Aadhaar Number : ರೈತರು ತಮ್ಮ ಆಧಾರ್ ನಂಬರ್ ಹಾಕಿ ಮೊಬೈಲ್ ನಲ್ಲೇ ಫ್ರೂಟ್ಸ್ ಐಡಿಯನ್ನು ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಹೌದು, ರೈತರು ತಮ್ಮ ಫ್ರೂಟ್ಸ್ ಪಡೆಯಲು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ಮಾಹಿತಿ.
ಜನಜಾಗರಣದಂತೆ ಈಗ ಯೂಟೂಬ್ ಚಾನಲಿನಲ್ಲಿಯೂ ಕೃಷಿ ಹಾಗೂ ಇನ್ನಿತರ ಮಾಹಿತಿ ಪಡೆಯಲು ಇಲ್ಲಿ subscribe ಮಾಡಿ
Aadhaar Number ಹಾಕಿ ಫ್ರೂಟ್ಸ್ ಐಡಿ ಚೆಕ್ ಮಾಡುವುದು ಹೇಗೆ?
ರೈತರು ತಮ್ಮ ಆಧಾರ್ ನಂಬರ್ ಹಾಕಿ ಫ್ರೂಟ್ಸ್ ಐಡಿ ಚೆಕ್ ಮಾಡಲು ಈ
https://fruitspmk.karnataka.gov.in/MISReport/GetDetailsByAadhaar.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫ್ರೂಟ್ಸ್ ಪಿಎಂ ಕಿಸಾನ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಫಾರ್ಮರ್ ಡಿಟೇಲ್ಸ್ ಕೆಳಗಡೆ ನಿಮ್ಮ ಆಧಾರ್ನಂಬರ್ ಹಾಕಬೇಕು. ನಂತರ Search ಮೇಲೆ ಕ್ಲಿಕ್ ಮಾಡಬೇಕು. ನೀವು ಫ್ರೂಟ್ಸ್ ಐಡಿಯನ್ನು ಹೊಂದಿದ್ದರೆ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಫ್ರೂಟ್ಸ್ ಐಡಿ, ಪಿಎಂಕೆಐಡಿ ಇದ್ದರೆ ಪಿಎಂಕೆಐಡಿ ಹಾಗೂ ನಿಮ್ಮ ಹೆಸರು ಕಾಣಿಸುತ್ತದೆ. ಈ ಫ್ರೂಟ್ಸ್ ಐಡಿಯನ್ನು ನೀವು ಬರೆದಿಟ್ಟುಕೊಳ್ಳಬೇಕು. ಏಕೆಂದರೆ ಮುಂದೆ ಸರ್ಕಾರದ ಸೌಲಭ್ಯ ಪಡೆಯಲು ಫ್ರೂಟ್ಸ್ ಐಡಿ ಕಡ್ಡಾಯವಾಗಿದೆ.
ಫ್ರೂಟ್ಸ್ ಐಡಿ ಎಲ್ಲಿ ಎಲ್ಲಿ ಕೆಲಸಕ್ಕೆ ಬರುತ್ತದೆ?
ಫ್ರೂಟ್ಸ್ ಐಡಿಯು ರೈತರ ಅತೀ ಮುಖ್ಯವಾದ ಕಾರ್ಡ್ ಆಗಿದೆ. ಆಧಾರ್ ಕಾರ್ಡ್, ರೇಶನ್ ಕಾರ್ಡ್, ಪ್ಯಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿಯಂತೆ ಫ್ರೂಟ್ಸ್ ಐಡಿಯೂ ಅತೀ ಮುಖ್ಯವಾದ ದಾಖಲೆಯಾಗಿದೆ. ಈ ದಾಖಲೆಯಿಂದ ರೈತರು ಬಿತ್ತನೆಯಿಂದ ಹಿಡಿದು ಕೊಯ್ಲುವರೆಗೆ ಕೃಷಿ ಯಂತ್ರೋಪಕರಣಗಳನ್ನು ಸಬ್ಸಿಡಿಯಲ್ಲಿ ಖರೀದಿಸಲು ಉಪಯೋಗವಾಗುತ್ತದೆ. ಬಿತ್ತನೆ ಬೀಜ ಪಡೆಯಲು ಸಹ ಫ್ರೂಟ್ಸ್ ಐಡಿ ಬೇಕಾಗುತ್ತದೆ. ತಾಡಪತ್ರಿ ಸಹಾಯಧನದಲ್ಲಿ ಪಡೆಯಲು, ಬೆಂಬಲ ಬೆಲೆಯಲ್ಲಿ ಮುಂಗಾರು ಹಿಂಗಾರು ಬೆಳೆಗಳನ್ನು ಮಾರಾಟ ಮಾಡಲು ಸಹ ಫ್ರೂಟ್ಸ್ ಐಡಿ ಬೇಕಾಗುತ್ತದೆ.
ಇದನ್ನೂ ಓದಿ : ಯಾವುದೇ ಜಮೀನು ಯಾರ ಹೆಸರಿನಲ್ಲಿದೆ? Mobileನಲ್ಲೇ ಚೆಕ್ ಮಾಡಿ
ತೋಟಗಾರಿಕೆ, ಕೃಷಿ ಇಲಾಖೆ., ಪಶು ಸಂಗೋಪನೆ, ಮೀನುಗಾರಿಕೆ, ರೇಷ್ಮೆ ಇಲಾಖೆ ಸೇರಿದಂತೆ ರೈತರು ಕೃಷಿಗೆ ಸಂಬಂಧಿಸಿದ ಉಪಕರಣಗಳನ್ನುಪಡೆಯಲು ಫ್ರೂಟ್ಸ್ ಐಡಿ ಕೇಳಲಾಗುವುದು. ಇತ್ತೀಚೆಗೆ ಬ್ಯಾಂಕಿನಲ್ಲಿ ಸಾಲ ನೀಡಲು ಸಹ ಫ್ರೂಟ್ಸ್ ಐಡಿಯನ್ನು ಕೇಳಲಾಗುತ್ತಿದೆ. ಹಾಗಾಗಿ ಪ್ರತಿಯೊಬ್ಬ ರೈತರು ಫ್ರೂಟ್ಸ್ ಐಡಿಯನ್ನು ಹೊಂದಿರಬೇಕು.
ನಿಮ್ಮ ಫ್ರೂಟ್ಸ್ ಐಡಿ ಆಗಿಲ್ಲವೇ? ಇಲ್ಲಿ ಅರ್ಜಿ ಸಲ್ಲಿಸಿ
ಫ್ರೂಟ್ಸ್ ಐಡಿ ಇಲ್ಲದಿದ್ದರೆ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು. ಫ್ರೂಟ್ಸ್ ಐಡಿ ಪಡೆಯಲು ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಆಧಾರ್ ಕಾರ್ಡ್ ದೊಂದಿಗೆ ಜಮೀನಿನ ದಾಖಲೆಗಳು, (ಪಹಣಿ) ಬ್ಯಾಂಕ್ ಪಾಸ್ ಬುಕ್ ಪ್ರತಿ, ಇತ್ತೀಚಿನ ಫೋಟೋ ಹೊಂದಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಆರ್.ಡಿ ಸಂಖ್ಯೆ ಹೊಂದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ಈ ಎಲ್ಲಾ ದಾಖಲೆಗಳೊಂದಿಗೆ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಫ್ರೂಟ್ಸ್ ಐಡಿಗಾಗಿ ನೋಂದಣಿ ಮಾಡಿಸಬಹುದು.
Aadhaar Number ಹಾಕಿ ಮೊಬೈಲ್ ನಲ್ಲಿಯೂ ಫ್ರೂಟ್ಸ್ ಐಡಿಗೆ ಅರ್ಜಿ ಸಲ್ಲಿಸಬಹುದು?
ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಫ್ರೂಟ್ಸ್ ಐಡಿಗಾಗಿ ನೋಂದಣಿ ಮಾಡಿಸಲು ಈ
https://fruits.karnataka.gov.in/OnlineUserLogin.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ Citizen Registration ಮೇಲೆ ಕ್ಲಿಕ್ ಮಾಡಬೇಕು. ನಂತರ ಆಧಾರ್ ನಲ್ಲಿರುವಂತೆ ಹೆಸರು ನಮೂದಿಸಬೇಕು. ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಕಬೇಕು. ನಂತರ ಐ ಅಗ್ರಿ ಬಾಕ್ಸ್ ಆಯ್ಕೆ ಮಾಡಿ ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.