Crop insurance money will be release : ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್ ದೊರೆತಿದೆ. ರಾಜ್ಯದ 13 ಲಕ್ಷ ಕ್ಕೂ ಹೆಚ್ಚು ರೈತರ ಖಾತೆಗೆ ಬೆಳೆ ವಿಮೆ ಪರಿಹಾರ ಹಣ ಜಮೆಯಾಗಲಿದೆ.
ಹೌದು, ರಾಜ್ಯದ 13 ಲಕ್ಷಕ್ಕೂ ಹೆಚ್ಚಿನ ರೈತರಿಗೆ 1400 ಕೋಟಿ ರೂಪಾಯಿಯವರೆಗೆ ಬೆಳೆ ವಿಮೆ ಪರಿಹಾರ ಹಣ ಜಮೆಯಾಗಲಿದೆ. ಈ ಕುರಿತು ಸಚಿವ ಚೆಲುವರಾಯ ಸ್ವಾಮಿಯವರು ಮಾಹಿತಿ ನೀಡಿದ್ದಾರೆ. ಇದೇ ತಿಂಗಳ ಅಂತ್ಯದ ವೇಳೆಗೆ ಬೆಳೆ ವಿಮೆ ಹಣವನ್ನು ರೈತರ ಖಾತೆಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದ್ದಾರೆ.
ಬೆಳೆ ವಿಮೆ ಹಣ ಯಾವ ರೈತರಿಗೆ ಎಷ್ಟು ಜಮೆಯಾಗಲಿದೆ? ನೀವು ಬೆಳೆ ವಿಮೆ ಹಣ ಪಾವತಿಸಿದ್ದರೆ ನಿಮ್ಮ ಅರ್ಜಿಯ ಸ್ಟೇಟಸನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ಮಾಹಿತಿ.
Crop insurance money will be release ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಬೆಳೆ ವಿಮೆ ಬಿಡುಗಡೆ
ಪ್ರಸಕ್ತ ಸಾಲಿನ ಹಾಗೂ ಕಳೆದ ಸಾಲಿನ ಹಂಗಾಮಿಗೆ ಮುಂಗಾರು ಹಾಗೂ ಹಿಂಗಾರು ಬೆಳೆಗಳ ವಿಮೆ ಮಾಡಿಸಿದ ರೈತರಿಗೆ ಇದು ಸಂತಸದ ಸುದ್ದಿಯಾಗಿದೆ. ಇದೇ ತಿಂಗಳ ಅಂತ್ಯದಲ್ಲಿ ರೈತರಿಗೆ ಭರ್ಜರಿ ಗುಡ್ ನ್ಯೂಸ ಆಗಲಿದೆ. ಹೌದು, ಈ ವರ್ಷ ಬರಗಾಲದಿಂದ ತತ್ತರಿಸಿರುವ ರೈತರು ನಿರಾಳರಾಗುವ ಸಾಧ್ಯತೆಯಿದೆ. ಮೊದಲೇ ಸಂಕಷ್ಟದಲ್ಲಿರುವ ರೈತರಿಗೆ ಅತೀ ಶೀಘ್ರದಲ್ಲಿ ಬೆಳೆ ವಿಮೆ ಹಣ ಜಮೆಯಾದರೆ ಮುಂದಿನ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಖರೀದಿಗೆ ಸಹಾಯವಾಗಲಿದೆ.
ನಿಮ್ಮಅರ್ಜಿ ಸ್ಟೇಟಸ್ ಒಂದು ವೇಳೆ ವಿಮೆ ಹಣ ಬಿಡುಗಡೆಯಾದರೆ ಎಷ್ಟು ವಿಮೆ ಹಣ ಜಮಯಾಗಬಹುದು ಎಂಬುದನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಬೆಳೆ ವಿಮೆ ಅರ್ಜಿಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಬೆಳೆ ವಿಮೆ ಪಾವತಿಸಿದ ರೈತರು ತಮ್ಮ ಅರ್ಜಿಯ ಸ್ಟೇಟಸನ್ನು ಮೊಬೈಲ್ ನಲ್ಲೇ ಚೆಕ್ ಮಾಡಲು ಈ
https://samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ವರ್ಷದ ಆಯ್ಕೆ ಯಲ್ಲಿ 2022-2023 ಆಯ್ಕೆ ಮಾಡಿಕೊಳ್ಳಬೇಕು. ನಂತರ ಖಾರೀಪ್ ಆಯ್ಕೆ ಮಾಡಿಕೊಳ್ಳಬೇಕು.
ಒಂದು ವೇಳೆ ನೀವು ಪ್ರಸಕ್ತ ಸಾಲಿನ ಬೆಳೆ ವಿಮೆ ಚೆಕ್ ಮಾಡಬೇಕಾದರೆ 2023-2024 ಆಯ್ಕೆ ಮಾಡಿಕೊಂಡು ನಂತರ ಋತು ಆಯ್ಕೆಯಲ್ಲಿ ಖಾರೀಪ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ / G0 ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗಲಿದೆ. ಅಲ್ಲಿ Premium Calcualtor, Crop you can insure, check status, Know your Insurance Co, Find Gram Panchayat and Crop Insurance Detail on Survey No ಈಗೆ ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ನೀವು ಚೆಕ್ ಸ್ಟೇಟಸ್ Check Status ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳಲಿದೆ.
ಇದನ್ನೂ ಓದಿ : ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ
ನಿಮ್ಮ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ನಂತರ Search ಮೇಲೆ ಒತ್ತಬೇಕು. ನಂತರ ಅಲ್ಲಿ ಪೇಜ್ ಓಪನ್ ಆಗುವುದು. ಅಲ್ಲಿ ನಿಮ್ಮ ಅರ್ಜಿ ಸ್ವೀಕೃತವಾಗಿದೆಯೋ ಇಲ್ಲವೋ ಚೆಕ್ ಮಾಡಬಹುದು. ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಿ ನಿಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಬಹುದು ಎಂಬುದನ್ನು ಚೆಕ್ ಮಾಡಬಹುದು.