ನಿಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಿದೆ? ಸ್ಟೇಟಸ್ ಚೆಕ್ ಮಾಡಿ

Written by Ramlinganna

Updated on:

status Crop insurance application  ಮುಂಗಾರು ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರು ಮೊಬೈಲ್ ನಲ್ಲಿ ತಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಅತೀ ಸುಲಭವಾಗಿ ಯಾರ ಸಹಾಯವೂ ಇಲ್ಲದೆ ಕೇವಲ ಒಂದೇ ನಿಮಿಷದಲ್ಲಿ ಬೆಳೆ ವಿಮೆ ಜಮೆಯ ಸ್ಟೇಟಸ್ ನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ಹಾವೇರಿ, ಉತ್ತರ ಕನ್ನಡ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಇತ್ತೀಚೆಗೆ ಕಳೆದ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಬೆಳೆ ವಿಮೆ ಹಣ ಜಮೆ ಮಾಡಲಾಗಿತ್ತು. ಸಂಕಷ್ಟದಲ್ಲಿರುವ ರೈತರು ಬೆಳೆ ವಿಮೆ ಹಣ ಜಮೆಯಾಗಿದ್ದರಿಂದ ಸಂತಸವ್ಯಕ್ತಪಡಿಸಿದ್ದಾರೆ.

ಶಿರಸಿ, ಸಿದ್ದಾಪುರ, ಮಂಡಗೋಡ, ಯಲ್ಲಾಪುರ, ಜೋಯಿಡಾ, ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲೂಕಿನ ರೈತರಿಗೆ ಅಡಿಕೆ, ಕಾಳುಮೆಣಸು ಬೆಳೆಗೆ ವಿಮೆ ಮಾಡಿಸಿದ ರೈತರಿಗೆ ಒಂದು ಹಂತಿನ ಬೆಳೆ ವಿಮೆ ಹಣ ಜಮೆಯಾಗಿದೆ. ಅತೀ ಶೀಘ್ರದಲ್ಲಿ ಇತರ ಜಿಲ್ಲೆಗಳ ರೈತರಿಗೂ ಬೆಳೆ ವಿಮೆ ಹಣ ಜಮೆಯಾಗಲಿದೆ.

status Crop insurance application ನಿಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಿದೆ? ಇಲ್ಲೇ ಚೆಕ್ ಮಾಡಿ

ರೈರು ತಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ 2022-2023 ವರ್ಷ ಆಯ್ಕೆ ಮಾಡಿಕೊಳ್ಳಬೇಕು. ನಂತರ ಖಾರೀಫ್ (Kharif) ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ಫಾರ್ಮರ್ಸ್ ಕಾಲಂ ಕೆಳಗಡೆ Check status ಮೇಲೆ ಕ್ಲಿಕ್ ಮಾಡಬೇಕು.  ನಂತರ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮೊಬೈಲ್ ನಂಬರ್ ನಮೂದಿಸಬೇಕು.ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮಗೆ ಪ್ರೊಪೋಸಲ್ ಸಂಖ್ಯೆ, ನಿಮ್ಮ ಹೆಸರು, ವಿಮಾ ಕಂಪನಿಯಿಂದ ಅರ್ಜಿ ಸ್ವೀಕೃತವಾಗಿದೆಯೋ ಇಲ್ಲವೋ ಎಂಬುದು ಕಾಣಿಸುತ್ತದೆ. ಅಲ್ಲಿ ನೀವು ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ನಿಮಗೆ ವೀವ್ ಡಿಟೇಲ್ಸ್ ಮೇಲೆ ಕ್ಲಿಕ್ ಮಾಡಿ ನಿಮಗೆ ಬೆಳೆ ವಿಮೆ ಹಣ ಎಷ್ಟು ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

ಬೆಳೆ ವಿಮೆ ಹಣ ಜಮೆಯಾಗದಿದ್ದರೆ ಯಾರಿಗೆ ಸಂಪರ್ಕಿಸಬೇಕು?

ಬೆಳೆ ವಿಮೆ ಹಣ ನಿಮಗೆ ಜಮೆಯಾಗದೆ ಇದ್ದರೆ ಯಾರಿಗೆ ಸಂಪರ್ಕಿಸಬೇಕು ಎಂಬ ನಿಮ್ಮ ಪ್ರಶ್ನೆಗೆ ಬೆಳೆ ವಿಮೆ ಉಚಿತ ಸಹಾಯವಾಣಿ ನಂಬರಿಗೆ ಕರೆ ಮಾಡಬೇಕು. ಅಂದರೆ ನೀವು ಯಾವ ವಿಮಾ ಕಂಪನಿಗೆ ಬೆಳೆ ವಿಮೆ ಮಾಡಿಸಿದ್ದೀರೋ ಆ ವಿಮಾ ಕಂಪನಿಗೆ ಕರೆ ಮಾಡಿ ವಿಚಾರಿಸಬಹುದು.

ಇದನ್ನೂ ಓದಿಗೃಹಲಕ್ಷ್ಮೀ ಹಣ ಯಾರಿಗೆ ಜಮೆ ಆಗುತ್ತದೆ? ಯಾರಿಗೆ ಜಮೆಯಾಗಲ್ಲ? ಇಲ್ಲಿದೆ ಮಾಹಿತಿ

ನೀವು ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿಗೆ ವಿಮೆ ಮಾಡಿಸಿದ್ದರೆ 1800 425 0505, ಯುನಿವರ್ಸಲ್ ಸೋಂಪೋ ಕಂಪನಿಗೆ ವಿಮೆ ಮಾಡಿಸಿದ್ದರೆ 1800 200 5142, ಎಸ್.ಬಿ.ಐ ಗೆ ವಿಮೆ ಮಾಡಿಸಿದ್ದರೆ 1800 180 1551, ಹೆಚ್.ಡಿ.ಎಫ್.ಸಿ ಅರ್ಗೋ ಗೆ ವಿಮೆ ಮಾಡಿಸಿದ್ದರೆ 1800 266 0700 ಗೆ, ಫುಚರ್ ಜನರಲ್ ಇನ್ಸುರೆನ್ಸ್ ಕಂಪನಿಗೆ ವಿಮೆ ಮಾಡಿಸಿದ್ದರೆ 1800 266 4141, ಐಸಿಐಸಿ ಲೋಂಬಾರ್ಡ್ ವಿಮೆಗೆ ಬೆಳೆ ವಿಮೆ ಮಾಡಿಸಿದ್ದರೆ 1800 103 7712, ಬಜಾಜ್ ಅಲಾಯನ್ಸ್ ಗೆ ವಿಮೆ ಮಾಡಿಸಿದ್ದರೆ 1800 209 5959 ಗೆ, ರಿಲಾಯನ್ಸ್ ಜನರಲ್ ಇನ್ಸುರೆನ್ಸ್ ಕಂಪನಿಗೆ ವಿಮೆ ಮಾಡಿಸಿದ್ದರೆ 1800 102 4088ಗೆ  ಕರೆ ಮಾಡಬಹುದು.

Leave a Comment