Crop loss compensation credit ಮುಂಗಾರು ಹಂಗಾಮಿಗೆ ಬೆಳೆ ಹಾನಿಯಾದ ಹಾಗೂ ಬೆಳೆ ವಿಮೆ ಪಾವತಿಸಿದ ರೈತರ ಖಾತೆಗೆ ಹಣ ಜಮೆ ಮಾಡಲಾಗಿದೆ. ರೈತರು ತಮಗೂ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
2020-2021 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತೀವೃಷ್ಟಿಯಿಂದ ಹಾಳಾದ ಬೆಳೆಗಳಿಗೆ ಪರಿಹಾರ ಬಿಡುಗಡೆ ಮಾಡಲಾಗಿತ್ತು. ಭೂಮಿ ಪರಿಹಾರ ತಂತ್ರಾಂಶದಲ್ಲಿ ದಾಖಲಾಗಿರುವವರ ಪೈಕಿ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆಯಾಗದೆ ಪರಿಹಾರಕ್ಕೆ ಬಾಕಿ ಉಳಿದುಕೊಂಡಿದ್ದ ಕಲಬುರಗಿ ಜಿಲ್ಲೆಯ 13,929 ರೈತರಿಗೆ 9.98 ಕೋಟಿ ರೂಪಾಯಿ ಇನ್ಪುಟ್ ಸಬ್ಸಿಡಿ ಬಿಡುಗಡೆಗೆ ಯಶವಂತ ವಿ. ಗುರುಕರ್ ಬುಧವಾರ ಅನುಮೋದನೆ ನೀಡಿದ್ದಾರೆ.
ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದ ಕಾರಣ ಬಾಕಿ ಉಳಿದಿದ್ದವು. ಇದೀಗ ಆಧಾರ್ ಜೋಡಣೆಯಾಗಿದ್ದರಿಂದ ಸಬ್ಸಿಡಿ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. ಈಗ ಅನುಮೋದನೆ ನೀಡಿದ ಪರಿಹಾರದ ಮೊತ್ತ 2-3 ದಿನಗಳಲ್ಲಿ ರೈತರ ಖಾತೆಗೆ ಜಮೆಯಾಗಲಿದೆ ಎಂದು ತಿಳಿಸಿದ್ದಾರೆ.
Crop loss compensation credit ನಿಮ್ಮ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿರುವುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಿ
ಕಲಬುರಗಿ ಜಿಲ್ಲೆಯಷ್ಟೇ ಅಲ್ಲ, ಇತರ ಜಿಲ್ಲೆಯ ರೈತರು ಸಹ ತಮ್ಮ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿರುವುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಲು ಈ
https://landrecords.karnataka.gov.in/PariharaPayment/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಆಗಿರುವ ಪೇಜ್ ನಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಂಡ ಸೆಲೆಕ್ಟ್ ಕಾಲಾಮಿಟಿ ಟೈಪ್ ನಲ್ಲಿ ಫ್ಲಡ್ ಹಾಗೂ ಇಯರ್ ನಲ್ಲಿ ಯಾವ ವರ್ಷದ ಬೆಳೆ ಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ವರ್ಷ ಆಯ್ಕೆ ಮಾಡಿಕೊಳ್ಳಬೇಕು. ಇದರ ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿದ ಮೇಲೆ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಬಹುದು.
ಈ ಜಿಲ್ಲೆಯ 1939 ರೈತರ ಖಾತೆಗೆ ಬೆಳೆ ವಿಮೆ ಜಮೆ
ಹುಬ್ಬಳ್ಳಿ ಜಿಲ್ಲೆಯ ಒಟ್ಟು 1939 ರೈತರ ಖಾತೆಗೆ 4.32 ಕೋಟಿ ರೂಪಾಯಿ ಬೆಳೆ ವಿಮೆ ಹಣ ಜಮೆಯಾಗಿದೆ. ಈ ಮೊತ್ತವನ್ನು ಸಂರಕ್ಷಣೆ ತಂತ್ರಾಂಶದ ಮೂಲಕ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಜಿಲ್ಲೆಯಲ್ಲಿನ 2018-19ನೇ ಸಾಲಿನ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಬೆಳೆ ವಿಮೆ ಪರಿಹಾರ ಪಡೆಯಲು ಅರ್ಹರಿದ್ದ ಪೈಕಿ 3191 ರೈತರ ಬೆಳೆ ಸಮೀಕ್ಷೆಯಲ್ಲಿನ ಬೆಳೆ ವಿವರ ಹಾಗೂ ಬೆಳೆ ವಿಮೆ ನೋಂದಣಿ ಮಾಡಿದ ಬೆಳೆ ವಿವರ ಹೊಂದಾಣಿಕೆಯಾಗದೆ ತಿರಸ್ಕೃತಗೊಂಡಿದ್ದವು. ಆದರೆ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ತಾಲೂಕು ಮಟ್ಟದ ಕುಂದು ಕೊರತೆ ಪರಿಹಾರ ಸಮಿತಿಯಲ್ಲಿ ಪುನಃ ಪರಿಶೀಲಿಸಿ ಸರಿಪಡಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು. ಪರಿಶೀಲಿಸಿದ ಸಮಿತಿ 3191 ಪ್ರಕರಣಗಳ ಪೈಕಿ 1939 ಪ್ರಕರಣ ಅಂಗೀಕರಿಸಿ ಬೆಳೆ ವಿಮೆ ಪರಿಹಾರ ನೀಡುವಂತೆ ಸರ್ಕಾರ ಹಾಗೂ ವಿಮಾ ಕಂಪನಿಗೆ ಕಳುಹಿಸಿತ್ತು. ಈಗ ರೈತರ ಖಾತೆಗೆ ಬೆಳೆ ವಿಮೆ ಪರಿಹಾರ ಹಣ ಜಮೆ ಮಾಡಲಾಗಿದೆ.
ಇದನ್ನೂ ಓದಿ : ಮುಟೇಶನ್ ಪ್ರಕಾರ ನಿಮ್ಮ ಹೆಸರಿಗೆ ಎಷ್ಟು ಎಕರೆ ಜಮೀನಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ಈ ರೈತರು ತಮ್ಮ ಖಾತೆಗೆ ಬೆಳೆ ವಿಮೆ ಜಮೆಯಾಗಿರುವುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಗೂಗಲ್ ನಲ್ಲಿ samrakshane ಎಂದು ಟೈಪ್ ಮಾಡಿದ ನಂತರ ಅಲ್ಲಿ ಮೇಲ್ಗಡೆ ಕಾಣುವ ಸಂರಕ್ಷಣೆ ಕರ್ನಾಟಕ ಕ್ರಾಪ್ ಇನ್ಸುರೆನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ವರ್ಷ ಬೆಳೆ ಆಯ್ಕೆಮಾಡಿಕೊಂಡ ನಂತರ ಗೋ ಮೇಲೆ ಕ್ಲಿಕ್ ಮಾಡಬೇಕು. ನಂತರ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ಜಮೆಯಾಗಿರುವ ಮಾಹಿತಿ ಪಡೆಯಬಹುದು.