Farmer can check crop insurance ರೈತರು ತಮ್ಮ ಮೊಬೈಲ್ ನಲ್ಲೇ ಯಾವ ಬೆಳೆಗಳಿಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ ಎಂಬುದನ್ನು ಕೇವಲ ಆಧಾರ್ ನಂಬರ್ ಹಾಕಿ ಚೆಕ್ ಮಾಡಬಹುದು.
ಹೌದು, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ವಿಮೆ ಮಾಡಿಸಿದ ರೈತರು ಮುಂಗಾರು ಹಂಗಾಮು ಅಥವಾ ಹಿಂಗಾರು ಹಂಗಾಮು ಈ ಬೆಳೆಗಳಿಗೆ ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ…. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
Farmer can check crop insurance ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಹಣ ಜಮೆಯಾಗುತ್ತದೆ? ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ವಿಮೆ ಮಾಡಿಸಿದ ರೈತರು ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ ಎಂಬುದನ್ನು ಚೆಕ್ ಮಾಡಲು ಈ
https://www.samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ ವರ್ಷದ ಆಯ್ಕೆ ಹಾಗೂ ಋತು ಆಯ್ಕೆಗಳಿರುತ್ತವೆ. ವರ್ಷ ಆಯ್ಕೆಯಲ್ಲಿ 2022-23 ಇರಬೇಕು. ಋತುವಿನಲ್ಲಿ ಮುಂಗಾರು ಬೆಳೆವಿಮೆ ಸ್ಟೇಟಸ್ ಚೆಕ್ ಮಾಡಬೇಕಾದರೆ Khariff ಆಯ್ಕೆ ಮಾಡಿಕೊಳ್ಳಬೇಕು. ಹಿಂಗಾರು ಬೆಳೆಯ ಸ್ಟೇಟಸ್ ಚೆಕ್ ಮಾಡಬೇಕಾದರೆ Rabi ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ/Go ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರದುಕೊಳ್ಳುತ್ತದೆ. .ಅಲ್ಲಿ ನಿಮಗೆ Farmers ಕೆಳಗಡೆ ಕೆಲವು ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ನೀವು Premium Calculator ಮೇಲೆ ಕ್ಲಿಕ್ ಮಾಡಬೇಕು. ಅಥವಾ ಈ
https://www.samrakshane.karnataka.gov.in/Premium/Premium_Chart.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ
Crop wise premium calculator ಪೇಜ್ ಕೆಳಗಡೆ ಕೆಲವು ಆಯ್ಕೆಗಳಿರುತ್ತವೆ. ಅಲ್ಲಿ ನೀಮ್ಮಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದಮೇಲೆ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಗ್ರಾಮ ಆಯ್ಕೆ ಮಾಡಿಕೊಂಡ ನಂತರ crop ನಲ್ಲಿ ಯಾವ ಬೆಳೆಗೆ ವಿಮೆ ಮಾಡಿಸಿದ್ದೀರೋ ಆ ಬೆಳೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಎಷ್ಟು ಎಕರೆಗೆ ಬೆಳೆ ವಿಮೆ ಮಾಡಿಸಿದ್ದೀರೋ ಅದನ್ನು ನಮೂದಿಸಬೇಕು. ಒಂದು ವೇಳೆ ನಿಮ್ಮ ಜಮೀನು ಗುಂಟೆಯಲ್ಲಿದ್ದರೆ ಅದನ್ನೂ ಹಾಕಬೇಕು. ನಂತರ Show Premium ಮೇಲೆ ಕ್ಲಿಕ್ ಮಾಡಬೇಕು. ಆಗ ಮೇಲ್ಗಡೆ ಹೆಕ್ಟೇರಿಗೆ ಎಷ್ಟು ಹಣ ಜಮೆಯಾಗುತ್ತದೆ ಎಂಬುದು ಕಾಣಿಸುತ್ತದೆ. ಅದರ ಕೆಳಗಡೆ ನೀವು ನಮೂದಿಸಿದ ಎಕರೆಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ. ಒಟ್ಟು ವಿಮೆ ಹಣ ಪಾವತಿಸಿದ್ದು, ಅಂದರೆ ನಿಮ್ಮ ವಂತಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಂತಿಗೆ ಸೇರಿ ಎಷ್ಟು ವಿಮೆ ಹಣ ಪಾವತಿಸಲಾಗಿದೆ ಎಂಬುದು ಕಾಣಿಸುತ್ತದೆ.
ಇದನ್ನೂ ಓದಿ: PM kisan ಅರ್ಹ ಮತ್ತು ಅನರ್ಹ ರೈತರ ಪಟ್ಟಿ ಬಿಡುಗಡೆ: ಮೊಬೈಲ್ ನಲ್ಲೆ ಚೆಕ್ ಮಾಡಿ
ಉದಾಹರಣೆಗೆ ನೀವು ತೊಗರಿ ಬೆಳೆಗೆ ವಿಮೆ ಮಾಡಿಸಿದ್ದೀರೆಂದುಕೊಳ್ಳೋಣ. ನಿಮ್ಮ ತೊಗರಿ ಬೆಳೆಗೆ ಒಂದು ಎಕರೆಗೆ ನೀವು ಕೇವಲ 323 ರೂಪಾಯಿ ಬೆಳೆ ವಿಮೆ ಪಾವತಿಸುತ್ತೀರಿ. ಉಳಿದ ಹಣವನ್ನು ಕೇಂದ್ರ ಸರ್ಕಾರವು1240 ರೂಪಾಯಿ ಹಾಗೂ ರಾಜ್ಯ ಸರ್ಕಾರವು 1240 ರೂಪಾಯಿ ಪಾವತಿಸುತ್ತದೆ. ಎಲ್ಲ ಸೇರಿ ಒಂದು ಎಕರೆ ತೊಗರಿ ಬೆಳೆಗೆ 2803 ರೂಪಾಯಿ ಪಾವತಿಸುವಂತಾಗುತ್ತದೆ.
ಬೆಳೆ ಹೇಗೆ ಹಾಳಾದರೆ ಬೆಳೆ ವಿಮೆ ಹಣ ಜಮೆಯಾಗುತ್ತದೆ?
ಒಂದು ವೇಳೆ ನಿಮ್ಮ ತೊಗರಿ ಬೆಳೆ ಪ್ರಾಕೃತಿಕ ವಿಕೋಪದಿಂದಾಗಿ ಅಂದರೆ ಅತೀಯಾದ ಮಳೆ, ಪ್ರವಾಹ, ಅನಾವೃಷ್ಟಿ, ಸಿಡಿಲು ಗುಡುಗು, ಭೂ ಕುಸಿತು ಹೀಗೆ ವಿವಿಧ ಕಾರಣಗಳಿಂದ ಬೆಳೆ ಹಾಳಾದರೆ ನಿಮಗೆ ಪರಿಹಾರ ನೀಡಲಾಗುವುದು. ಇದಕ್ಕಾಗಿ ರೈತರು ಬೆಳೆ ಹಾಳಾಗಿರುವ ಕುರಿತು ಬೆಳೆ ವಿಮಾ ಕಂಪನಿಗೆ ತಿಳಿಸಬೇಕಾಗುತ್ತದೆ. ಆಗ ನೀವು ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದೀರೋ ಆ ವಿಮಾ ಕಂಪನಿಯ ಸಿಬ್ಬಂದಿಯವರು ನಿಮ್ಮ ಜಮೀನಿಗೆ ಬಂದು ಪರಿಶೀಲನೆ ಮಾಡಿ ವಿಮಾ ಅಧಿಕಾರಿಗಳಿಗೆ ಬೆಳೆ ವಿಮೆ ಪಾವತಿಸಲು ವರದಿ ಸಲ್ಲಿಸುತ್ತಾರೆ. ಆಗ ನಿಮಗೆ ವಿಮೆ ಹಣ ಜಮೆಯಾಗುತ್ತದೆ.