಮಾಡಬೇಕು. ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ ಗ್ರಾಮ ಪಂಚಾಯತ್ ಸಂಬಂಧಿಸಿದ ಮಾಹಿತಿಗಳು ಕಾಣಿಸುತ್ತವೆ. ಯಾವು ಮಾಹಿತಿ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಅದರ ಮೇಲೆ ಕ್ಲಿಕ್ ಮಾಡಿ ಮಾಹಿತಿ ಚೆಕ್ ಮಾಡಬಹುದು
ಗ್ರಾಮ ಪಂಚಾಯತ ಪಂಚತಂತ್ರ ತಂತ್ರಾಂಶದಲ್ಲಿ ಅಭಿವೃದ್ಧಿಪಡಿಸಿ ಈಗ ಬದಲಾದ ವ್ಯವಸ್ಥೆ ಹಾಗೂ ತಂತ್ರಜ್ಞಾನಕ್ಕೆ ತಕ್ಕಂತೆ ಇಲಾಖೆಯ ಅಗತ್ಯತೆಗಳಿಗೆ ಅನುಗುಣವಾಗಿ ಪಂಚತ್ರತಂತ್ರದ ಎರಡನೇ ಅವತರಣಿಕೆ ಪಂಚತ್ರಂತ್ರ 2.0 ಅಭಿವೃದ್ಧಿಪಡಿಸಲಾಗುತ್ತಿದೆ. ಈಗ ಹಳೆಯ ತಂತ್ರಾಂಶವನ್ನು ಮೇಲ್ದರ್ಜೆಗೇರಿಸಿ ಅಭಿವದ್ಧಿಪಡಿಸಲಾಗುತ್ತಿದೆ.
ನಿಮ್ಮ ಗ್ರಾಮ ಪಚಾಯತ್ ಗೆ ಆಯ್ಕೆಯಾದ ಸದಸ್ಯರ ಹೆಸರು ನೋಡಬೇಕಾದರೆ ಸದಸ್ಯರು ಮೇಲೆ ಕ್ಲಿಕ್ ಮಾಡಬೇಕು. ಪ್ರಿವಿಯಸ್ ಮೆಂಬರ್ಸ್ ಹಾಗೂ ಕರೆಂಟ್ ಮೆಂಬರ್ಸ್ ಇರುತ್ತದೆ. ಸದ್ಯ ಇರುವ ಗ್ರಾಪಂ ಸದಸ್ಯರ ಹೆಸರು ನೋಡಬೇಕಾದರೆ ಕರೆಂಟ್ ಮೆಂಬರ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮೂರಿನ ಗ್ರಾಪಂ ಸದಸ್ಯರ ಪಟ್ಟಿ ಕಾಣುತ್ತದೆ. ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸದಸ್ಯರು ಯಾರು ಎಂಬ ಹೆಸರಿನೊಂದಿಗೆ ಅವರ ಮೊಬೈಲ್ ನಂಬರ್ ಸಹ ಇರುತ್ತದೆ.
ಇದನ್ನೂ ಓದಿ : ನಿಮ್ಮ ಜಮೀನಿನ ಮೇಲೆ ಸಾಲವೆಷ್ಟಿದೆ? ಇಲ್ಲೇ ಚೆಕ್ ಮಾಡಿ
ಸಾಮಾನ್ಯವಾಗಿ ಹೊಸದಾಗಿ ಆಯ್ಕೆಯಾದ ಗ್ರಾಮ ಪಂಚಾಯತ್ ಸದಸ್ಯರು ಹೆಸರುಗಳನ್ನು ಪಂಚತಂತ್ರ ತಂತ್ರಾಂಶದಲ್ಲಿ ಸೇರಿಸಬೇಕು. ಕೆಲವು ಕಡೆ ಇನ್ನೂ ಸೇರಿಸಿಲ್ಲ. ಒಂದು ನಿಮ್ಮ ಗ್ರಾಮ ಪಂಚಾಯತ್ ಸದಸ್ಯರು ಹೆಸರು ಇನ್ನೂ ಅಪಡೆಟ್ ಆಗಿಲ್ಲವೆಂದರೆ ತಾವು ಗ್ರಾಪಂ ಸದಸ್ಯರಿಗೆ ತಿಳಿಸಿ ಅಪಡೇಟ್ ಮಾಡಿಸಬಹುದು.
ಇಂದಿರಾ ಅವಾಸ್ ಯೋಜನೆ, ಆಶ್ರಯ ಯೋಜನೆಯಡಿಯಲ್ಲಿ ಯಾರ್ಯಾರಿಗೆ ಮನೆಗಳು ಬಂದಿವೆ ಎಂಬುದನ್ನು ನೋಡಬೇಕಾದರೆ ಫಲಾನುಭವಿಗಳ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಪೇಜ್ ಓಪನ್ ಆಗುತ್ತದೆ. ನಿಮ್ಮೂರಿನ ಯಾರು ಯಾರಿಗೆ ಮನೆಗಳು ಮಂಜೂರಾಗಿವೆ ಎಂಬ ಪಟ್ಟಿ ಇರುತ್ತದೆ.
ಗ್ರಾಮ ಪಂಚಾಯತಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಒದಗಿಸುವುದಕ್ಕಾಗಿ ಸರ್ಕಾರವು ಪಂಚಮಿತ್ರ ಎನ್ನುವ ಸರ್ಕಾರದ ವೆಬ್ ಸೈಟ್ ಆರಂಭಿಸಲಾಗಿದೆ. ಈ ತಂತ್ರಾಂಶದ ಮೂಲಕ ಕರ್ನಾಟಕದ ಎಲ್ಲಾ ಗ್ರಾಮ ಪಂಚಾಯತಿಗಳ ವಿವರಗಳನ್ನು ತಿಳಿಯಬಹುದು.