Mini Tractor subsidy ರೈತರ ಕೃಷಿ ಚಟುವಟಿಕೆಗಳಿಗೆ ದಿನದಿಂದ ದಿನಕ್ಕೆ ಯಂತ್ರೋಪಕರಣಗಳ ಬೇಡಿಕೆ ಹೆಚ್ಚಾಗಿದೆ. ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಕೃಷಿ ಯಂತ್ರೋಪಕರಣ ಬೇಡಿಕೆ ಹೆಚ್ಚಾಗಿದೆ. ಅಷ್ಟೇ ಅಲ್ಲ, ರೈತರು ಕೃಷಿ ಯಂತ್ರೋಪಕರಣಗಳನ್ನು ಬಳಕೆಗೆ ಮುಂದಾಗುತ್ತಿದ್ದಾರೆ. ಹಾಗಾಗಿ ಸರ್ಕಾರದ ವತಿಯಿಂದ ರೈತರಿಗೆ ಸಬ್ಸಿಡಿ ನೀಡಲಾದಗುತ್ತಿದೆ. ಯಾವ ರೈತರಿಗೆ ಎಷ್ಟು ಸಬ್ಸಿಡಿ ನೀಡಲಾಗುವುದು ಎಂಬುದರ ಮಾಹಿತಿ ಇಲ್ಲಿದೆ.
ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ರೈತರಿಗೆ ಶೇ. 90 ರಷ್ಟು ಸಹಾಯಧನ ಸಿಗುತ್ತದೆ. ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಲಭ್ಯತೆ ಆಧಾರದ ಮೇಲೆ ಕೃಷಿ .ಯಂತ್ರೋಪಕರಣಗಳನ್ನು ರೈತರಿಗೆ ನೀಡಲಾಗುವುದು. ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್ , ಟ್ರ್ಯಾಕ್ಟರ್ ಚಾಲಿತ ಎಂ. ಬಿ. ಪ್ಲೋ, ರೋಟೋವೇಟರ್,ರೋಟೋವೇಟರ್, ಡಿಸ್ಕ್ ಫ್ಲೋ, ಡಿಸ್ಕ್ ಹ್ಯಾರೋ ಸೇರಿದಂತೆ ಇನ್ನಿತರ ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ಸಿಗಲಿದೆ.
ಸಹಾಯಧನ ಪಡೆಯಲು ಬೇಕಾಗುವ ದಾಖಲೆಗಳು?
ರೈತರ ಜಮೀನಿನ ಪಹಣಿ ಹೊಂದಿರಬೇಕು.ಆಧಾರ್ ಗುರುತಿನ ಚೀಟಿ ಹೊಂದಿರಬೇಕು. ಬ್ಯಾಂಕ್ ಪಾಸ್ ಬುಕ್ ಹೊಂದಿರಬೇಕು. ಪಹಣಿ ಜಂಟಿಯಾಗಿದ್ದರೆ ಒಪ್ಪಿಗೆ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕು. ರೈತರು ಫ್ರೂಟ್ಸ್ ಐಡಿ ಹೊಂದಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ರೈತರು ಯಾವ ಕೃಷಿ ಯಂತ್ರೋಪಕರಣಕ್ಕೆ ಅರ್ಜಿ ಸಲ್ಲಿಸುತ್ತಾರೋ ಆ ಅರ್ಜಿ ಹೊಂದಿರಬೇಕು.
Mini Tractor subsidy ಯಾವ ಕೃಷಿ ಯಂತ್ರೋಪಕರಣಕ್ಕೆ ಎಷ್ಟು ಸಹಾಯಧನ ಸಿಗಲಿದೆ?
ಮಿನಿ ಟ್ರ್ಯಾಕ್ಟರ್ ಖರೀದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಗರಿಷ್ಠ 3 ಲಕ್ಷ ರೂಪಾಯಿಯವರೆಗೆ ಸಹಾಯಧನ ಸಿಗಲಿದೆ. ಸಾಮಾನ್ಯ ವರ್ಗದವರಿಗೆ 75 ಸಾವಿರ ರೂಪಾಯಿಯವರೆಗೆ ಸಹಾಯಧನ ಸಿಗಲಿದೆ.
ಪವರ್ ಟಿಲ್ಲರ್ ಖರೀದಿಗೆ ಸಾಮಾನ್ಯ ವರ್ಗದವರಿಗೆ ಶೇ. 50 ರಷ್ಟು ಸಹಾಯಧನ ಗರಿಷ್ಠ 72500 ರೂಪಾಯಿಯವರೆಗೆ ಸಹಾಯಧನಸಿಗಲಿದೆ. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 90 ರಷ್ಟು ಸಹಾಯಧನ, ಗರಿಷ್ಠ 1 ಲಕ್ಷ ರೂಪಾಯಿಯವರೆಗೆ ಸಹಾಯಧನ ಸಿಗಲಿದೆ.
ಇದನ್ನೂ ಓದಿ : Ration card ನಂಬರ್ ಹಾಕಿ ಗೃಹಲಕ್ಷ್ಮೀ ಹಣ ಜಮೆ ಸ್ಟೇಟಸ್ ಚೆಕ್ ಮಾಡಿ
ಟ್ರ್ಯಾಕ್ಟರ್ ಚಾಲಿತ ಎಂ.ಬಿ. ಫ್ಲೋ ಫಿಕ್ಸ್ಡ್ ಗೆ ಸಾಮಾನ್ಯ ವರ್ಗದವರಿಗೆ 14100 ರೂಪಾಯಿ ರಿವರ್ಸಿಬಲ್ ಎಂ.ಬಿ. ಫ್ಲೋ ಗೆ 25800 ರೂಪಾಯಿ ಸಹಾಯಧನ ಸಿಗಲಿದೆ. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಎಂ.ಬಿ. ಫ್ಲೋ 25830 ರೂಪಾಯಿ ರಿವರ್ಸಿಬಲ್ ಎಂ.ಬಿ. ಫ್ಲೋ ಗೆ 51,300 ರೂಪಾಯಿ ಸಹಾಯಧನ ಸಿಗಲಿದೆ.
ಟ್ರ್ಯಾಕ್ಟರ್ ಚಾಲಿತ ಡಿಸ್ಕ್ ಫ್ಲೋ ಖರೀದಿಗೆ ಸಾಮಾನ್ಯ ವರ್ಗದವರಿಗೆ 29000ದಿಂದ 36500 ರೂಪಾಯಿಯವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 52200 ರೂಪಾಯಿಯಿಂದ 65700 ರೂಪಾಯಿಯವರೆಗೆ ಸಹಾಯಧನ ಸಿಗಲಿದೆ.
ಟ್ರ್ಯಾಕ್ಟರ್ ಚಾಲಿತ ಡಿಸ್ಕ್ ಹ್ಯಾರೋಗೆ ಸಾಮಾನ್ಯ ವರ್ಗದವರಿಗೆ 29000-35000 ರೂಪಾಯಿಯವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 52200 ದಿಂದ 63000 ರೂಪಾಯಿಯವರೆಗೆ ಸಹಾಯಧನ ಸಿಗಲಿದೆ.
ಇದನ್ನೂ ಓದಿ : ಸಿಬಿಲ್ ಸ್ಕೋರ್ ಮೊಬೈಲ್ ನಲ್ಲಿಯೇ ಉಚಿತವಾಗಿ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಲಭ್ಯತೆ ಆಧಾರದ ಮೇರೆಗೆ ನೀಡಲಾಗುವುದು. ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಲಭ್ಯತೆ ಆಧಾರದ ಮೇಲೆ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ನೀಡಲಾಗುವುದು. ಇಲ್ಲಿ ಹಿರಿತನಕ್ಕೆ ಅಂದರೆ ಲಭ್ಯತೆ ಆಧಾರದ ಮೇಲೆ ಅರ್ಜಿ ಮೊದಲು ಸಲ್ಲಿಸಿದವರಿಗೆ ಮೊದಲು ಆದ್ಯತೆ ನೀಡಲಾಗುವುದು. ಇನ್ನೇಕೆ ತಡ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.