ಮೊಬೈಲ್ ನಲ್ಲೇ ಜಮೀನಿನ ಸ್ಕೆಚ್ ನಕ್ಷೆ ಇಲ್ಲಿ ಚೆಕ್ ಮಾಡಿ

Written by Ramlinganna

Updated on:

Farmer can apply for land sketch ಸಾರ್ವಜನಿಕರು, ರೈತರು ತಮ್ಮ ಜಮೀನಿಗೆ ಸಂಬಂಧಿಸಿದ 11ಇ, ಪೋಡಿ ಭೂ ಪರಿವರ್ತನೆ ಸ್ಕೆಚ್ ಹಾಗೂ ಇತರ ನಕ್ಷೆಗಳನ್ನು ಆನ್ಲೈನ್ ನಲ್ಲೇ ಪಡೆಯಬಹುದು. ಹೌದು, ಇದಕ್ಕಾಗಿ ರೈತರು ಯಾರ ಬಳಿಯೂ ಹೋಗಬೇಕಿಲ್ಲ, ಮೊಬೈಲ್ ನಲ್ಲೇ ಸರಿಯಾಗಿ ಮಾಹಿತಿಗಳನ್ನು ಭರ್ತಿ ಮಾಡಿ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಿದ ನಂತರ 11ಇ ಪೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತು ಮತ್ತು ಇತರ ನಕ್ಷೆಗಳಿಗಾಗಿ ಅರ್ಜಿ ಸಲ್ಲಿಸಿದವರು ಆನ್ಲೈನ್ ಮೂಲಕವೇ ಅರ್ಜಿಯ ಸ್ಟೇಟಸ್ ವೀಕ್ಷಿಸಬಹುದು. ಅರ್ಜಿ ಸ್ವೀಕಾರಗೊಂಡು  ಸರ್ವೆ ಸಿಬ್ಬಂದಿ ತಮ್ಮ ಜಮೀನಿಗೆ ಬಂದು ಸಂಬಂಧಿಸಿದ ಮಾಪನ ಕಾರ್ಯ ಮುಗಿಸಿ ನಕ್ಷೆ ಅನುಮೋದಿಸಿದ ತಕ್ಷಣ ವೆಬ್ಸೈಟ್ ನಲ್ಲಿ  ಆ ನಕ್ಷೆಗಳನ್ನು ಅಪ್ಲೋಡ್ ಮಾಡಲಾಗಿರುತ್ತದೆ. ಆಗ ಸಾರ್ವಜನಿಕರು ಮುದ್ರಣ ಪ್ರತಿ ಪಡೆದುಕೊಳ್ಳಬಹುದು.

Farmer can apply for land sketch ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈ

https://bhoomojini.karnataka.gov.in/service27

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಕಂದಾಯ ಇಲಾಖೆಯ ಸ್ವಾವಲಂಬಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಮೊಬೈಲ್ ನಂಬರ್ ಹಾಕಬೇಕು. ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಸೆಂಡ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಆ ಓಟಿಪಿಯನ್ನು ನಮೂದಿಸಿ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ನಾನೇ ಸ್ಚೆಕ್ ಸಿದ್ದಪಡಿಸಿ ಅಪ್ಲೋಡ್ ಮಾಡುತ್ತೇನೆ (I will prepare the sketch and upload on my onw)

ಭೂ ಮಾಪನ ಇಲಾಖೆಯಿಂದ ಸ್ಕೆಚ್ ಸಿದ್ದಪಡಿಸಲು ನಾನು ಬಯಸುತ್ತೇನೆ (I wish to get the sketch prepared by the survey Department)

ಆಗ ನಿಮಗೆ ಅಪ್ಲೇಕೇಶನ್ ನಂಬರ್ ಓಪನ್ ಆಗುತ್ತದೆ. ಅದನ್ನು ನೀವು ಬರೆದಿಟ್ಟುಕೊಳ್ಳಬೇಕು.

ಅರ್ಜಿ ವಿಧ ಮೂರು ಪ್ರಕಾರದ ಆಯ್ಕೆಗಳಿರುತ್ತವೆ. ಹೌದು, ತತ್ಕಾಲ್ ಪೋಡಿ, ಭೂ ಪರಿವರ್ತನೆ ಹಾಗೂ ಇ ಸ್ಕೆಚ್ ಹೀಗೆ ಮೂರು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವ ಇ ಸ್ಕೆಚ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿನಿಮ್ಮ ಯಾವ ಸರ್ವೆ ನಂಬರ್ ಮೇಲೆ ಎಷ್ಟು ಸಾಲವಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ವಹಿವಾಟಿನ ತರಹೆ (Type of Transaction) ನಲ್ಲಿ ಜಮೀನು ಮಾರಾಟ (ಕ್ರಯ) ವಿಭಾಗ ಹಾಗೂ ದಾನ ಈ ಮೂರರಲ್ಲಿ ನೀವು ಯಾವುದಕ್ಕಾಗಿ ಸ್ಕೆಚ್ ಮಾಡಬೇಕೆಂದುಕೊಂಡಿದ್ದೀರೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು.

ಅರ್ಜಿದಾದರ ವಿವರಗಳು

ಅರ್ಜಿದಾರರ ವಿವರಗಳು ಕೆಳಗಡೆ ಆಧಾರ್ ಪರಿಶೀಲನೆಯನ್ನು ಬಳಸಿಕೊಂಡು ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.  ಇಕೆವೈಸಿ ಸರ್ವಿಸ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಕಂದಾಯ ಇಲಾಖೆ, ಸ್ವಾವಲಂಬಿ ಆಯ್ಕೆ ಯಾವ ಉದ್ದೇಶಕ್ಕಾಗಿ ಸ್ಕೆಟ್ ಮಾಡಬೇಕೆಂದುಕೊಂಡಿದ್ದೀರೋ ಅಲ್ಲಿ ಏನೂ ಬದಲಾವಣೆ ಮಾಡಬೇಕಿಲ್ಲ. ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಬೇಕು.

I Agree ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ choose mode of Authentication ಕೆಳಗಡೆ ಮೂರು ಆಯ್ಕೆಗಳಿರುತ್ತವೆ. ಅಲ್ಲಿ ನೀವು ಓಟಿಪಿ ಆಯ್ಕೆ ಮಾಡಿಕೊಳ್ಳಬೇಕು. ನಂತರ Generate OTP ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಅದನ್ನು ನಮೂದಿಸಬೇಕು.

ಆಧಾರ್ ಪರಿಶೀಲನೆಯನ್ನು ಬಳಸಿಕೊಂಡು ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿ ಕೆಳಗಡೆ ನಿಮ್ಮ ಹೆಸರು ಆಧಾರ್ ಕಾರ್ಡ್ ನಲ್ಲಿರುವಂತೆ ನಮೂದಿಸಬೇಕು. ಆಧಾರ್ ಕಾರ್ಡ್ ಸಂಖ್ಯೆ ಹಾಕಬೇಕು. ನಂತರ ತಂದೆ/ಪತಿಯ ಹೆಸರು ಹಾಕಬೇಕು. ವಿಳಾಸದಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ  ನಮೂದಿಸಬೇಕು.  ಗ್ರಾಮ ನಮೂದಿಸಬೇಕು.  ನಂತರ Next Step  ಮೇಲೆ ಕ್ಲಿಕ್ ಮಾಡಬೇಕು. ಹೀಗೆ ನೀವು ಆನಲೈನ್ ನಲ್ಲೇ ಭೂ ಸ್ಕೆಚ್ ಗಾಗಿ ಅರ್ಜಿ ಸಲ್ಲಿಸಬಹುದು.

ಒಂದು ವೇಳೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂಬ ವೀಡಿಯೋ ನೋಡಬೇಕೆಂದುಕೊಂಡಿದ್ದರೆ ಅಲ್ಲಿ ಕಾಣುವ ಸಹಾಯಕ್ಕಾಗಿ ವೀಡಿಯೋವನ್ನು ವೀಕ್ಷಿಸಿ ಮೇಲೆ ಕ್ಲಿಕ್ ಮಾಡಿದರೆ ಸಾಕು ಅರ್ಜಿ ಹೇಗೆ ಸಲ್ಲಿಸಬೇಕೆಂಬುದರ ಕುರಿತು ತಿಳಿಸಲಾಗಿರುತ್ತದೆ.

ಉಚಿತ ಸಹಾಯವಾಣಿ ನಂಬರ್

ಮೈಸೂರು ಡಿವಿಸನ್ ಗೆ ಸಂಬಂಧಿಸಿದವರು 8277864065 ಗೆ ಸಂಪರ್ಕಿಸಬೇಕು. ಬೆಂಗಳೂರು ಡಿವಿಸೆನ್ ಗೆ ಸಂಬಂಧಿಸಿದವರು  8277864067, ಕಲಬುರಗಿ ಡಿವಿಸಜ್ ಗೆ ಸಂಬಂಧಿಸಿದವರು 8277864068 ಹಾಗೂ ಬೆಳಗಾವಿ ಡಿವಿಜನ್ ಗೆ ಸಂಬಂಧಿಸಿದವರು 8022113255 ಗೆ ಸಂಪರ್ಕಿಸಬಹುದು.

Leave a Comment