your survey number ಅಕ್ಕಪಕ್ಕದಲ್ಲಿ ಯಾರಿಗೆ ಎಷ್ಟು ಜಮೀನಿದೆ?

Written by Ramlinganna

Updated on:

your survey number: ರೈತರು ತಮ್ಮ ಜಮೀನಿನ ಅಕ್ಕಪಕ್ಕದಲ್ಲಿ ಯಾರಿಗೆ ಎಷ್ಟು ಜಮೀನಿದೆ ಎಂಬುದನ್ನು ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಹೌದು, ಇದಕ್ಕಾಗಿ ರೈತರು ಯಾರ ಸಹಾಯವೂ ಇಲ್ಲದೆ ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಮಾಹಿತಿ.

ತಂತ್ರಜ್ಞಾನ ಬೆಳೆದಂತೆ ರೈತರಿಗೆ ಸುಲಭವಾಗಿ ಜಮೀನಿನ ದಾಖಲೆ ಸಿಗಲೆಂಬ ಉದ್ದೇಶದಿಂದ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಆನ್ಲೈನ್ ವ್ಯವಸ್ಥೆ ಮಾಡಿದೆ.ಮೀನಿನ ದಾಖಲೆಗಳನ್ನು ಪಡೆಯಲು ತಹಶೀಲ್ದಾರ್ ಕಚೇರಿ, ನಾಡ ಕಚೇರಿಗಳ ಮುಂದೆ ಈಗ ರೈತರು ಗಂಟೆಗಟ್ಟಲೇ ಕಾಯಬಾರದೆಂಬ ಉದ್ದೇಶದಿಂದ ರೈತರ ದಾಖಲೆಗಳನ್ನು ಗಣಕೀಕರಣಗೊಳಿಸಿದೆ.

ಜಮೀನಿನ ಪಹಣಿ (ಆರ್.ಟಿ.ಸಿ), ಮುಟೇಶನ್, ಆಕಾರಬಂದ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಚೆಕ್ ಮಾಡಬಹುದು. ಹಾಗೂ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಹಾಗೂ ದಾಖಲೆಗಳ ಮಾರ್ಪಾಡು ಮಾಡಲು ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

your survey number ನಲ್ಲಿ ಯಾರ ಯಾರ ಹೆಸರುಗಳಿವೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ಸರ್ವೆ ನಂಬರ್ ನಲ್ಲಿ ಇನ್ನೂ ಯಾರ ಯಾರ ಹೆಸರುಗಳನ್ನು ಸೇರಿಸಲಾಗಿದೆ ಅವರ ಹೆಸರಿಗೆ ಎಷ್ಟು ಎಕರೆ ಜಮೀನು ಇದೆ ಅವರ ಜಮೀನಿನ ಮೇಲೆ ಸಾಲವಿದೆಯೇ ? ಯಾವ ಬೆಳೆ ಬೆಳೆಯಲಾಗಿದೆ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಚೆಕ್ ಮಾಡಲು ಈ

https://landrecords.karnataka.gov.in/Service2/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ  ಭೂಮಿ ಆನ್ಲೈನ್ ಲ್ಯಾಂಡ್ ರಿಕಾರ್ಡ್ಸ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು.ನಿಮ್ಮ ಜಮೀನಿನ ಸರ್ವೆ ನಂಬರ್ ನಮೂದಿಸಬೇಕು. ನಂತರ ಗೋ ಮೇಲೆ ಕ್ಲಿಕ್ ಮಾಡಬೇಕು.

ಇದಾದನಂತರ ಸರ್ನೋಕ್ ಹಾಗೂ ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. Select Period ನಲ್ಲಿ ಪ್ರಸಕ್ತ ವರ್ಷ 2023-24 ಆಯ್ಕೆ ಮಾಡಿಕೊಳ್ಳಬೇಕು. Select Year ನಲ್ಲಿಯೂ ಸಹ 2023-24 ಆಯ್ಕೆ ಮಾಡಿಕೊಳ್ಳಬೇಕು. ನಂತರ Fetch Details ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ನಮೂದಿಸಿದ ಸರ್ವೆ ನಂಬರ್ ನಲ್ಲಿ ಯಾವ ಯಾವ ರೈತರ ಹೆಸರಿದೆ? ಆ ರೈತರ ಹೆಸರು, ತಂದೆಯ ಹೆಸರು, ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ? ಖಾತಾ ನಂಬರ್ ಕಾಣಿಸುತ್ತದೆ.

ಅಲ್ಲಿ ಕಾಣುವ View ಮೇಲೆ ಕ್ಲಿಕ್ ಮಾಡಿದರೆ ಜಮೀನಿನ ಪಹಣಿ (ಆರ್.ಟಿ.ಸಿ) ಓಪನ್ ಆಗುತ್ತದೆ.  ಅಲ್ಲಿ ನೀವು ನಮೂದಿಸಿದ ಸರ್ವೆ ನಂಬರ್ನಲ್ಲಿಒಟ್ಟು ಎಷ್ಟು ಎಕರೆ ಜಮೀನಿದೆ? ಯಾರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿ ಇರುತ್ತದೆ.  ಜಮೀನಿನ ಮಾಲಿಕರ ಹೆಸರು, ಹಾಗೂ ಎಕರೆ ಕಾಣಿಸುತ್ತದೆ. ಇದರೊಂದಿಗೆ ಜಮೀನು ಮುಟೇಶನ್ ಆಗಿದೆಯೋ ಇಲ್ಲವೋ ಎಂಬ ಮಾಹಿತಿ ಇರುತ್ತದೆ.

ಇದನ್ನೂ ಓದಿ Bele vime ಯಾರಿಗೆ ಎಷ್ಟು ಜಮೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಇದರೊಂದಿಗೆ ಜಮೀನಿನ ಮಾಲಿಕರು ಯಾವುದೇ ಬ್ಯಾಂಕಿನಲ್ಲಿ ಸಾಲ ಪಡೆದಿದ್ದರೆ ಆ ಸಾಲದ ಮಾಹಿತಿ ಸಹ ಇರುತ್ತದೆ. ಜಮೀನು ಜಂಟಿಯಾಗಿದ್ದರೆ ಯಾವ ಯಾವ ರೈತರ ಜಮೀನು ಜಂಟಿಯಾಗಿದೆ ಎಂಬ ಮಾಹಿತಿ ಸಹ ಕಾಣಿಸುತ್ತದೆ.

ಪ್ರಸಕ್ತ ವರ್ಷ 2023-24 ನೇ ಸಾಲಿನಲ್ಲಿ ಯಾವ ಬೆಳೆಗಳನ್ನು ಬಿತ್ತಲಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.

ಈ ಲೇಖನವು ನಿಮಗೆ  ಉಪಯುಕ್ತವಾಗಿದ್ದರೆ ಕಾಮೆಂಟ್ ಮಾಡಿ. ಇದೇ ರೀತಿ ಮುಂದೆ ಇಂತಹ ಲೇಖನಗಳನ್ನು ಬರೆಯಲು ನಮಗೆ ಸ್ಪೂರ್ತಿ ಸಿಗುತ್ತದೆ.

Leave a Comment