ಬೆಳೆ ಹಾನಿ ಪರಿಹಾರ ಚೆಕ್ ಮಾಡಲು ಹೊಸ ಆ್ಯಪ್ ಬಿಡುಗಡೆ

Written by By: janajagran

Published on:

ರೈತರಿಗಿಲ್ಲದೆ ಸಂತಸದ ಸುದ್ದಿ. ಸರ್ಕಾರದ ವಿವಿಧ ಯೋಜನೆಗಳ ಮೂಲಕ ರೈತರ ಖಾತೆಗೆ ಹಣ ಜಮೆಯಾಗಿದ್ದನ್ನು ಹಾಗೂ ಕೋವಿಡ್ ಸಂದರ್ಭದಲ್ಲಿ ಘೋಷಿಸಿದ ಪರಿಹಾದ ಹಣದ ಸ್ಟೇಟಸ್ ಕ್ಷಣಾರ್ಧದಲ್ಲಿ DBT App ಮೂಲಕ ಮನೆಯಲ್ಲಿಯೇ ಕುಳಿತು ನೋಡಬಹುದು.

ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಬೆಳೆ ಪರಿಹಾರ, ಕೋವಿಡ್ ಪ್ಯಾಕೇಜ್ ಹಣ, ಬೀಜ, ರಸಾಯನಿಕ ಗೊಬ್ಬರದ ಸಬ್ಸಿಡಿ ಹಣ, ಕರ್ನಾಟಕ ಸರ್ಕಾರದ ರೈತರಿಗೆ ಪಿಎಂ ಕಿಸಾನ್ ಯೋಜನೆಯಡಿ ಜಮೆ ಮಾಡುವ ಪಿಎಂ ಕಿಸಾನ್, ಬೆಳೆಸಾಲ ಮನ್ನಾ, ಉದ್ಯೋಗ ಖಾತ್ರಿ ಕೂಲಿ ಹಣ, ಫಸಲ್ ಬಿಮಾ ಯೋಜನೆ, ಬೆಂಬಲ ಬೆಲೆಯಡಿ ಹಣ ಜಮೆ ಸೇರಿದಂತೆ ಇನ್ನಿತರ ಸರ್ಕಾರದ ಯೋಜನೆಗಳಿಂದ ಜಮೆಯಾಗುವ ಹಣವನ್ನು ಮೊಬೈಲ್ ನಲ್ಲಿಯೇ DBT APP (Direct Benefit Transfer) ನೋಡಬಹುದು.

ಹೌದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ) ಅಭಿವೃದ್ಧಿ ಪಡಿಸಿರುವ ಡಿಬಿಟಿ (ನೇರ ನಗದು ವರ್ಗಾವಣೆ) ಎಂಬ ಹೊಸ ಆ್ಯಪ್ ನ್ನು ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಲು ನೇರ ನಗದು ವರ್ಗಾವಣೆ (ಡಿಬಿಟಿ) ಮೊಬೈಲ್ ಆ್ಯಪ್ ಅನ್ನು ಮುಖ್ಯಮಂತ್ರಿಯವರು ಬಿಡುಗಡೆ ಮಾಡಿದ್ದಾರೆ.

ಈ ಡಿಬಿಟಿ ಯೋಜನೆಯಲ್ಲಿ ಆಧಾರ್ ನಂಬರ್ ಯಾವ ಬ್ಯಾಂಕ್ ಅಕೌಂಟಿಗೆ ಲಿಂಕ್ ಆಗಿದೆಯೋ ಆ ಬ್ಯಾಂಕಿನಲ್ಲಿ ಜಮೆಯಾಗುವ ಎಲ್ಲಾ ಹಣದ ಮಾಹಿತಿ ಸಿಗಲಿದೆ.ನಿಮ್ಮ ಆಧಾರ್ ನಂಬರಿಗೆ ಇಲ್ಲಿಯವರೆಗ ಯಾವ ಯಾವ ಯೋಜನೆಯಲ್ಲಿ ಹಣ ಸಂದಾಯವಾಗಿದೆ ಎಂಬ ಸಂಪೂರ್ಣ ಮಾಹಿತಿ ಸಿಗಲಿದೆ.

.ರಾಜ್ಯದಲ್ಲಿ ಈವರೆಗೆ ಸುಮಾರು 120 ಯೋಜನೆಗಳನ್ನು ಡಿಬಿಟಿ ಆ್ಯಪ್ ನೊಂದಿಗೆ ಜೋಡಣೆ ಮಾಡಲಾಗಿದ್ದು,  ಕಳೆದ ಎರಡು ವರ್ಷಗಳಲ್ಲಿ ಸರ್ಕಾರ 12 ಸಾವಿರ ಕೋಟಿಗೂ ಅಧಿಕ ಹಣವನ್ನು ಆಧಾರ್ ಜೋಡಣೆಯಾದ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಈ ವ್ಯವಸ್ಥೆಯಿಂದ ಮದ್ಯವರ್ತಿಗಳಿಂದ ಹಣ ದುರುಪಯೋಗವಾಗದಂತೆ ತಡೆಯಬಹುದು. ಕೋವಿಡ್ ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ  ರಾಜ್ಯ ಸರ್ಕಾರ ಘೋಷಿಸಿದ ಎಲ್ಲಾ ಪ್ಯಾಕೇಜುಗಳನ್ನು ಡಿಬಿಟಿ ಮೂಲಕವೇ ಪಾವತಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಪಿಎಂ ಕಿಸಾನ್ ಗ್ರಾಮವಾರು ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

ಬಹಳಷ್ಟು ರೈತರಿಗೆ ಇಲ್ಲಿಯವರೆಗೆ ಯಾವ ಬ್ಯಾಂಕ್ ಖಾತೆಗೆ ಆಧಾರ್  ಜೋಡಣೆಯಾಗಿದೆ ಎಂಬ ಮಾಹಿತಿ ಗೊತ್ತಿರುವುದಿಲ್ಲ. ಡಿಬಿಟಿ ಆ್ಯಪ್ ದಿಂದಾಗಿ ಯಾವ ಬ್ಯಾಂಕಿಗೆ ಆಧಾರ್ ಲಿಂಕ್ ಆಗಿದೆ ಎಂಬ ಮಾಹಿತಿ ಗೊತ್ತಾಗುತ್ತದೆ. ಅಷ್ಟೇ ಅಲ್ಲ, ಸರ್ಕಾರವು ಯಾವ ಬ್ಯಾಂಕ್ ಖಾತೆಗೆ ನಗದು ಸೌಲಭ್ಯ ಜಮೆ ಮಾಡಿದೆ ಎಂಬ ಮಾಹಿತಿಯೂ ಗೊತ್ತಾಗುತ್ತದೆ.

DBT APP ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

ಗೂಗಲ್ ನಲ್ಲಿ DBT Karnataka ಎಂದು ಟೈಪ್ ಮಾಡಬೇಕು ಆಗ DBT Karnataka –App ಮೇಲೆ ಕ್ಲಿಕ್ ಮಾಡಬೇಕು. ನಂತರ ಆ್ಯಪ್ ಓಪನ್ ಆಗುತ್ತದೆ. ಅಥವಾ

https://play.google.com/store/apps/details?id=com.dbtkarnataka&hl=en_IN&gl=US

ಲಿಂಕ್ ಮೇಲೆ  ಕ್ಲಿಕ್ ಮಾಡಿ  ಇನ್ಸ್ಟಾಲ್ ಮಾಡಬಹುದು. ಗೂಗಲ್ ಪ್ಲೇ ಸ್ಟೋರ್ ದಿಂದಲೂ ಡೌನ್ಲೋಡ್ ಮಾಡಿಕೊಳ್ಳಬಹುದು. ಇನ್ಸ್ಟಾಲ್ ಮಾಡಿದ ನಂತರ ಆಧಾರ್ ಕಾರ್ಡಿಗೆ ನೋಂದಣಿಯಾದ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ. OTP ನಮೂದಿಸಿದ ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ  ನಿಮ್ಮ ಹೆಸರು, ಲಿಂಗ ಪುರುಷ ಅಥವಾ ಮಹಿಳೆ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಹುಟ್ಟಿದ ದಿನಾಂಕ ಮತ್ತು ಮೊಬೈಲ್ ನಂಬರ್ ನಮೂದಿಸಿದ ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಸೆಲೆಕ್ಟ್ ಬೆನಿಫಿಷಯರಿ ಆಯ್ಕೆ ಮಾಡಿಕೊಂಡು ಸೀಕ್ರೇಟ್ ಪಿನ್ ನಮೂದಿಸಿ ಲಾಗಿನ್ ಆಗಬೇಕು.

DBT APP ಮೂಲಕ ಯಾವ್ಯಾವ ಮಾಹಿತಿ ಸಿಗಲಿದೆ:

ಡಿಬಿಟಿ ಆ್ಯಪ್ ಸಹಾಯದಿಂದಾಗಿ ಇಲ್ಲಿಯವರೆಗೆ ಸರ್ಕಾರದ ವಿವಿಧ ಯೋಜನೆಗಳಿಂದ ಜಮೆಯಾದ ಹಣ , ಪಾವತಿ ಮೊತ್ತ, ಪಾವತಿ ದಿನಾಂಕ, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಯುಟಿಆರ್ ಸಂಖ್ಯೆ ತೋರಿಸುತ್ತದೆ.

Leave a Comment