high yield tomato varieties ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಯುವ ಮತ್ತು ಹೆಚ್ಚು ಜನಪ್ರಿಯ ತರಕಾರಿಗಳಲ್ಲಿ ಟೊಮ್ಯಾಟೋ ಸಹ ಒಂದಾಗಿದೆ. ಈಗ ಟೊಮ್ಯಾಟೋ ಇಲ್ಲದ ಮನೆಯೇ ಇಲ್ಲವೆಂದು ಹೇಳಬಹುದು. ಅಷ್ಟರಮಟ್ಟಿಗೆ ಟೊಮ್ಯಾಟೋ ಈಗ ಮನೆಮಾತಾಗಿದೆ.
ಟೊಮ್ಯಾಟೋ ಬೆಳೆಯಲ್ಲಿಯೂ ಸಹ ಇತರ ಬೆಳೆಗಳಂತೆ ಹೆಚ್ಚು ಇಳುವರಿ ನೀಡುವ ತಳಿಗಳಿವೆ. ಟೊಮ್ಯಾಟೋ ಬೆಳೆಯುವದಕ್ಕಿಂತ ಮುಂಚಿತವಾಗಿ ಹೆಚ್ಚು ಇಳುವರಿ ನೀಡುವ ಹಾಗೂ ಅದರ ರೋಗನಿರೋಧಕ ಶಕ್ತಿಯ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಇಲ್ಲಿ ರೈತರಿಗೆ ಅನುಕೂಲವಾಗಲೆಂದು ಕೆಲವು ಟೊಮ್ಯಾಟೋ ತಳಿಗಳ ಮಾಹಿತಿಯನ್ನು ನೀಡಲಾಗಿದೆ.
high yield tomato varieties ಟೊಮ್ಯಾಟೊ ಬೆಳೆಯಲ್ಲಿರುವ ತಳಿಗಳು
ಮೇಘಾ (ಎಲ್-15)- ಈ ಹಣ್ಣುಗಳು ಮಧ್ಯಮ ಗಾತ್ರ, ದುಂಡನೆಯ ಆಕಾರ ಹೊಂದಿದೆ. ಪ್ರತಿ ಹೆಕ್ಟೇರಿಗೆ 25 ರಿಂದ 30 ಟನ್ ಇಳುವರಿ ಕೊಡುವ ಈ ತಳಿ ಪೂಸಾ ರೂಬಿಗಿಂತ ಶೇ. 43 ರಷ್ಟು ಹೆಚ್ಚು ಇಳುವರಿ ನೀಡುತ್ತದೆ. ಹಣ್ಣುಗಳನ್ನು ಕೊಯ್ಲು ಮಾಡಿದ 8 ರಿಂದ 10 ದಿನಗಳವರೆಗೆ ಕೆಡದಂತೆ ಇಡಬಹುದು.
ಅರ್ಕಾ ವಿಕಾಸ್- ಈ ತಳಿಯು 140 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಇದರ ಹಣ್ಣುಗಳು ಮಧ್ಯಮ ಗಾತ್ರ ಹೊಂದಿದ್ದು, ಒಂದು ಹೆಕ್ಟೇರಿಗೆ 35-40 ಟನ್ ಇಳುವರಿ ನೀಡುತ್ತದೆ.
ಅರ್ಕಾ ಆಭಾ- ಈ ತಳಿ 140 ದಿನಗಳಲ್ಲಿ ಬೆಳೆ ಮುಗಿಯುತ್ತದೆ. ಹಣ್ಣುಗಳು ಸುಮಾರು 75 ಗ್ರಾಂ ತೂಕವಿರುತ್ತದೆ. ಸೊರಗು ರೋಗ ನಿರೋಧಿಸುವ ಶಕ್ತಿಯನ್ನು ಹೊಂದಿದೆ. ಒಂದು ಹೆಕ್ಟೇರಿಗೆ 43 ಟನ್ ಇಳುವರಿ ನೀಡುತ್ತದೆ.
ಅರ್ಕಾ ಅಲೋಕ್- ಈ ಬೆಳಳೆಯು 130 ದಿನಗಳಲ್ಲಿ ಮುಗಿಯುತ್ತದೆ. ಹಣ್ಣುಗಳು ಗಾತ್ರದಲ್ಲಿ 120 ಗ್ರಾಂ ದೊಡ್ಡದಾಗಿದ್, ಗಟ್ಟಿಯಾಗಿರುತ್ತವೆ. ಸೊರಗು ರೋಗವನ್ನು ನಿರೋಧಿಸುವ ಶಕ್ತಿ ಹೊಂದಿದೆ. ಹೆಕ್ಟೇರಿಗೆ 46 ಟನ್ ಇಳುವರಿ ನೀಡುತ್ತದೆ.
ಸಂಕ್ರಾಂತಿ- ಈ ತಳಿಯ ಹಣ್ಣುಗಳು ಮಧ್ಯಮ ಗಾತ್ರದಿಂದ ಕೂಡಿದ್ದು ದುಂಡನೆಯಾಕಾರ ಹೊಂದಿದೆ. ಇದೊಂದು ಮಧ್ಯಮ ಅವಧಿಯ ತಳಿಯಾಗಿದ್ದು 95-105 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಇದು ಎಲೆ ಮುದುಡು ನಂಜು ರೋಗಕ್ಕೆ ನಿರೋಧಕ ಶಕ್ತಿ ಪಡೆದಿದೆ. 40-45 ಟನ್ ಇಳುವರಿ ನೀಡುತ್ತದೆ.
ಸಂಕರಣ ತಳಿಗಳು
ಅರ್ಕಾ ಅನನ್ಯ- ಇದು ಅತೀ ಹೆಚ್ಚು ಇಳುವರಿ ನೀಡುವ ತಳಿಗಳಲ್ಲಿ ಒಂದಾಗಿದೆ. ಎಲೆ ಮುದುಡು ಹಾಗೂ ದುಂಡಾಣು ಸೊರಗು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಹಣ್ಣುಗಳು ಗುಂಡಾಗಿರುತ್ತವೆ. ಕಾಯಿಗಳು ಹಣ್ಣಾದಾಗ ಕಡು ಕೆಂಪು ಬಣ್ಣಕ್ಕೆ ತಿರುಗುತ್ತವೆ. 140 ದಿನಗಳಲ್ಲಿ ಪ್ರತಿ ಹೆಕ್ಟೇರಿಗೆ ಸುಮಾರು 65 ರಿಂದ 70 ಟನ್ ಇಳುವರಿ ಕೊಡುತ್ತದೆ.
ಇದನ್ನೂ ಓದಿ : ಸಿಬಿಲ್ ಸ್ಕೋರ್ ಮೊಬೈಲ್ ನಲ್ಲಿಯೇ ಉಚಿತವಾಗಿ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಅರ್ಕಾ ರಕ್ಷಕ್– ಇದು ಸಹ ಹೆಚ್ಚು ಇಳುವರಿ ಕೊಡುವ ತಳಿಯಾಗಿದೆ. ಎಲೆ ಮುರುಟು ನಂಜುರೋಗ, ದುಂಡು ರೋಗಾಣುವಿನ ಸೊರಗು ಹಾಗೂ ಹಾಗೂ ಎಲೆಚುಕ್ಕೆ ರೋಗ ನಿರೋಧಿಸುವ ಶಕ್ತಿ ಹೊಂದಿದೆ. ನಾಟಿ ಮಾಡಿದ 65 ರಿಂದ 70 ದಿನಗಳ ನಂತರ ಮೊದಲನೇ ಕಟಾವು ಮಾಡಬಹುದು. ಎಲ್ಲಾ ಕಾಲದಲ್ಲಿಯೂ ಈ ತಳಿಯನ್ನು ಬಿತ್ತಬಹುದು. 140 ರಿಂದ 145 ದಿನಗಳಲ್ಲಿ ಪ್ರತಿ ಹೆಕ್ಟೇರಿಗೆ 75 ರಿಂದ 80 ಸರಾಸರಿ ಇಳುವರಿಯನ್ನು ಪಡೆಯಬಹುದು.
ಅರ್ಕಾ ಸಾಮ್ರಾಟ್- ಅಧಿಕ ಇಳುವರಿ ನೀಡುವ ತಳಿಗಳಲ್ಲಿ ಅರ್ಕಾ ಸಾಮ್ರಾಟ್ ತಳಿಯೂ ಒಂದಾಗಿದೆ. ಇದು ಸಹ ಎಲೆ ಮುರುಟು ನಂಜುರೋಗ, ದುಂಡು ರೋಗಾಣುವಿನ ಸೊರಗು ರೋಗ ಹಾಗೂ ಎಲೆಚುಕ್ಕೆ ರೋಗ ನಿರೋಧಿಸುವ ಶಕ್ತಿ ಹೊಂದಿದೆ. ಹಣ್ಣುಗಳು ಗುಂಡಾಗಿದ್ದು, ಪ್ರತಿ ಹಣ್ಣಿನ ತೂಕ ಸರಾಸರಿ 90 ರಿಂದ 100 ಗ್ರಾಂ ಹೊಂದಿರುತ್ತದೆ. ಹಣ್ಣುಗಳು ದಟ್ಟ ಕೆಂಪು ಬಣ್ಣ ಹೊಂದಿದ್ದು, ಇದನ್ನೂ ಸಹ ವರ್ಷದ ಎಲ್ಲಾ ಕಾಲದಲ್ಲಿ ಬೆಳೆಯಬಹುದು. ಪ್ರತಿ ಹೆಕ್ಟೇರಿಗೆ 140 ರಿಂದ 150 ದಿನಗಳಲ್ಲಿ ಸರಾಸರಿ 80 ರಿಂದ 85 ಟನ್ ಸರಾಸರಿ ಇಳುವರಿ ನೀಡುತ್ತದೆ.