ಯಾವ ಯಾವ ರೈತರ ಜಮೀನು ಪಟ್ಟಾ ಆಗಿದೆ? ಇಲ್ಲೇ ನೋಡಿ

Written by Ramlinganna

Updated on:

Check your land records details in mobile ರೈತರು ತಮ್ಮ ಮೊಬೈಲ್ ನಲ್ಲೇ ತಮ್ಮ ಸರ್ವೆ ನಂಬರಿನಲ್ಲಿ ಯಾವ ಯಾವ ರೈತರಿಗೆ ಜಮೀನು ಪಟ್ಟಾ ಆಗಿದೆ ಎಂಬುದನ್ನು ಚೆಕ್ ಮಾಡಬಹುದು.

ಹೌದು,  ಕಂದಾಯ ಇಲಾಖೆಯು ರೈತರಿಗೆ ಜಮೀನಿನ ದಾಖಲೆಗಳು ಸರಳ ರೂಪದಲ್ಲಿ ಗೊತ್ತಾಗಲು ಹಾಗೂ ಡೌನ್ಲೋಡ್ ಮಾಡಲು ಈ ವ್ಯವಸ್ಥೆ ಮಾಡಿದೆ. ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ದೇಶದ ಯಾವುದೇ ಮೂಲೆಯಿಂದಲೂ  ತಮ್ಮ ಜಮೀನಿನ ಗೇಣಿ ಮತ್ತು ಪಹಣಿ ಪತ್ರಿಕೆ ಫಾರ್ಂ ನಂಬರ್ 16ನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

Check your land records details in mobile ಮೊಬೈಲ್ ನಲ್ಲೆ ಪಹಣಿ ವೀಕ್ಷಿಸಲು ಏನು ಮಾಡಬೇಕು?

ರೈತರು ಮೊಬೈಲ್ ನಲ್ಲೇ ಗೇಣಿ ಪಹಣಿ ಪತ್ರಿಕೆ ಫಾರಂ ನಂಬರ್ 16 ನ್ನು ವೀಕ್ಷಿಸಲು ಈ

https://landrecords.karnataka.gov.in/Service2/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ  ಭೂಮಿ ಆನ್ಲೈನ್ ಲ್ಯಾಂಡ್ ರಿಕಾರ್ಡ್ ವೀವ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಯಾವ ಜಿಲ್ಲೆಗೆ ಸಂಬಂಧಿಸಿದ್ದಾರೋ ಆ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದಮೇಲೆ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಹೋಬಳಿ ಆಯ್ಕೆ ಮಾಡಿಕೊಂಡು ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಸರ್ವೆ ನಂಬರ್ ನಮೂದಿಸಬೇಕು. ಗೋ ಮೇಲೆ ಕ್ಲಿಕ್ ಮಾಡಬೇಕು. ಆಗ ಸರ್ನೋಕ್ ಕಾಲಂ ಆ್ಯಕ್ಟಿವ್ ಆಗುತ್ತದೆ. ಅಲ್ಲಿ ಸ್ಟಾರ್ ಹಾಗೂ ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಪೀರಿಯಡ್ ಕಾಲಂನಲ್ಲಿ 2022-2023 ಆಯ್ಕೆ ಮಾಡಿಕೊಳ್ಳಬೇಕು. ಇಯರ್ ನಲ್ಲಿ ಸಹ ಪ್ರಸಕ್ತ ವರ್ಷ ಅಂದರೆ 2022-2023 ಆಯ್ಕೆ ಮಾಡಿಕೊಳ್ಳಬೇಕು. ಇದಾದಮೇಲೆ Fetch Details  ಮೇಲೆ ಕ್ಲಿಕ್ ಮಾಡಬೇಕು.

ನಿಮ್ಮ ಜಮೀನಿನ ಸರ್ವೆ ನಂಬರಿನಲ್ಲಿ ಯಾವ ಯಾವ ಮಾಹಿತಿಗಳು ಲಭ್ಯವಿರುತ್ತದೆ?

ಆಗ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಜಮೀನಿನ ಮಾಲಿಕರು ಯಾರ್ಯಾರು ಇದ್ದಾರೆ ಎಂಬ ಪಟ್ಟಿ ಕಾಣುತ್ತದೆ ಯಾರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಹಾಗೂ ಖಾತಾ ನಂಬರ್ ಕಾಣುತ್ತದೆ. ಅದರ ಕೆಳಗಡೆ ಕಾಣುವ View ಮೇಲೆ ಕ್ಲಿಕ್ ಮಾಡಬೇಕು. ಮಾಡಬೇಕು.ಆಗ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಜಮೀನನ ಮಾಲೀಕರು ಯಾರು ಯಾರು ಇದ್ದಾರೆ ಎಂಬ ಪಟ್ಟಿ ಕಾಣುತ್ತದೆ. ಅಲ್ಲಿ ರೆಕಾರ್ಡ್ ಆಫ್ ರೈಟ್ಸ್, ಗೇಣಿ ಮತ್ತು ಪಹಣಿ ಪತ್ರಿಕೆ ಫಾರಂ ನಂಬರ್ 16 ಓಪನ್ ಆಗುತ್ತದೆ. ಅಲ್ಲಿ ನೀವು ನಮೂದಿಸಿ ಸರ್ವೆ ನಂಬರಿನಲ್ಲಿ ಒಟ್ಟು ಎಷ್ಟು ಎಕರೆ ಜಮೀನಿದೆ? ಯಾರ ಯಾರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿ ಕಾಣುತ್ತದೆ.  ನಿಮ್ಮ ಪಹಣಿಯಲ್ಲಿ ಹೆಸರು ಜಂಟಿಯಾಗಿದೆಯೋ ಪ್ರತ್ಯೇಕವಾಗಿದೆಯೋ ಎಂಬ ಮಾಹಿತಿ ಸಹ ಕಾಣುತ್ತದೆ.

ಇದನ್ನೂ ಓದಿ : ನಿಮ್ಮ ಜಮೀನನ ಮ್ಯಾಪ್ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿ 

ಪಹಣಿ ಮೇಲ್ಗಡೆ First Previous Next and Last ಎಂಬ ಆಯ್ಕೆ ಗಳಿರುತ್ತವೆ. ಅಲ್ಲಿ ಪ್ರಿವಿಯಸ್ ಮೇಲೆ ಕ್ಲಿಕ್ ಮಾಡುತ್ತಾ ಹೋದರೆ ಪಹಣಿಯಲ್ಲಿ ಇನ್ನೂ ಯಾರ ಯಾರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಚೆಕ್ ಮಾಡಬಹುದು. ಒಂದು ವೇಳೆ ರೈತರು ಬ್ಯಾಂಕ್ ಸಾಲ ಪಡೆದಿದ್ದರೆ ಆ ಮಾಹಿತಿ ಸಹ ಕಾಣುತ್ತದೆ. ನಿಮ್ಮ ಜಮೀನು ಮವುಟೇಶ್ ಆಗಿದ್ದರೆ ಮುಟೇಶನ್ ನಂಬರ್ ಸಹ ಕಾಣುತ್ತದೆ. ನಿಮ್ಮ ಜಮೀನಿನ ಮಣ್ಣು ಯಾವ ಪ್ರಕಾರದ್ದಾಗಿದೆ ಎಂಬ ಮಾಹಿತಿಯೂ ಇರುತ್ತದೆ.  ಮುಂಗಾರು ಹಂಗಾಮಿಗೆ ಯಾವ ಬೆಳೆಗೆ  ಬೆಳೆ ಸಮೀಕ್ಷೆಯಾಗಿದೆ ಎಂಬುದನ್ನು ಸಹ ಚೆಕ್ ಮಾಡಬಹುದು.

Leave a Comment