Enter survey and check croploan ರೈತರು ಕೇವಲ ಸರ್ವೆ ನಂಬರ್ ಹಾಕಿ ಯಾವ ಜಮೀನಿನ ಮೇಲೆ ಎಷ್ಟು ಸಾಲ ಪಡೆದಿದ್ದಾರೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ರೈತರು ತಮ್ಮ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲೇ ಯಾರ ಸಹಾಯವೂ ಇಲ್ಲದೆ ಮನೆಯಲ್ಲಿಯೇ ಕುಳಿತು ಯಾವ ಜಮೀನಿನ ಮೇಲೆ ಎಷ್ಟು ಸಾಲವಿದೆ ಎಂಬುದನ್ನು ಚೆಕ್ ಮಾಡಬಹುದು. ಜಮೀನಿನ ಮೇಲೆ ಸಾಲ ತೆಗೆದುಕೊಂಡಿರುವುದು ಗೊತ್ತಾಗುತ್ತಾ? ಹೌದು, ಇದಷ್ಟೇ ಅಲ್ಲ, ಯಾವ ಬ್ಯಾಂಕಿನಿಂದ ಸಾಲ ಪಡೆಯಲಾಗಿದೆ ಎಂಬ ಮಾಹಿತಿಯೂ ಸಿಗುತ್ತದೆ.
Enter survey and check croploan ಯಾವ ಬ್ಯಾಂಕಿನಿಂದ ಸಾಲ ಪಡೆಯಲಾಗಿದೆ ಎಂಬುದನ್ನು ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ
ರೈತರು ತಮ್ಮ ಜಮೀನಿನ ಮೇಲೆ ಸಾಲ ಪಡೆದಿರುವುದನ್ನು ಸರ್ವೆ ನಂಬರ್ ಹಾಕಿ ಚೆಕ್ ಮಾಡಲು ಈ
https://landrecords.karnataka.gov.in/Service2/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ಆನ್ಲೈನ್ ಲ್ಯಾಂಡ್ ರಿಕಾರ್ಡ್ಸ್ ವೀವ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಯಾವ ಜಿಲ್ಲೆಗೆ ಸಂಬಂಧಿಸಿದ್ದಾರೋ ಆ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಾದನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಹೋಬಳಿ ಸೆಲೆಕ್ಟ್ ಮಾಡಿ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ಜಾವ ಜಮೀನಿನ ಅಂದರೆ ಮೇಲೆ ಸಾಲ ತೆಗೆದುಕೊಳ್ಳಲಾಗಿದೆ ಎಂಬುದನ್ನು ಚೆಕ್ ಮಾಡಲು ಆ ಸರ್ವೆ ನಂಬರ್ ಹಾಕಬೇಕು.
ನಂತರ Go ಮೇಲೆ ಕ್ಲಿಕ್ ಮಾಡಬೇಕು. ಇದಾದ ಮೇಲೆ surnoc ನಲ್ಲಿ * ಆಯ್ಕೆ ಮಾಡಿಕೊಳ್ಳಬೇಕು. Hissa Number ನಲ್ಲಿಯೂ * ಆಯ್ಕೆ ಮಾಡಿಕೊಳ್ಳಬೇಕು. ನಂತರ ಪಿರಿಯಡ್ ನಲ್ಲಿ2022-2023 ಆಯ್ಕೆ ಮಾಡಿಕೊಂಡು ಇಯರ್ ನಲ್ಲಿಯೂ 2022-2023 ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ Fetch details ಮೇಲೆ ಕ್ಲಿಕ್ ಮಾಡಬೇಕು.
ಏನೇನು ಮಾಹಿತಿ ಇರಲಿದೆ?
ಆಗ ನೀವು ನಮೂದಿಸಿದ ಸರ್ವೆ ನಂಬರ್ ನಲ್ಲಿ ಯಾವ ಯಾವ ಜಮೀನಿನ ಮಾಲಿಕರು ಬರುತ್ತಾರೋ ಆ ರೈತರ ಹೆಸರು ಕಾಣುತ್ತದೆ. ಹಾಗೂ ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಹಾಗೂ ಖಾತಾ ನಂಬರ್ ಮಾಹಿತಿ ಕಾಣುತ್ತದೆ. ಇದಾದ ಮೇಲೆ ಅಲ್ಲಿ ಕಾಣುವ View ಮೇಲೆ ಕ್ಲಿಕ್ ಮಾಡಬೇಕು. ಆಗ ಆರ್.ಟಿಸಿ (ಪಹಣಿ) ಪೇಜ್ ತೆರೆದುಕೊಳ್ಳುತ್ತದೆ.
ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಯಾವ ಯಾವ ರೈತರು ಬರುತ್ತಾರೆ. ಎಂಬ ಮಾಹಿತಿಯೊಂದಿಗೆ ಆ ರೈತರ ಜಮೀನು ಜಂಟಿಯಾಗಿದೆಯೋ ಅಥವಾ ಪ್ರತ್ಯೇಕವಾಗಿದೆಯೋ ಎಂಬ ಮಾಹಿತಿ ಇರುತ್ತದೆ. ಇದರೊಂದಿಗೆ 11ನೇ ಕಾಲಂನಲ್ಲಿ ಋಣಗಳು ಕಾಲಂ ಕೆಳಗಡೆ ಯಾವ ಬ್ಯಾಂಕಿನಿಂದಎಷ್ಟು ಸಾಲ ಪಡೆಯಲಾಗಿದೆ. ಎಂಬ ಮಾಹಿತಿ ಇರುತ್ತದೆ.
ಇದನ್ನೂ ಓದಿ : ನಿಮ್ಮ ಜಮೀನಿನ ಅಕ್ಕಪಕ್ಕದ ಜಮೀನು ಯಾರ ಹೆಸರಿಗೆ ಎಷ್ಟು ಎಕರೆಯಿದೆ? ಮೊಬೈಲ್ ನಲ್ಲೆ ಚೆಕ್ ಮಾಡಿ
ಒಂದು ವೇಳೆ ನೀವು ಸಾಲ ಮರುಪಾವತಿಸಿದ್ದರೂ ಪಹಣಿಯಲ್ಲಿ ಸಾಲದ ಮಾಹಿತಿ ಕಾಣುತ್ತಿದ್ದರೆ ನೀವು ಯಾವ ಬ್ಯಾಂಕಿನಿಂದ ಸಾಲ ಪಡೆಯಲಾಗಿದೆಯೋ ಆ ಬ್ಯಾಂಕಿಗೆ ತೆರಳಿ ಈ ಕುರಿತು ಮಾಹಿತಿ ನೀಡಬೇಕು. ಅಲ್ಲಿ ಸಾಲ ಮರುಪಾವತಿಸಲಾಗಿದೆ ಎಂಬ ನೋ ಡ್ಯೂ ಸರ್ಟಿಫಿಕೇಟ್ ಪಡೆದುಕೊಂಡು ನಿಮ್ಮ ಕಂದಾಯ ಇಲಾಖೆಯಲ್ಲಿ ಸಲ್ಲಿಸಿ ಋಣವನ್ನು ತೆಗೆಸಬಹುದು.
ರೈತರ ಪ್ರಮುಖ ದಾಖಲೆಯಲ್ಲಿ ಒಂದಾದ ಪಹಣಿಯಲ್ಲಿ ರೈತರು ತಮಗೆ ಗೊತ್ತಿಲ್ಲದೆ ಬೇರೆಯವರು ಸಾಲ ಪಡೆದಿದ್ದರೂ ಗೊತ್ತಾಗುತ್ತದೆ. ರೈತರು ತಮ್ಮ ಪಹಣಿಯನ್ನು ಚೆಕ್ ಮಾಡಿ ಸಾಲ ಸೇರಿದಂತೆ ಇನ್ನಿತರ ಮಾಹಿತಿಯನ್ನು ಮನೆಯಲ್ಲಿಯೇ ಕುಳಿತು ಚೆಕ್ ಮಾಡಬಹುದು. ಇದಕ್ಕಾಗಿ ರೈತರು ಯಾವ ಕಚೇರಿಗೂ ಹೋಗಬೇಕಿಲ್ಲ. ಮೊಬೈಲ್ ನಲ್ಲಿ ಕೇವಲ ಸರ್ವೆ ನಂಬರ್ ನಮೂದಿಸಿದರೆ ಸಾಕು ಕ್ಷಣಾರ್ಧದಲ್ಲಿಪಹಣಿಯ ಮಾಹಿತಿಯನ್ನು ಪಡೆಯಬಹುದು.