ನೀರಾವರಿ ಮಾಡಿಕೊಳ್ಳಲು ಬಯಸುವ ರೈತರಿಗೆ ಸಂತಸದ ಸುದ್ದಿ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 2021-22ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಡಿಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬುದ್ಧ, ಸಿಖ್ ಹಾಗೂ ಪಾರ್ಸಿ ಜನಾಂಗಕ್ಕೆ ಸೇರಿದವರು ಗಂಗಾ ಕಲ್ಯಾಣ ಯೋಜನೆ, ಆಟೋರಿಕ್ಷಾ, ಟ್ಯಾಕ್ಸಿ, ಗೂಡ್ಸ್ ವಾಹನಗಳ ಖರೀದಿಗೆ, ಶ್ರಮಶಕ್ತಿ ಸಾಲದ ಯೋಜನೆ, ಮೈಕ್ರೋ ಸಾಲದ ಯೋಜನೆಗಳಡಿಯಲ್ಲಿ ಸಾಲ ಸೌಲಭ್ಯ ನೀಡಲಾಗುವುದು.
Ganga Kalyana Yojana ಯಡಿಯಲ್ಲಿ ಅರ್ಜಿ ಸಲ್ಲಿಸುವವರಿಗೆ ಕೊಳವೆಬಾವಿ ಕೊರೆದು ನಂತರ ನೀರು ಸಂಗ್ರಹಿಸಲು ಟ್ಯಾಂಕನ್ನು ನಿರ್ಮಿಸಿಕೊಟ್ಟು ಅದಕ್ಕೆ ಪೈಪ್ ಮೂಲಕ ಕೃಷಿ ಭೂಮಿಗೆ ನೀರು ಒದಗಿಸಲಾಗುವುದು. ವೈಯಕ್ತಿಕ ಕೊಳವೆಬಾವಿ ಯೋಜನೆಗೆ ಸರ್ಕಾರವು 3 ಲಕ್ಷ ರೂಪಾಯಿಯನ್ನು ಬೆಂಗಳೂರು, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ನಿಗದಿಪಡಿಸಲಾಗಿದೆ. ಇತರ ಜಿಲ್ಲೆಗಳಿಗೆ 1.50 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ. ವಿದ್ಯುದೀಕರಣ ಠೇವಣಿಗಾಗಿ 50 ಸಾವಿರ ರೂಪಾಯಿ ಪ್ರತ್ಯೇಕವಾಗಿ ನೀಡಲಾಗುವುದು.
ಇದನ್ನೂ ಓದಿ : ರೈತರಿಗೆ ಸಂತಸದ ಸುದ್ದಿ. ಇನ್ನೂ ಮುಂದೆ ರೈತರು ಮೊಬೈಲ್ ನಲ್ಲಿಯೇ ಜಮೀನಿನ ಅಳತೆ ಮಾಡಬಹುದು… ಅದು ಹೇಗೆ ಅಂದುಕೊಂಡಿದ್ದೀರಾ….ಇಲ್ಲಿದೆ ಸಂಪೂರ್ಣ ಮಾಹಿತಿ
ಕೊಳವೆಬಾವಿ ವೆಚ್ಚವು ನಿಗದಿಪಡಿಸಿದ ವೆಚ್ಚಕ್ಕಿಂತ ಹೆಚ್ಚಾದರೆ 50000 ರೂಪಾಯಿಯವರೆಗೆ ಸಾಲವನ್ನು ಶೇ. 4 ರ ಬಡ್ಡಿದರದಲ್ಲಿ ನೀಡಲಾಗುವುದು.
Ganga Kalyana Yojana ಅರ್ಹತೆಗಳು (Eligibility)
ಅರ್ಜಿದಾರರು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು. ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ಅರ್ಜಿದಾರರು ಸಣ್ಣ, ಅತೀ ಸಣ್ಣ ಹಿಡುವಳಿದಾರರ ರೈತರರಾಗಿರಬೇಕು. ಗ್ರಾಮೀಣ ಪ್ರದೇಶದಲ್ಲಿ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 96 ಸಾವಿರ ಮೀರಿರಬಾರದು.
ದಾಖಲಾತಿಗಳು (Documents)
ಸಕ್ರಮ ಪ್ರಾಧಿಕಾರದಿಂದ ನೀಡಲಾದ ಜಾತಿ ಮತ್ತು ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್ ಪ್ರತಿ, ಇತ್ತೀಚಿನ ಆರ್.ಟಿ.ಸಿ ಪ್ರತಿ, ಸಕ್ರಮ ಪ್ರಾಧಿಕಾರದಿಂದ ನೀಡಲಾದ ಸಣ್ಣ, ಅತೀಸಣ್ಣ ಹಿಡುವಳಿದಾರರ ಪ್ರಮಾಣಪತ್ರ, ಬ್ಯಾಂಕ್ ಪಾಸ್ ಬುಕ್, ಭೂ-ಕಂದಾಯ ಪಾವತಿಸಿದ ರಸೀದಿ, ಸ್ವಯಂ ಘೋಷಣೆ ಪ್ರಮಾಣ ಪತ್ರ ಹೊಂದಿರಬೇಕು.
ಅರ್ಜಿ ಸಲ್ಲಿಸಲು
https://kmdconline.karnataka.gov.in/Portal/login
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ನಂತರ ಸಲ್ಲಿಸು ಮೇಲೆ ಕ್ಲಿಕ್ ಡೂಬೇಕು. ಆಗ ಆರು ಅಂಕಿಯ ಓಟಿಪಿ ನಂಬರ್ ನಿಮ್ಮ ಮೊಬೈಲಿಗೆ ಬರುತ್ತದೆ. ಅದನ್ನು ನಮೂದಿಸಿದ ನಂತರ ಅರ್ಜಿಯಲ್ಲಿ ಕೇಳಲಾದ ಇತರ ಮಾಹಿತಿಗಳನ್ನು ಭರ್ತಿ ಮಾಡಬೇಕು.
ಅರ್ಜಿ ಸಲ್ಲಿಸಲು ಡಿಸೆಂಬರ್ 15 ರೊಳಗೆ ಅರ್ಜಿ ಸಲ್ಲಿಸಬೇಕು. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸದ ನಂತರ ಅರ್ಜಿಯ ಪ್ರತಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ನೇರವಾಗಿ ನಿಗಮದ ಜಿಲ್ಲಾ ಕಚೇರಿಗೆ ಡಿಸೆಂಬರ್ 18 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ 82777 99990ಗೆ ಸಂಪರ್ಕಿಸಲು ಕೋರಲಾಗಿದೆ.