ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ? ಹೀಗೆ ಚೆಕ್ ಮಾಡಿ

Written by Ramlinganna

Published on:

Crop insurance calculation : ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ವಿಮೆ ಮಾಡಿಸುವ ರೈತರು ಯಾವ ಯಾವ ಬೆಳೆಗೆ ವಿಮೆ ಮಾಡಿಸಬಹುದು, ರೈತರು ಯಾವ ಯಾವ ಬೆಳೆಗೆ ಎಷ್ಟು ವಿಮೆ ಹಣ ಕಟ್ಟಬೇಕು ಹಾಗೂ  ವಿಮೆ ಹಣ ಕಟ್ಟಿದ ನಂತರ ಬೆಳೆ  ಹಾಳಾದರೆ ನಿಮಗೆಷ್ಟು ವಿಮೆ ಹಣ ಜಮೆಯಾಗಲಿದೆ ಎಂಬ ಮಾಹಿತಿಯನ್ನು ಇಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ಮೊಬೈಲ್ ನಲ್ಲಿ ವಿಮೆ ಹಣ ಎಷ್ಟು ಹಣ ಕಟ್ಟಬೇಕು ಹಾಗೂ ಎಷ್ಟು ಹಣ ಜಮೆಯಾಗುವುದು ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಬೆಳೆ ವಿಮೆ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಅಲ್ಲಿ Farmers ಕೆಳಗಡೆ ನಿಮಗೆ Premium Calculator ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುವುದು. ಅಲ್ಲಿ ನೀವು ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು.

ಇದನ್ನೂ ಓದಿ ಟ್ರ್ಯಾಕ್ಟರ್ ಖರೀದಿಗೆ 3 ಲಕ್ಷ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

ಯಾವ ಬೆಳೆಗೆ ಎಷ್ಟು ಎಕರೆಗೆ ಬೆಳೆ ವಿಮೆ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ಬೆಳೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ಎಷ್ಟು ಎಕರೆಗೆ ಬೆಳೆ ವಿಮೆ ಮಾಡಿಸಬೇಕೆಂದುಕೊಂಡಿದ್ದೀರೋ ಎಕರೆ ನಮೂದಿಸಬೇಕು. ಗುಂಟೆಯಲ್ಲಿ ಜಮೀನಿದ್ದರೂ ಗುಂಟೆ ನಮೂಡಿಸಬೇಕು. ಇದಾದ ನಂತರ  Show Premium ಮೇಲೆ ಕ್ಲಿಕ್ ಮಾಡಬೇಕು.  ಆಗ ನೀವು ನಮೂದಿಸಿದ ಎಕರೆ, ಒಟ್ಟು ಎಷ್ಟು ಬೆಳೆ ವಿಮೆ ಪರಿಹಾರ ಜಮೆಯಾಗಬಹುದು ಎಂಬ ಮಾಹಿತಿ ಕಾಣಿಸುತ್ತದೆ. ಇದರೊಂದಿಗೆ ರಾಜ್ಯ, ಕೇಂದ್ರ ಹಾಗೂ ನಿಮ್ಮ ಪಾವತಿಸಿದ ಒಟ್ಟು ಬೆಳೆ ವಿಮೆ ಹಣ ಕಾಣಸುತ್ತದೆ. ಅದರ ಮುಂದುಗಡೆ ನೀವೆಷ್ಟು ಹಣ ಪಾವತಿಸೇಬಾಕುಗುತ್ತದೆ ಎಂಬ ಮಾಹಿತಿಯೂ ಕಾಣಿಸುತ್ತದೆ. ಪ್ರಾಕೃತಿಕ ವಿಕೋದಿಂದಾಗಿ ಬೆಳೆ ಹಾಳಾದರೆ ನಿಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಬಹುದು ಎಂಬ ಮಾಹಿತಿ ಸಹ ಕಾಣಿಸುತ್ತದೆ.

Crop insurance calculation ನೀವೆಷ್ಟು ಬೆಳೆ ವಿಮೆ ಪಾವತಿಸಿದರೆ ಎಷ್ಟು ಹಣ ಜಮೆಯಾಗಲಿದೆ?

ಉದಾಹರಣೆಗೆ ನೀವು ಕಲಬುರಗಿ ಜಿಲ್ಲೆಯ ರೈತರಾಗಿದ್ದರೆ ಒಂದು ಎಕರೆಗೆ ತೊಗರಿ ಬೆಳೆ ವಿಮೆ ಮಾಡಿಸಿದ್ದೀರೆಂದುಕೊಳ್ಳೋಣ. ಪ್ರಾಕೃತಿಕ ವಿಕೋಪದಿಂದಾಗಿ ನಿಮ್ಮ ಬೆಳೆ ಹಾನಿಯಾದರೆ ನಿಮಗೆ ಸುಮಾರು 19 ಸಾವಿರ ರೂಪಾಯಿಯವರೆಗೆ ಬೆಳೆ ವಿಮೆ ಹಣ ಜಮೆಯಾಗಲಿದೆ. ಇದರಲ್ಲಿ ಕೇಂದ್ರ, ರಾಜ್ಯಹಾಗೂ ನಿಮ್ಮ ಪಾಲಿನ ಒಟ್ಟು ವಿಮೆ ಪಾವತಿಸಿದ ಹಣ 3694 ರೂಪಾಯಿ, ನೀವು ಪಾವತಿಸಿದ್ದು 388 ರೂಪಾಯಿ, ಕೇಂದ್ರ ಸರ್ಕಾರ ಪಾವತಿಸಿದ್ದು 1653 ರೂಪಾಯಿ ಹಾಗೂ ರಾಜ್ಯ ಸರ್ಕಾರ ಪಾವತಿಸಿದ್ದು 1653 ರೂಪಾಯಿ. ಹೀಗೆ ಒಟ್ಟು 3694 ರೂಪಾಯಿ ಬೆಳೆ ವಿಮೆ ಹಣ ಪಾವತಿಯಾಗಿರುತ್ತದೆ.

ಇದೇ ರೀತಿ ನೀವು ನಿಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು. ಎಷ್ಟು ವಿಮೆ ಹಣ ಪಾವತಿಸಬಹುದು ಎಂಬ ಮಾಹಿತಿಯನ್ನು ಮೊಬೈಲ್ನಲ್ಲೇ  ಚೆಕ್ ಮಾಡಬಹುದು. ಇದಕ್ಕೆ ಯಾರ ಸಹಾಯವೂ ಬೇಕಿಲ್ಲ.ನಿಮ್ಮಮೊಬೈಲ್ ನಲ್ಲೇಮೇಲೆ ತಿಳಿಸಿದಂತೆ ನೀವು ಚೆಕ್ ಮಾಡಬಹುದು.

ಈ ಮಾಹಿತಿ ನಿಮಗೆ ಇಷ್ಟವಾದರೆ  ನಿಮ್ಮ ಸ್ನೇಹಿತರಿಗೆ ಬಂಧು ಬಳಗದವರಿಗೆ ಶೇರ್ ಮಾಡಬಹುದು.

Leave a Comment