Crop insurance amount: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಯಾವ ಯಾವ ಬೆಳೆಗಳಿಗೆ ಬೆಳೆ ವಿಮೆ ಹಣ ಎಷ್ಟು ಜಮೆಯಾಗಲಿದೆ ಎಂಬುದನ್ನು ರೈತರು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ರೈತರು ಈಗ ಬೆಳೆ ವಿಮೆ ಮಾಡಿಸುವುದಕ್ಕಿಂತ ಮುಂಚಿತವಾಗಿ ಯಾವ್ಯಾವ ಬೆಳೆಗಳಿಗೆ ಎಷ್ಟು ವಿಮೆ ಹಣ ಜಮಯಾಗಲಿದೆ ಯಾವಾಗ ಜಮೆಯಾಗುವುದು ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
ರೈತರು, ಬೆಳೆ ವಿಮೆ ಮಾಡಿಸುವ ಮುನ್ನ ತಾವು ಯಾವ ಬೆಳೆಗೆ ವಿಮೆ ಹಣ ಪಾವತಿಸುತ್ತಿದ್ದಾರೆ? ಎಷ್ಟು ವಿಮೆ ಹಣ ಪಾವತಿಸುತ್ತಿದ್ದಾರೆ? ಯಾವ ವಿಮಾ ಕಂಪನಿಗೆ ವಿಮೆ ಹಣ ಕಟ್ಟುತ್ತಿದ್ದಾರೆ ಎಂಬುದನ್ನೆಲ್ಲಾ ತಿಳಿದುಕೊಳ್ಳಬೇಕಾಗುತ್ತದೆ.
Crop insurance amount ಯಾವ ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗಲಿದೆ? ಇಲ್ಲಿ ಹೀಗೆ ಚೆಕ್ ಮಾಡಿ
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ರೈತರು ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಿದರೆ ಎಷ್ಟು ವಿಮೆ ಹಣ ಜಮೆಯಾಗಲಿದೆ ಎಂಬುದನ್ನು ಚೆಕ್ ಮಾಡಲು ಈ
https://samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ಅಲ್ಲಿ ತೆರೆದುಕೊಳ್ಳುವ ಪೇಜ್ ನಲ್ಲಿ Kharif ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ / Go ಮೇಲೆ ಕ್ಲಿಕ್ ಮಾಡಬೇಕು. ನಂತರ ಫಾರ್ಮರ್ಸ್ ಕೆಳಗಡೆ ಕಾಣುವ Crop you can Insure ಮೇಲೆ ಕ್ಲಿಕ್ ಮಾಡಬೇಕು. Crop you can Insure ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಾದ ನಂತರ ನೀವು Display ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ಆಗ ನೀವು ಯಾವ ಯಾವ ಯಾವ ಬೆಳೆಗಳಿಗೆ ಎಷ್ಟು ವಿಮೆ ಹಣ ಜಮೆಯಾಗಲಿದೆ ಎಂಬ ಮಾಹಿತಿ ಕಾಣಿಸುತ್ತದೆ. ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಊರು, ಕಾಣಿಸುತ್ತದೆ. ಅದರ ಬೆಳೆಗಳ ಹೆಸರು, ಎಷ್ಟು ವಿಮೆ ಹಣ ಜಮೆಯಾಗಲಿದೆ ಎಂಬ ಮಾಹಿತಿ ಕಾಣಿಸುತ್ತದೆ.
ಬೆಳೆ ಹಾನಿಯಾಗಲು ರೈತರೇನು ಮಾಡಬೇಕು?
ಪ್ರಾಕೃತಿಕ ವಿಕೋಪ ಅಂದರೆ ಅತೀವೃಷ್ಟಿ, ಅನಾವೃಷ್ಟಿ, ಬರಗಾಲ, ಭೂ ಕುಸಿತ, ಗುಡುಗು ಸಿಡಿಲಿನಿಂದ ಬೆಳೆ ಹಾನಿಯಾದರೆ ಮಾತ್ರ ವಿಮೆ ಹಣ ರೈತರಿಗೆ ಜಮೆ ಆಗಲಿದೆ. ಹೌದು, ಇದಕ್ಕಾಗಿ ನೀವು ಬೆಳೆ ಹಾಳಾದ ನಂತರ ವಿಮಾ ಕಂಪನಿಗೆ ತಿಳಿಸಬೇಕಾಗುತ್ತದೆ.
ಇದನ್ನೂ ಓದಿ : ರೈತರ ಜಮೀನಿಗೆ ಹೋಗಲು ಬಂಡಿದಾರಿ ಇದೆಯೇ ಇಲ್ಲೇ ಚೆಕ್ ಮಾಡಿ
ಆಗ ವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಬಂದು ಬೆಳೆ ಹಾಳಾಗಿರುವ ಕುರಿತು ಪರಿಶೀಲನೆ ಮಾಡುವರು. ನಂತರ ಯಾವ ಪ್ರಮಾಣದಲ್ಲಿಬೆಳೆ ಹಾನಿಯಾಗಿದೆ ಎಂಬುದರ ಆಧಾರದ ಮೇಲೆ ವಿಮೆ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು.
ರೈತರ ಹೆಸರಿಗೆ ಎಫ್ಐಡಿ ಇರಬೇಕು?
ಬೆಳೆ ವಿಮೆ ಮಾಡಿಸುವ ಮುನ್ನ ರೈತರ ಬಳಿ ಎಫ್ಐಡಿ ಇರಬೇಕು. ರೈತರ ಬಳಿ ಎಫ್ಐಡಿ (ಫ್ರೂಟ್ಸ್ಐಡಿ) ಇರಲೇಬೇಕು. ಆಗ ರೈತರು ಬೆಳೆ ವಿಮೆಗೆ ಅರ್ಹರಾಗಿರುತ್ತಾರೆ.
ಬೆಳೆ ಸಮೀಕ್ಷೆ ಮಾಡಿರಬೇಕು
ರೈತರು ಯಾವ ಬೆಳೆ ಬಿತ್ತಿದ್ದಾರೋ ಆ ಬೆಳೆ ರೈತರ ಜಮೀನಿನಲ್ಲಿರುವ ಕುರಿತು ಬೆಳೆ ಸಮೀಕ್ಷೆ ಮಾಡಿಸಿರಬೇಕು. ಬೆಳೆ ಸಮೀಕ್ಷೆ ಆಗದಿದ್ದರೆ ರೈತರ ಬೆಳೆ ಹಾನಿಯಾದರೂ ಬೆಳೆ ವಿಮೆ ಪರಿಹಾರ ಹಣ ಜಮೆಯಾಗುವುದಿಲ್ಲ.