Cropinsurance toll free number ಇತ್ತೀಚೆಗೆ ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ನಿಮ್ಮ ಬೆಳೆ ಹಾನಿಯಾಗಿದೆಯೇ? ಅಥವಾ ಮಳೆಯಿಲ್ಲದೆ ನಿಮ್ಮ ಬೆಳೆ ಹಾನಿಯಾಗಿದೆಯೇ? ಕೂಡಲೇ ಈ ನಂಬರಿಗೆ ಕರೆ ಮಾಡಿ ವಿಮಾ ಸೌಲಭ್ಯ ಪಡೆಯಿರಿ.
ಹೌದು, ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಹಾನಿಯಾಗಿದ್ದರೆ ಕೂಡಲೇ ರೈತರು ವಿಮಾ ಕಂಪನಿಗೆ ಕರೆ ಮಾಡಬೇಕು. ವಿಮಾ ಕಂಪನಿಗೆ ಕರೆ ಮಾಡಿದರೆ ಮಾತ್ರ ನಿಮಗೆ ಬೆಳೆ ವಿಮೆ ಹಣ ಜಮೆಯಾಗುತ್ತದೆ.
ವಿಮಾ ಕಂಪನಿಗೆ ನೀವು ಕರೆ ಮಾಡದಿದ್ದರೆ ಬೆಳೆ ಹಾನಿಯಾಗಿದ್ದರೂ ಸಹ ನೀವು ವಿಮೆ ಪಾವತಿಸಿದ್ದರೂ ಸಹ ನಿಮಗೆ ವಿಮೆ ಹಣ ಜಮೆಯಾಗುವುದಿಲ್ಲ. ಹಾಗಾದರೆ ಯಾರಿಗೆ ಕರೆ ಮಾಡಬೇಕೆಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
ವಿಮಾ ಕಂಪನಿಗೇಕೆ ಕರೆ ಮಾಡಬೇಕು?
ರೈತರು ಬೆಳೆ ವಿಮೆ ಮಾಡಿಸುತ್ತಾರೆ. ಆದರೆ ಬೆಳೆ ಹಾಳಾಗಿರುವ ಕುರಿತು ವಿಮಾ ಕಂಪನಿಗೆ ತಿಳಿಸದೆ ವಿಮೆ ಹಣ ಜಮೆಯಾಗಿಲ್ಲವೆಂದು ಕೊರಗುತ್ತಾರೆ. ಯಾವುದೇ ವಿಮಾ ಕಂಪನಿಗೆ ಬೆಳೆ ಹಾಳಾದ 72 ಗಂಟೆಯೊಳಗೆ ತಿಳಿಸಬೇಕಾಗುತ್ತದೆ. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ಕರೆ ಮಾಡಿದ ರೈತರ ಜಮೀನಿಗೆ ಬಂದು ಬೆಳೆ ಪರಿಶೀಲನೆ ಮಾಡುತ್ತಾರೆ. ನಂತರ ಬೆಳೆ ವಿಮೆ ಪಾವತಿಸಲು ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತಾರೆ. ಆಗ ರೈತರಿಗೆ ವಿಮೆ ಹಣ ಜಮೆಯಾಗುತ್ತದೆ.
ನಿಮ್ಮ ಜಿಲ್ಲೆಯಲ್ಲಿ ನೀವು ಯಾವ ವಿಮಾ ಕಂಪನಿಗೆ ಕರೆ ಮಾಡಬೇಕು? ಇಲ್ಲಿದೆ ಮಾಹಿತಿ
ರೈತರು ಆಯಾ ಜಿಲ್ಲೆಗೆ ಬೇರೆ ಬೇರೆ ವಿಮಾ ಕಂಪನಿಗಳನ್ನು ನಿಯೋಜಿಸಿರುತ್ತಾರೆ. ಹೌದು, ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬುದನ್ನು ಚೆಕ್ ಮಾಡಲು ಈ
ಮಳೆಯಿಂದ ನಿಮ್ಮ ಬೆಳೆ ಹಾನಿಯಾಗಿದ್ದರೆ ನೀವು ನಿಮ್ಮ ಜಿಲ್ಲೆಯ ವಿಮಾ ಕಂಪನಿಗೆ ಮಾತಾಡಬೇಕೆಂದುಕೊಂಡಿದ್ದರೆ ಹಾಗೂ ನಿಮಗೆ ವಿಮಾ ಕಂಪನಿಯ ನಂಬರ್ ಗೊತ್ತಿಲ್ಲದಿದ್ದರೆ ನೀವು ಈ
https://samrakshane.karnataka.gov.in/
ನಂಬರಿಗೆ ಕರೆ ಮಾಡಬೇಕು. ನಂತರ ಮುಂದೆ / Go ಮೇಲೆ ಕ್ಲಿಕ್ ಮಾಡಬೇಕು. Know your Insurance co. ಮೇಲೆ ಕ್ಲಿಕ್ ಮಾಡಬೇಕು. ಆಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಯಾವ ಜಿಲ್ಲೆಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ. ನಿಮ್ಮ ಜಿಲ್ಲೆಯ ಎದುರುಗಡೆ ತೋರಿಸಿರುವ ಕಂಪನಿಗಳೇ ನಿಮ್ಮ ಜಿಲ್ಲೆಯ ವಿಮಾ ಕಂಪನಿಗಳಾಗಿವೆ. ಅದೇ ನಂಬರಿಗೆ ನೀವು ಕರೆ ಮಾಡಿ ದೂರು ನೀಡಬೇಕಾಗುತ್ತದೆ. ಹಾಗಾದರೆ ನಿಮ್ಮ ಜಿಲ್ಲೆಯ ವಿಮಾ ಕಂಪನಿಯ ಸಹಾಯವಾಣಿ ನಂಬರ್ ಗೊತ್ತಿಲ್ಲವೇ? ಇಲ್ಲಿದೆ ನೋಡಿ ಸಹಾಯವಾಣಿ ನಂಬರ್ ಗಳು.
Cropinsurance toll free number ಜಿಲ್ಲಾವಾರು ರೈತರು ವಿಮಾ ಕಂಪನಿಗಳಿಗೆ ಸಂಪರ್ಕಿಸುವ ಸಹಾಯವಾಣಿ
ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿ ಸಹಾಯವಾಣಿ ನಂಬರ್ 1800 425 0505, ಯೂನಿವರ್ಸಲ್ ಸೋಂಪೋ ಸಹಾಯವಾಣಿ ನಂಬರ್ 1800 200 5142, ಎಸ್.ಬಿ.ಐ ವಿಮಾ ಕಂಪನಿಯ ಸಹಾಯವಾಣಿ 1800 180 1551, 1800 209 1111, ಹೆಚ್.ಡಿಎಫ್ಸಿ ಅರ್ಗೋ 1800 266 0700, ಫ್ಯೂಚರ್ ಜನರಲಿ ಸಹಾಯವಾಣಿ ನಂಬರ್ 1800 266 4141, ಐಸಿಐಸಿ ಲೋಂಬೋರ್ಡ್ ಸಹಾಯವಾಣಿ1800 103 7712, ಬಜಾಜ್ ಅಲಾಯನ್ಸ್ ಜಿಐಸಿ 1800 209 5959, ರಿಲಾಯನ್ಸ್ ಜನರಲ್ ಇನ್ಸುರೆನ್ಸ್ ಕಂ. ಲಿಮಿಟೆಡ್ ಸಹಾಯವಾಣಿ ನಂಬರ್1800 102 4088 ಗೆ ಸಂಪರ್ಕಿಸಲು ಕೋರಲಾಗಿದೆ.
ಇದನ್ನೂ ಓದಿ : ನಿಮ್ಮ ಜಮೀನು ಯಾರ ಹೆಸರಿನೊಂದಿಗೆ ಎಷ್ಟು ಎಕರೆ ಜಂಟಿಯಾಗಿದೆ? ಇಲ್ಲೇ ಚೆಕ್ ಮಾಡಿ
ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ಕುರಿತಂತೆ ರೈತರು 080 2656 4535, ಅಥವಾ 080 2656 4536 ಗೆ ಂಪರ್ಕಿಸಬಹುದು.
ಪ್ರಸಕ್ತ ಸಾಲಿನಲ್ಲಿ ಅಂದರೆ ಜುಲೈ ತಿಂಗಳಲ್ಲಿ ಅತೀ ಮಳೆಯಿಂದಾಗಿ ರೈತರ ಬೆಳೆ ಹಾನಿಯಾಗಿತ್ತು. ಇದರಿಂದಾಗಿ ರೈತರ ಬೆಳೆ ಅಪಾರ ಹಾನಿಯಾಗಿರುತ್ತದೆ.ಹಾಗಾಗಿ ಯಾವ ರೈತರ ಬೆಳೆ ಹಾನಿಯಾಗಿರುತ್ತದೆಯೋ ಅವರು ಬೆಳೆ ವಿಮೆ ಮಾಡಿಸಿದ್ದರೆ ವಿಮಾ ಕಂಪನಿಗೆ ದೂರು ನೀಡಿ ವಿಮೆ ಸೌಲಭ್ಯ ಪಡೆದುಕೊಳ್ಳಬಹುದು.