land Original Tippani Mobile ನಲ್ಲೇ ಚೆಕ್ ಮಾಡಬಹುು. ರೈತರ ಬಳಿಯಿರುವ ಮೊಬೈಲ್ ನಲ್ಲಿ ತಮ್ಮ ಜಮೀನಿನ ಮೂಲ ಸರ್ವೆ ಟಿಪ್ಪಣಿ ಪುಸ್ತಕವನ್ನು ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.
ಹೌದು, ತಮ್ಮ ಸರ್ವೆ ನಂಬರ್ ನ ಮೂಲ ಸರ್ವೆ ಟಿಪ್ಪಣಿ ಪುಸ್ತಕದ ಪ್ರತಿ ನೋಡಲು ರೈತರು ಈಗ ಎಲ್ಲಿಯೂ ಹೋಗಬೇಕಿಲ್ಲ, ಕಚೇರಿಯ ಎದುರುಗಡೆ ಸಾಲುಗಟ್ಟಿ ನಿಲ್ಲಬೇಕಿಲ್ಲ.
ತಮ್ಮ ಮನೆಯಲ್ಲಿಯೇ ನಿಮ್ಮ ಬಳಿಯಿರುವ ಮೊಬೈಲ್ ನಲ್ಲೇ ಮೂಲ ಸರ್ವೆ ಟಿಪ್ಪಣಿ ಪುಸ್ತಕವನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
land Original Tippani Mobile ನಲ್ಲಿ ನೋಡುವುದು ಹೇಗೆ?
ರೈತರ ಜಮೀನಿನ ನಕ್ಷೆ ಈಗ ಬದಲಾಗಿರುತ್ತದೆ. ಸರ್ವೆ ನಂಬರ್ ಗಳು ಸಹ ವಿಭಾಗವಾಗಿ ಬದಲಾಗಿರುತ್ತದೆ. ಆದರೆ ದಾಖಲೆ ಮಾಡುವಾಗ ನಿಮ್ಮ ಸರ್ವೆ ನಂಬರ್ ಎಷ್ಟು ಭಾಗದಲ್ಲಿ ವಿಂಗಡನೆಯಾಗಿತ್ತು. ಅದರ ಮೂಲ ಸರ್ವೆ ಟಿಪ್ಪಣಿ ಪುಸ್ತಕವನ್ನು ಮೊಬೈಲ್ ನಲ್ಲಿ ನೋಡಲು ಈ
https://bhoomojini.karnataka.gov.in/Service35/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸರ್ವೆ ಡಾಕುಮೆಂಟ್ ಪೇಜ್ ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಇದಾದನಂತರ ಸರ್ವೆ ನಂಬರ್ ಆಯ್ಕೆ ಮಾಡಿಕೊಂಡು ಸರ್ನೋಕ್ ನಲ್ಲಿ ಸ್ಟಾರ್ಹಾಗೂ ಹಿಸ್ಸಾ ನಲ್ಲಿಯೂ ಸ್ಟಾರ್ ಹಾಕಬೇಕು. ಇದಾದ ಮೇಲೆ ಅಲ್ಲಿ ಕಾಣುವ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು.
ಆಗ ನೀವು ಆಯ್ಕೆ ಮಾಡಿಕೊಂಡ ಸರ್ವೆ ನಂಬರಿನ ಯಾವ ಯಾವ ದಾಖಲೆಗಳನ್ನ ಮೊಬೈಲ್ ನಲ್ಲಿ ಚೆಕ್ ಮಾಡಬಹುದು ಎಂಬ ಪಟ್ಟಿ ಕಾಣಿಸುತ್ತದೆ. ಅಂದರೆ ಮೂಲ ಸರ್ವೆ ಟಿಪ್ಪಣಿ ಪುಸ್ತಕ, ಮೂಲ ಸರ್ವೆ ಪ್ರತಿ ಪುಸ್ತಕ ಕಾಯಂ ದರ ಪಟ್ಟಿ ಹೀಗೆ ಕೆಲವು ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ಮೇಲ್ಗಡೆ ಕಾಣಿಸುವ ಮೂಲ ಸರ್ವೆ ಟಿಪ್ಪಣಿ ಪುಸ್ತಕ ದ ಮುಂದೆ ಕಾಣುವ View Document ಕೆಳಗಡೆಯಿರುವ ಬಾಕ್ಸ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪಿಡಿಎಫ್ ಪೇಜ್ ಓಪನ್ ಆಗುತ್ತದೆ. ಅದೇ ನಿಮ್ಮ ಜಮೀನಿನ ಮೂಲ ಸರ್ವೆ ಟಿಪ್ಪಣಿ ಪುಸ್ತಕ.
ಇದನ್ನೂ ಓದಿ : 11 ಇ ನಕ್ಷೆ, ಪೋಡಿ, ಮೋಜಿಣಿ, ಆಕಾರಬಂದ್ ದಾಖಲೆಗಳು ಇಲ್ಲಿ ಲಭ್ಯ- ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಿ
ಈ ಪಿಡಿಎಫ್ ಫೈಲ್ ನಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ಕೆಳಗಡೆ ಜಮೀನಿನ ನಕ್ಷೆ ಕಾಣಿಸುತ್ತದೆ.ಅಂದರೆ ಸರ್ವೆ ನಂಬರ್ ಗಳನ್ನು ನಮೂದಿಸಲಾಗಿರುತ್ತದೆ. ಅಂಕಿಸಂಖ್ಯೆಗಳು ಕನ್ನಡದ ಅಂಕಿಗಳಲ್ಲಿರುತ್ತದೆ ಯಾವ ಸರ್ವೆ ನಂಬರ್ ಪಕ್ಕ ಯಾವ ಸರ್ವೆನಂಬರ್ ಇದೆ. ಅದರ ಆಕಾರ ಹೇಗಿದೆ ಎಂಬುದರ ಮಾಹಿತಿ ಕಾಣಿಸುತ್ತದೆ.
ಈ ಮೂಲ ಸರ್ವೆ ಟಿಪ್ಪಣಿ ಪುಸ್ತಕವನ್ನು ಪ್ರಿಂಟ್ ಪಡೆಯಬೇಕಾದರೆ ನೀವು ನಾಡ ಕಚೇರಿ ಅಥವಾ ತಹಸೀಲ್ ಕಚೇರಿಯಲ್ಲಿ ಪಡೆಯಬಹುದು. ಇದನ್ನು ರೈತರು ತಮ್ಮ ಮೊಬೈಲ್ ನಲ್ಲೇ ಎಲ್ಲಿ ಬೇಕಾದರೂ ನೋಡಲಿಕ್ಕೆ ಅಪ್ಲೋಡ್ ಮಾಡಲಾಗಿರುತ್ತದೆ. ಈ ಮೂಲ ದಾಖಲೆಯನ್ನು ನಿಗದಿಸಿದ ಶುಲ್ಕ ಪಾವತಿಸಿ ಪಡೆದುಕೊಳ್ಳಬಹುದು. ಇದರೊಂದಿಗೆ ನೀವು ಮೂಲ ಸರ್ವೆ ಪ್ರತಿ ಪುಸ್ತಕವನ್ನು ಸಹ ಪಡೆಯಬಹುದು. ಆ ದಾಖಲೆ ಎದುರಿರುವ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ ದಾಖಲೆಯನ್ನು ಮೊಬೈಲ್ ನಲ್ಲೇ ವೀಕ್ಷಿಸಬಹುದು.
ರೈತರಿಗೆ ಜಮೀನಿಗೆ ಸಂಬಂಧಿಸಿದ ದಾಖಲೆಗಳು ಸುಲಭವಾಗಿ ಸಿಗಲೆಂಬ ಉದ್ದೇಶದಿಂದಾಗಿ ಕಂದಾಯ ಇಲಾಖೆಯು ಎಲ್ಲಾ ಜಮೀನಿನ ದಾಖಲೆಗಳನ್ನು ಡಿಜಿಟಲೀಕರಣ ಮಾಡಿದೆ. ಜಮೀನಿಗೆ ಸಂಬಂಧಿಸಿದ ದಾಖಲೆ ಪಡೆಯಲು ಈಗ ಕಚೇರಿಗಳಿಗೂ ಅಲೆದಾಡಬೇಕಿಲ್ಲ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ ಪಡೆಯಬಹುದು.