ಮಳೆಯಿಂದ ಬೆಳೆಹಾನಿಯಾದಲ್ಲಿ ಇಲ್ಲಿ ನೀಡಲಾದ ನಂಬರಿಗೆ ಕರೆ ಮಾಡಿ

Written by Ramlinganna

Published on:

Crop loss compensation information : ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಿಮ್ಮ ಬೆಳೆ ಹಾನಿಯಾಗಿದ್ದರೆ ಯಾರಿಗೆ ಕರೆ ಮಾಡಬೇಕು? ಯಾರಿಗೆ ಸಂಪರ್ಕಿಸಬೇಕು? ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡುತ್ತಿರಬಹುದು. ಈಗ ಚಿಂತೆ ಮಾಡಬೇಕಿಲ್ಲ.ಇಲ್ಲಿ ಕೆಳಗೆ ನೀಡಲಾದ ನಂಬರುಗಳಿಗೆ ಕರೆ ಮಾಡಿ ದೂರು ನೀಡಿ ಬೆಳೆ ವಿಮೆ ಪಡೆಯಬಹುದು.

ಪ್ರಸ್ತುತ ಸಾಲಿನಲ್ಲಿ ಆಗಸ್ಟ್ ಎರಡನೇ ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೆಸರು, ಉದ್ದು, ಸೋಯಾ ಅವರೆ ಮತ್ತು ತೊಗರಿ ಬೆಳೆಗಳು ಹಾನಿಯಾಗುವ ಸಂಭವವಿದ್ದು, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಬೆಳೆವಿಮೆ ಮಾಡಿಸಿ ಬೆಳೆಹಾನಿಯಾದ ಕಲಬುರಗಿ ಜಿಲ್ಲೆಯ ಎಲ್ಲಾ ರೈತರು ಸ್ಥಳೀಯ ಪ್ರಕೃತಿ ವಿಕೋಪದಡಿ ಮಳೆಬಂದ 72 ಗಂಟೆಗಳಲ್ಲಿ (Localized calamity ಇಫ್ಕೋ ಟೋಕಿಯೋ ಜನರಲ್ ಇನ್ಸುರೆನ್ಸ್ ಕಂಪನಿಯ ಟೋಲ್ ಫ್ರೀ ನಂಬರ್ 1800-200-5142 ಗೆ ಕರೆ ಮಾಡಿ ದೂರು ನೀಡಲು  ಅಥವಾ ಟೋಲ್ ಪ್ರೀ ನಂಬರ್‌ಗೆ ದೂರು ನೀಡಲು ತಾಂತ್ರಿಕ ಸಮಸ್ಯೆಯಾದ್ದಲ್ಲಿ ರೈತರು ತಾಲ್ಲೂಕಿನ ಈ ಕೆಳಕಂಡ ಸಹಾಯಕ ನಿರ್ದೇಶಕರ ಕಚೇರಿಯಲ್ಲಿನ ಇಪ್ಕೋ ಟೋಕಿಯೊ ಪ್ರತಿನಿಧಿಗೆ ಸೂಕ್ತ ದಾಖಲಾತಿಗಳೊಂದಿಗೆ ಲಿಖಿತವಾಗಿ ದೂರು ಸಲ್ಲಿಸಬೇಕೆಂದು ಕಲಬುರಗಿ ಜಿಲ್ಲಾಧಿಕಾರಿಗಳಾದ ಬಿ.  ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.

ಇದನ್ನೂಓದಿ

ಇಫ್ಕೋ ಟೋಕಿಯೋ ಜಿಲ್ಲಾ ಪ್ರತಿನಿಧಿ    ಶಿವ ಎಸ್.ಬಿ. ಮೊಬೈಲ್ ಸಂಖ್ಯೆ 6362954334, ಆಳಂದ-ಸುನೀಲ ಮನು ಪವಾರ್ 9845848208,  ಯಡ್ರಾಮಿ-ಭೀಮಪ್ಪ ಎಂ. ಬಳಬಟ್ಟಿ 9844588639, ಅಫಜಲಪೂರ-ಗಣಪತಿ ಹೊನ್ನಳ್ಳಿ 8217050978, ಕಮಲಾಪೂರ-ಸಂತೋಷ ರಾಗಿ 9972320999, ಚಿತ್ತಾಪೂರ-ರಾಹುಲ್ ಪಾಟೀಲ್ 7619317156, ಕಲಬುರಗಿ-ಸೋಮಲಿಂಗಯ್ಯ ಶರಣಯ್ಯ ಹಿರೇಮಠ 9740107575, ಚಿಂಚೋಳಿ-ಕಿಶನ್ ನಾಯಕ್ 8747025295, ಸೇಡಂ-ಆಕಾಶ್ ರೆಡ್ಡಿ 7022767246, ಜೇವರ್ಗಿ-ಮಲ್ಲಿಂಗರಾಯ 7760545692, ಕಾಳಗಿ-ಚಾಂದ್ ಪಟೇಲ್ 8095384057 ಹಾಗೂ ಶಹಾಬಾದ-ಗುಂಡೇರಾವ್ 7338574943.

2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ತೊಗರಿ, ಹೆಸರು, ಉದ್ದು, ಸೋಯಾಬೀನ್ ಹತ್ತಿ ಹಾಗೂ ಇತರೆ ಬೆಳೆಗಳಿಗೆ ಒಟ್ಟು 301009 ರೈತರು 361590.49 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ವಿಮೆ ನೋಂದಣಿ ಮಾಡಿಸಿರುತ್ತಾರೆ.

Crop loss compensation information  ನಿಮ್ಮ ಜಿಲ್ಲೆಯಲ್ಲಿ ಯಾವ ವಿಮಾ ಕಂಪನಿಗೆ ಕರೆ ಮಾಡಬೇಕು?

ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ? ಯಾರಿಗೆ ಸಂಪರ್ಕಿಸಬೇಕು ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಜಿಲ್ಲಾವಾರು ಮಾಹಿತಿ.

ಯಾವ ಜಿಲ್ಲೆಯ ರೈತರು ಯಾವ ವಿಮಾ ಕಂಪನಿಗೆ ದೂರು ನೀಡಬೇಕು?

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೇರೆ ಬೇರೆ ವಿಮಾ ಕಂಪನಿಗಳನ್ನು ನಿಯೋಜಿಸಲಾಗಿರುತ್ತದೆ.ಹೌದು,  ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/HomePages/frmKnowYourInsCompany.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕರ್ನಾಟಕದಲ್ಲಿ ಯಾವ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬ ಪಟ್ಟಿ ಕಾಣಿಸುತ್ತದೆ. ಆ ವಿಮಾ ಕಂಪನಿಯ ಸಹಾಯವಾಣಿ ನಂಬರಿಗೆ ಕರೆ ಮಾಡಿ ತಿಳಿಸಬೇಕು. ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿ ನಿಯೋಜಿಸಲಾಗಿದೆ ಎಂಬುದನ್ನು ನೀವು ನೆನಪಿಟ್ಟುಕೊಂಡು ಇಲ್ಲಿ ಕೆಳಗೆ ನೀಡಲಾದ ವಿಮಾ ಕಂಪನಿಯ ಸಹಾಯವಾಣಿ ನಂಬರಿಗೆ ಕರೆ ಮಾಡಬೇಕು. ನಿಮ್ಮ ಜಿಲ್ಲೆಯ ವಿಮಾ ಕಂಪನಿಯ ಸಹಾಯವಾಣಿ ನಂಬರ್ ಗೊತ್ತಿಲ್ಲವೇ? ಇಲ್ಲಿದೆ ನೋಡಿ ಸಹಾಯವಾಣಿ ನಂಬರ್ ಗಳ ಮಾಹಿತಿ.

ಜಿಲ್ಲಾವಾರು ವಿಮಾ ಕಂಪನಿಗಳ ಸಹಾಯವಾಣಿ ನಂಬರ್ ಗಳು

ರಾಜ್ಯದ ವಿವಿಧ ಜಿಲ್ಲೆಗಳಿಗೆ ಒಟ್ಟು ಎಂಟು ವಿಮಾ ಕಂಪನಿಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ ನಿಮ್ಮ ಜಮೀನಿನ ಮೇಲೆ ಸಾಲವೆಷ್ಟಿದೆ? ಇಲ್ಲೇ ಚೆಕ್ ಮಾಡಿ

ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿ ಸಹಾಯವಾಣಿ ನಂಬರ್ 1800 425 0505, ಯೂನಿವರ್ಸಲ್ ಸೋಂಪೋ ಸಹಾಯವಾಣಿ ನಂಬರ್ 1800 200 5142, ಎಸ್.ಬಿ.ಐ ವಿಮಾ ಕಂಪನಿಯ ಸಹಾಯವಾಣಿ 1800 180 1551, 1800 209 1111, ಹೆಚ್.ಡಿಎಫ್ಸಿ ಅರ್ಗೋ 1800 266 0700, ಫ್ಯೂಚರ್ ಜನರಲಿ ಸಹಾಯವಾಣಿ ನಂಬರ್ 1800 266 4141, ಐಸಿಐಸಿ ಲೋಂಬೋರ್ಡ್  ಸಹಾಯವಾಣಿ1800 103 7712, ಬಜಾಜ್ ಅಲಾಯನ್ಸ್ ಜಿಐಸಿ 1800 209 5959, ರಿಲಾಯನ್ಸ್ ಜನರಲ್ ಇನ್ಸುರೆನ್ಸ್ ಕಂ. ಲಿಮಿಟೆಡ್ ಸಹಾಯವಾಣಿ ನಂಬರ್1800 102 4088 ಗೆ ಸಂಪರ್ಕಿಸಲು ಕೋರಲಾಗಿದೆ.

ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಕುರಿತಂತೆ  ರೈತರು 080 2656 4535, ಅಥವಾ 080 2656 4536 ಗೆ ಂಪರ್ಕಿಸಬಹುದು.

Leave a Comment