ರೈತರಿಗೆ ಸಂತಸದ ಸುದ್ದಿ. ಬೆಳೆಹಾನಿ ಪರಿಹಾರ ಹಣ ಜಮೆಯಾಗಿದನ್ನು ಈಗ ಮೊಬೈಲ್ ನಲ್ಲಿಯೇ (crop damage compensation status) ನೋಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ಸಂಪೂರ್ಣ ಮಾಹಿತಿ.
ಕಳೆದ ವರ್ಷ ಅತೀವೃಷ್ಟಿಯಿಂದ (Flood) ಪ್ರವಾಹ ಉಂಟಾಗಿ ರಾಜ್ಯದಲ್ಲಿ ಲಕ್ಷಾಂತರ ರೈತರ ಬೆಳೆ (crop damage )ಕೊಚ್ಚಿಕೊಂಡು ಹೋಗಿತ್ತು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತೆ ಕಟಾವಿಗೆ ಬಂದಂತಹ ಎಷ್ಟೋ ಎಕರೆ ಬೆಳೆ ಹಾಳಾಗಿತ್ತು. ಮಳೆಯಲ್ಲಿಯೇ ಲಕ್ಷಾಂತರ ಎಕರೆ ಬೆಳೆ ಕೊಳೆತು ಹೋಗಿ ರೈತರಿಗೆ ನಷ್ಟವನ್ನುಂಟು ಮಾಡಿತ್ತು. ಇದಕ್ಕಾಗಿ ಸರ್ಕಾರ ಪ್ರತಿ ಹೆಕ್ಟೇರಿಗೆ ಸುಮಾರು 6 ಸಾವಿರ ರೂಪಾಯಿ ಪರಿಹಾರ ನೀಡಲು ಘೋಷಣೆ ಮಾಡಿತ್ತು. ಈಗಾಗಲೇ ಆರು ಹಂತಗಳಲ್ಲಿ ರೈತರ ಖಾತೆಗೆ ಹಣ ಜಮೆ ಮಾಡಲಾಗಿದೆ.
ಇತ್ತೀಚೆಗೆ 7ನೇ ಕಂತಿನ ಹಣವೂ ಬೆಳೆಹಾನಿಯಾದ ರೈತರ ಖಾತೆಗೆ ಜಮೆ ಮಾಡಲಾಗಿದೆ. ಹಾಗಾದರೆ ನಿಮ್ಮ ಖಾತೆಗೆ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ನೋಡಲು ಈಗ ನೀವು ಎಲ್ಲಿಗೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ (crop damage compensation status)ನಲ್ಲಿಯೇ ನೋಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ…ಇಲ್ಲಿದೆ ಮಾಹಿತಿ
ಉದಾಹರಣೆಗೆ 2020-21ನೇ ಸಾಲಿನಲ್ಲಿ ಅತೀವೃಷ್ಟಿಯಿಂದ ಹಾನಿಗೊಳಗಾದ ರೈತರ ಖಾತೆಗೆ ಬೆಳೆ ಪರಿಹಾರ ಹಣ ಜಮೆಯಾಗಿದ್ದನ್ನು ನೋಡಲು https://landrecords.karnataka.gov.in/PariharaPayment/ ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಆಧಾರ್ ಸಂಖ್ಯೆ ಸೆಲೆಕ್ಟ್ ಮಾಡಬೇಕು. ನಂತರ Select Calamity type ನಲ್ಲಿ ಫ್ಲಡ್ ಆಯ್ಕೆ ಮಾಡಿಕೊಳ್ಳಬೇಕು. ನಂತರ 2020-21 ವರ್ಷ ಸೆಲೆಕ್ಟ್ ಮಾಡಿಕೊಳ್ಳಬೇಕು. ಹಿಂದಿನ ವರ್ಷಗಳಲ್ಲಿ ಜಮೆಯಾಗಿದ್ದನ್ನೂ ಸಹ ನೋಡಿಕೊಳ್ಳಬಹುದು. ಕೆಳಗಡಿ ಆಧಾರ್ ಸಂಖ್ಯೆ ನಮೂದಿಸಿ ಕ್ಯಾಪ್ಚಾ ಕೋಡ್ ಎಂಟರ್ ಮಾಡಿದ ನಂತರ ಫೆಟ್ಚ್ ಡಿಟೇಲ್ಸ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಜಿಲ್ಲೆ, ಬ್ಯಾಂಕಿನ ಹೆಸರು, ನಿಮ್ಮ ಹೆಸರು, ಬ್ಯಾಂಕ್ ಅಕೌಂಟ್ ನಂಬರ್, ಹಣ ಸಂದಾಯವಾದ ಸ್ಥಿತಿಗತಿ, ಯಾವುದರಿಂದ ಹಣ ಬಂದಿದೆ ಉದಾಹರಣೆಗೆ ಫ್ಲಡ್ (ಅತೀವೃಷ್ಟಿ) ಸಂದಾಯವಾದ ಕಾಲ (ಖಾರಿಪ್ ಅಥವಾ ರಬ್ಬಿ) ಮತ್ತು ಯಾವ ವರ್ಷ ಹಣ ಬಂದಿದೆ ಎಂಬ ವರದಿ ಓಪನ್ ಆಗುತ್ತದೆ. ಇದೇ ರೀತಿ ನೀವು ಕಳೆದ ನಾಲ್ಕೈದು ವರ್ಷದ ರಿಪೋರ್ಟ್ ಸಹ ನೋಡಬಹುದು.
ಇದನ್ನೂ ಓದಿ:ಮೊಬೈಲ್ ನಲ್ಲಿಯೇ ನಿಮ್ಮ ಬೆಳೆಸಾಲಮನ್ನಾ ಆಗಿದ್ದನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
ಆದರೆ ನೀವು ಆಯ್ಕೆ ಮಾಡುವಾಗ ಯಾವುದರ ಹಣ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಉದಾಹರಣೆಗೆ ಅತೀವೃಷ್ಟಿ (Flood), ಬರಗಾಲ (Drought), ಕೆರೆ ಕಾಲುವೆಗಳಿಂದ ಹಾಳಾದ ಭೂಮಿ (Desilting), ಭೂಕುಸಿತ (Landside) ಅಥವಾ ಆಲಿಕಲ್ಲು ಮಳೆ (Hailstorm) ಹೀಗೆ ಯಾವುದರಿಂದ ಬೆಳೆ ಹಾಳಾಗಿದೆ ಎಂಬುದನ್ನು ಆಯ್ಕೆ ಮಾಡಿ. ಅದರಲ್ಲಿ ಹಣ ಬಂದಿರುವುದನ್ನು ಚೆಕ್ ಮಾಡಬಹುದು.