Farmer will get sowing seeds subsidy ರೈತರಿಗಿಲ್ಲಿದೆ ಭರ್ಜರಿ ಗುಡ್ ನ್ಯೂಸ್. ಮುಂಗಾರು ಈಗಾಗಲೇ ಹಲವು ಜಿಲ್ಲೆಗಳಲ್ಲಿ ಆರಂಭವಾಗಿದ್ದರಿಂದ ಬಿತ್ತನೆ ಬೀಜಕ್ಕಾಗಿ ಕಾಯುತ್ತಿರುವ ರೈತರು ಕೃಷಿ ಇಲಾಖೆಯ ವತಿಯಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪಡೆಯಬಹುದು.
ಬೀಜಗಳ ಪೂರೈಕೆ ಹಾಗೂ ಇತರೆ ಹೂಡವಳಿ ಯೋಜನೆಗಳಡಿ ಭತ್ತ, ರಾಗಿ, ತೋಗರಿ, ಉದ್ದು, ಹೆಸರು, ಅಲಸಂಧೆ, ಶೇಂಗಾ, ಮೆಕ್ಕೆಜೋಳ, ಸಜ್ಜೆ, ಸೋಯಾಅವರೆ ಮತ್ತು ಸೂರ್ಯಕಾಂತಿ ಬೆಳೆಗಳ ಬಿತ್ತನೆ ಬೀಜಗಳು ಸಹ ರಿಯಾಯಿತಿ ದರದಲ್ಲಿ ಲಭ್ಯವಿದೆ. ಹೌದು, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಶೇ. 75 ರ ಸಹಾಯಧನದಲ್ಲಿ ಬಿತ್ತನೆ ಬೀಜಿ ವಿತರಿಸಲಾಗುತ್ತಿದೆ. ಎಲ್ಲಾ ವರ್ಗದ ರೈತರಿಗೆ ಗರಿಷ್ಠ 2 ಹೆಕ್ಟೇರ್ ಅಥವಾ ಅವರ ಹಿಡುವಳಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ ಬಿತ್ತನೆ ಬೀಜ ವಿತರಿಸಲಾಗುವುದು.
Farmer will get sowing seeds subsidy ಯಾವ ಯಾವ ಬಿತ್ತನೆ ಬೀಜ ಲಭ್ಯ
ಭತ್ತ, ರಾಗಿ, ಜೋಳ, ತೊಗರಿ, ಉದ್ದು, ಹೆಸರು, ನೆಲಗಡಲೆ ಕಾಯಿ, ಅಲಸಂಧೆ, ಸೋಯಾ ಅವರೆ, ಸಜ್ಜೆ, ಸೂರ್ಯಕಾಂತಿ, ಮೆಕ್ಕೆಜೋಳ ಪ್ರತಿ ಕೆಜಿಗೆ ಸಾಮಾನ್ಯ ವರ್ಗದವರಿಗೆ ಶೇ. 50 ಹಾಗೂ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದವರಿಗೆ ಶೇ. 75 ರಷ್ಟು ಸಹಾಯಧನದಲ್ಲಿ ಬೀಜಗಳ ವಿತರಣೆ ಮಾಡಲಾಗುವುದು.
ಸೂರ್ಯಕಾಂತಿ ಜಿಕೆ 2002 ತಳಿಗೆ ಪ್ರತಿ ಕೆಜಿಗೆ 895 ರೂಪಾಯಿ ಇದೆ. ಇದಕ್ಕೆ ಸಾಮಾನ್ಯ ವರ್ಗದವರಿಗೆ 80 ರೂಪಾಯಿ ಸಹಾಯಧನದಲ್ಲಿ ಅಂದರೆ 815 ರೂಪಾಯಿಗೆ ವಿತರಿಸಲಾಗುವುದು. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 120 ರೂಪಾಯಿ ಸಹಾಯಧನ ನೀಡಲಾಗುವುದು. ರೈತರು 775 ರೂಪಾಯಿ ಪಾವತಿಸಿ ಬೀಜ ಪಡೆಯಬಹುದು.
ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ
ತೊಗರಿ ಟಿಎಸ್ 3ಆರ್ ಬೀಜದ ದರ 110 ರೂಪಾಯಿ ಇದೆ ಇಧಕ್ಕೆ ಸಾಮಾನ್ಯ ವರ್ಗದವರಿಗೆ 25 ರೂಪಾಯಿ ಸಹಾಯಧನ ನೀಡಲಾಗುವುದು ಅಂದರೆ ರೈತರು 85 ರೂಪಾಯಿಗೆ ಪ್ರತಿ ಕೆಜಿಗೆ ಬೀಜ ಪಡೆಯಬಹುದು. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 37.5 ರೂಪಾಯಿ ಸಬ್ಸಿಡಿ ಸಿಗಲುತ್ತದೆ. ಈ ಬೀಜಕ್ಕೆ ರೈತರು72.5 ರೂಪಾಯಿ ಪಾವತಿಸಿ ಪಡೆಯಬಹುದು.
ಮೆಕ್ಕೆಜೋಳ ಜಿಕೆ3015 ಬೀಜಕ್ಕೆ 175 ರೂಪಾಯಿ ಇದೆ.ಸಾಮಾನ್ಯ ವರ್ಗದವರಿಗೆ 20 ರೂಪಾಯಿ ಸಬ್ಸಿಡಿ ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು30 ರೂಪಾಯಿ ಸಬ್ಸಿಡಿ ಅಂದರೆ 144 ರೂಪಾಯಿ ಪಾವತಿಸಿ ಬೀಜ ಪಡೆಯಬಹುದು.
ಅದೇ ರೀತಿ ಹೆಸರು ಬಿಜಿಎಸ್9 ಬೀಜದ ಪ್ರತಿ ಕೆಜಿಗೆ ಬೆಲೆ 112 ರೂಪಾಯಿ ಸಾಮಾನ್ಯ ವರ್ಗದವರಿಗೆ 25 ರೂಪಾಯಿ ಸಹಾಯಧನ ಸಿಗಲಿದೆ. 87 ರೂಪಾಯಿ ಪಾವತಿಸಿ ರೈತರು ಬೀಜ ಪಡೆಯಬಹುದು. ಅದೇ ರೀತಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 37.5 ರೂಪಾಯಿ ಸಹಾಯಧನ ಸಿಗುತ್ತದೆ. ಅವವರು 74.5 ರೂಪಾಯಿ ಪಾವತಿಸಿ ಬೀಜ ಪಡೆಯಬಹುದು.
ಇದನ್ನೂ ಓದಿ : ರೈತರೇಕೆ ಬೆಳೆವಿಮೆ ಮಾಡಿಸಬೇಕು? ವಿಮೆ ಮಾಡಿಸುವುದರಿಂದಾಗುವ ಉಪಯೋಗ?
ಭತ್ತ ಬಿಪಿಟಿ5204 ಬೀಜ 35 ರೂಪಾಯಿಯಲ್ಲಿ ಸಿಗುತ್ತದೆ. ಇದಕ್ಕೆ ಸಾಮಾನ್ಯ ವರ್ಗದವರಿಗೆ 8 ರೂಪಾಯಿ ಸಹಾಯಧನ ಸಿಗುತ್ತದೆ. ಸಾಮಾನ್ಯವರ್ಗದ ರೈತರು 27 ರೂಪಾಯಿ ಪ್ರತಿ ಕೆಜಿಗೆ ಬೀಜ ಪಡೆಯಬಹುದು. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 12 ರೂಪಾಯಿ ಸಹಾಯಧನ ಸಿಗಲಿದೆ 23 ರೂಪಾಯಿ ಪಾವತಿಸಿ ಬೀಜ ಪಡೆಯಬಹುದು.
ಸೂರ್ಯಕಾಂತಿ 2 ಕೆಜಿಯ ಚೀಲ, ತೊಗರಿ 5 ಕೆಜಿಯ ಚೀಲ, ಮೆಕ್ಕೆಜೋಳ 4 ಕೆಜಿಯ ಚೀಲ, ಹೆಸರು 5 ಕೆಜಿಯ ಚೀಲ ಹಾಗೂ ಭತ್ತ 25 ಕೆಜಿಯ ಚೀಲವಿರುತ್ತದೆ.
ಒಬ್ಬ ರೈತರಿಗೆ ಗರಿಷ್ಠ 2 ಹೆಕ್ಟೇರ್ ಅಥವಾ ಅವರ ಹಿಡುವಳಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ ಬಿತ್ತನೆ ಬೀಜ ವಿತರಿಸಲಾಗುವುದು.
ಬಿತ್ತನೆ ಬೀಜ ಪಡೆಯಲು ರೈತರು ಪಹಣಿ, ಆಧಾರ್ ಕಾರ್ಡ್ ಸಲ್ಲಿಸಬೇಕು. ಎಸ್.ಸಿ ಎಸ್.ಟಿಯವರಿಗೆ ಜಾತಿ ಮತ್ತುಆದಾಯ ಪ್ರಮಾಣ ಪತ್ರ ಇರಬೇಕು. ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಸಲ್ಲಿಸಬೇಕು.
ರಾಜ್ಯದ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಸಬ್ಸಿಡಿಯಲ್ಲಿ ಬೀಜಗಳನ್ನು ವಿತರಿಸಲಾಗುತ್ತಿದೆ. ನಿಮ್ಮ ಹತ್ತಿರದ ರೈತರ ಸಂಪರ್ಕ ಕೇಂದ್ರಕ್ಕೆ ವಿಚಾರಿಸಿ ಬೀಜಗಳನ್ನು ಪಡೆಯಬಹುದು.,