Gruhalakshmi Annabhagya bele hani ಹಾಗೂ ಬೆಳೆ ವಿಮೆ ಪರಿಹಾರ ಸ್ಟೇಟಸ್ ಗಳನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ಈಗ ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿದ ಫಲಾನುಭವಿಗಳು, ಅನ್ನಭಾಗ್ಯಕ್ಕೆ ಅರ್ಜಿ ಸಲ್ಲಿಸಿದವರು ಸ್ಟೇಟಸ್ ಚೆಕ್ ಮಾಡಬಹುದು. ಅದೇ ರೀತಿ ಬೆಳೆ ವಿಮೆ ಸಲ್ಲಿಸಿದ ರೈತರು ಹಾಗೂ ಬೆಳೆ ಹಾನಿಯಾದ ರೈತರು ಇಲ್ಲಿ ಕೆಳಗೆ ನೀಡಲಾದ ಲಿಂಕ್ ಗಳನ್ನು ಬಳಸಿ ತಮಗೆ ಹಣ ಜಮೆ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.
ಗೃಹಲಕ್ಷ್ಮೀ ಯೋಜನೆಯ ಸ್ಟೇಟಸ್ ಇಲ್ಲಿ ಚೆಕ್ ಮಾಡೋಣ
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದವರು ಈ
ಗೃಹಲಕ್ಷ್ಮೀ ಸ್ಟೇಟಸ್
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮಾಡಬೇಕು. ನಿಮ್ಮ ರೇಶನ್ ಕಾರ್ಡ್ ನಂಬರ್ ಹಾಕಬೇಕು. ನಂತರ Submit ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಇಲ್ಲಿಯವರೆಗೆ ಎಷ್ಟು ಕಂತುಗಳು ಯಾವ ಯಾವ ತಿಂಗಳು ಎಷ್ಟು ಹಣ ಜಮೆಯಾಗಿದೆ ಎಂಬ ಮಾಹಿತಿ ಚೆಕ್ ಮಾಡಬಹುದು.
ಅನ್ನಭಾಗ್ಯ ಯೋಜನೆಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಅನ್ನಭಾಗ್ಯ ಯೋಜನೆಯ ಸ್ಟೇಟಸ್ ಚೆಕ್ ಮಾಡಲು ಈ
https://ahara.kar.nic.in/lpg/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ವಿಭಾಗವಾರು ಕೆಳಗಡೆ ನಿಮ್ಮ ಜಿಲ್ಲೆಗಳು ಕಾಣಿಸುತ್ತವೆ. ನಿಮ್ಮ ಜಿಲ್ಲೆಯ ಮೇಲ್ಗಡೆ ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನೇರ ನಗದು ವರ್ಗಾವಣೆಯ ಸ್ಥಿತಿ (DBT) ಮೇಲೆ ಕ್ಲಿಕ್ ಮಾಡಬೇಕು.ಆಗ ವರ್ಷ 2023 ಕಾಣಿಸುತ್ತದೆ. ಅದರ ಕೆಳಗಡೆ ತಿಂಗಳು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ರೇಶನ್ ಕಾರ್ಡ್ ನಮೂದಿಸಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಗೋ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ನೀವು ಆಯ್ಕೆ ಮಾಡಿಕೊಂಡ ತಿಂಗಳಲ್ಲಿ ನಿಮಗೆ ಅನ್ನಭಾಗ್ಯ ಯೋಜನಯಡಿ ಎಷ್ಟು ಹಣ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.
ಬೆಳೆ ವಿಮೆ ಜಮೆಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಬೆಳೆವಿಮೆ ಹಣ ಜಮೆಯಾಗಿದೆಯೋ ಇಲ್ಲವೋ ಎಂಬ ಸ್ಟೇಟಸ್ ಚೆಕ್ ಮಾಡಲು ಈ
https://samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಋತು ಆಯ್ಕೆ ಕಾಲಂನಲ್ಲಿ Khariff ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ / Go ಮೇಲೆಕ್ಲಿಕ್ ಮಾಡಬೇಕು. ನಂತರ ಅಲ್ಲಿ ಕಾಣುವ check Status ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ನಿಮಗೆ ಪ್ರೋಪೋಸಲ್, ಮೊಬೈಲ್ ನಂ ಹಾಗೂ ಆಧಾರ್ ಹೀಗೆ ಮೂರು ಆಯ್ಕೆಗಳು ಕಾಣಿಸುತ್ತವೆ.
ಇದನ್ನೂ ಓದಿ ಜಮೀನಿಗೆ ಹೋಗಲು ಕಾಲುದಾರಿ ಬಂಡಿದಾರಿ ಇದೆಯೇ? ಇಲ್ಲೇ ಚೆಕ್ ಮಾಡಿ
ಅದರಲ್ಲಿ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಮುಂಗಾರು ಹಂಗಾಮಿನಲ್ಲಿ ಎಷ್ಟು ಬೆಳೆ ವಿಮೆ ಹಣ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.
ಬೆಳೆ ಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಬೆಳೆ ಹಾನಿ ಪರಿಹಾರ ಹಣ ನಿಮಗೆ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲುಈ
https://landrecords.karnataka.gov.in/PariharaPayment/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಎರಡು ಆಯ್ಕೆಗಳು ಕಾಣಿಸುತ್ತವೆ. ಪರಿಹಾರ ನಮೂದು ಸಂಖ್ಯೆ ಹಾಗೂ ಆಧಾರ್ ಸಂಖ್ಯೆ ಹೀಗೆ ಎರಡು ಆಯ್ಕೆಗಳು ಕಾಣಿಸುತ್ತವೆ.ಅದರಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು.
ಕಾಲಮಿಟಿ ಟೈಪ್ ನಲ್ಲಿ 2023-24, ಇಯರ್ ನಲ್ಲಿ 2023-24 ಆಯ್ಕೆ ಮಾಡಿದ ನಂತರ ಆಧಾರ್ ಸಂಖ್ಯೆ ನಮೂದಿಸಬೇಕು ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮಗೆ ಎಷ್ಟು ಬರಗಾಲ ಪರಿಹಾರ ಹಣ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.