Check your name in voter listVoter list ನಲ್ಲಿ ನಿಮ್ಮ ಕುಟುಂಬದಲ್ಲಿ ಯಾರ ಯಾರ ಹೆಸರಿದೆ? ನಿಮ್ಮ ಹೆಸರು ತಂದೆಯ ಹೆಸರು, ವಯಸ್ಸು ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.
ಹೌದು, ಮತದಾರರು ಈಗ ಚುನಾವಣಾ ಕಚೇರಿಗೆ ಹೋಗುವ ಬದಲು ಆನ್ಲೈನ್ ನಲ್ಲೇ ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಪರಿಶೀಲಿಸಬಹುದು.
ಕರ್ನಾಟಕದ ವಿಧಾನಸಭಾ ಚುನಾವಣೆ ಮಂದಿನ ತಿಂಗಳು ಈ ತಿಂಗಳ ಅಂತ್ಯ ಅಥವಾ ಮುಂದಿನ ತಿಂಗಳು ಘೋಷಣೆಯಾಗುವ ಸಾಧ್ಯತೆಯಿದೆ. ಹಾಗಾಗಿ ಮತದಾರರ ಪಟ್ಟಿಯಲ್ಲಿ ಯಾರ ಯಾರ ಹೆಸರು ಸೇರಿಸಲಾಗಿದೆ?.ಯಾರ ಯಾರ ಹೆಸರು ತಿರಸ್ಕೃತಗೊಂಡಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಿ.
ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಚೆಕ್ ಮಾಡಿ (check your name in voter list)
ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿರುವುದನ್ನುಚೆಕ್ ಮಾಡಬೇಕಾದರೆ ಈ
https://electoralsearch.in/#!#resultArea
ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ನ್ಯಾಶನಲ್ ವೋಟರ್ಸ್ ಸರ್ವಿಸ್ ಪೋರ್ಟಲ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಹೆಸರು ಬರೆಯಬೇಕು. ಇದಾದ ಮೇಲೆ ನಿಮ್ಮ ತೆದೆಯ ಹೆಸರು ಬರೆಯಬೇಕು. ಪತ್ನಿಯಾಗಿದ್ದರೆ ಪತಿಯ ಹೆಸರು ಹಾಕಬೇಕು. ನಿಮ್ಮವಯಸ್ಸು ಎಷ್ಟಿದೆ ಅಂದರೆ ಈಗ ನೀವು ಎಷ್ಟು ವಯಸ್ಸಾಗಿದೆ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಅಥವಾ ನಿಮ್ಮ ಹುಟ್ಟಿದ ದಿನಾಂಕ ನೆನಪಿದ್ದರೆ ನೀವು DoB ಆಯ್ಕೆ ಮಾಡಿಕೊಳ್ಳಬೇಕು.
ನಂತರ ನೀವು ಪುರುಷ ಅಥವಾ ಮಹಿಳೆ ಆಯ್ಕೆ ಎರಡರಲ್ಲಿಪುರುಷರಾಗಿದ್ದರೆ Male ಮಹಿಳೆಯರಾಗಿದ್ದರೆ Female ಆಯ್ಕೆ ಮಾಡಿಕೊಳ್ಳಬೇಕು.
ಇದನ್ನೂ ಓದಿ : ರೈತರ ಜಮೀನಿಗೆ ಹೋಗುವ ಕಾಲಾದಾರಿ, ಬಂಡಿದಾರಿ ಹಳ್ಳಕೊಳ್ಳಗಳ ಮಾಹಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ
ನೀವು ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ನೀವು ಯಾವ ಜಿಲ್ಲೆಯವರಾಗಿದ್ದೀರೋ ಆ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಚುನಾವಣಾ ಕ್ಷೇತ್ರ ಅಂದರೆ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಅಲ್ಲಿ ಕಾಣುವ ಕೋಡ್ ನ್ನು Captcha Text ನಲ್ಲಿ ಬರೆದು Search ಮೇಲೆ ಕ್ಲಿಕ್ ಮಾಡಬೇಕು.
ಅಲ್ಲಿ ನಿಮ್ಮ ಚುನಾವಣಾ ಗುರುತಿನ ಚೀಟಿ ಸಂಖ್ಯೆ, ನಿಮ್ಮ ಹೆಸರು, ವಯಸ್ಸುತಂದೆಯ ಹೆಸರು, ರಾಜ್ಯ, ಜಿಲ್ಲೆ, ಪೋಲಿಂಗ್ ಸ್ಟೇಶನ್ ಅಂದರೆ ಮತದಾನ ಯಾವ ಸ್ಥಳದಲ್ಲಿ ಹಾಕಬೇಕು, ನಿಮ್ಮ ತಾಲೂಕು ಜಿಲ್ಲೆ ಕಾಣಿಸುತ್ತದೆ.
ವೀವ್ ಡಿಟೇಲ್ಸ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ತಾಲೂಕು, ಜಿಲ್ಲೆ, ನಿಮ್ಮ ಹೆಸರು, ಚುನಾವಣಾ ಗುರುತಿನ ಚೀಟಿ ನಂಬರ್, ತಂದೆಯ ಹೆಸರು, ಸಿರಿಯಲ್ ನಂಬರ್ ಕಾಣಿಸುತ್ತದೆ.
ಎಸ್ಎಂಎಸ್ ಮೂಲಕ ತಮ್ಮ ಹೆಸರಿರುವುದನ್ನು ಪರಿಶೀಲಿಸುವುದು ಹೇಗೆ? (How to check though sms)
ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಮೊಬೈಲ್ ಮೆಸೆಜ್ ಮೂಲಕವೂ ಪರಿಶೀಲಿಸಬಹುದು. ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ನಮೂದಿಸಿ ನಿಮ್ಮ ಎಸ್ಎಂಎಸ್ ನ್ನು 1950 ಗೆ ಕಳುಹಿಸಿ ಪರಿಶೀಲಿಸಿಬಹುದು.
ಆಗ ನಿಮಗೆ ನಿಮ್ಮ ಪೋಲಿಂಗ್ ಸ್ಟೇಟಶನ್ ಸಂಖ್ಯೆ ಹಾಗೂ ಹೆಸರನ್ನು ನಿಮ್ಮ ಮೊಬೈಲ್ ಪರದೆಯ ಮೇಲೆ ಕಾಣಿಸುತ್ತದೆ. ಒಂದು ವೇಳೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ನಿಮ್ಮ ದಾಖಲೆ ಕಂಡು ಬಂದಿಲ್ಲ ಅಂದರೆ (No records found) ಎಂಬ ಮೆಸೇಜ್ ಕಾಣಿಸುತ್ತದೆ.
ಚುನಾವಣಾ ಗುರುತಿನ ಚೀಟಿಯಲ್ಲಿ ನಿಮ್ಮ ಹೆಸರು, ತಂದೆಯ ಹೆಸರು, ವಯಸ್ಸು ಒಂದು ವೇಳೆ ತಪ್ಪಾಗಿದ್ದರೆ ಸರಿಪಡಿಸಲು ಅವಕಾಶವಿದೆ. ಇದನ್ನು ಯಾವ ಕಚೇರಿಗೆ ಹೋಗಬೇಕಿಲ್ಲ ಆನ್ಲೈನ್ ನಲ್ಲೇ ಸರಿಪಡಿಸಬಹುದು.