ನಿಮ್ಮ ಮಕ್ಕಳಿಗೆ ಎಷ್ಟು ಸ್ಕಾಲರ್ ಶಿಪ್ ಬರುತ್ತಿದೆ? ಇಲ್ಲೇ ಚೆಕ್ ಮಾಡಿ

Written by Ramlinganna

Updated on:

Check your child scholarship status  ಪಾಲಕರು ತಮ್ಮಮಕ್ಕಳಿಗೆ ಎಷ್ಟು ಸ್ಕಾಲರಶಿಪ್ ಬರುತ್ತಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಪ್ರತಿ ವರ್ಷದಂತೆ ಈ ವರ್ಷವೂ ಸಹ 1 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ  ಸ್ಕಾಲರಶಿಪ್ ಜಮೆಯಾಗಿದೆ.  ವಿದ್ಯಾರ್ಥಿ ವೇತನವನ್ನು ಆಧಾರ್ ಜೋಡಣೆಯಾಗಿರುವ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆಯಾಗಲಿದೆ. ಹಿಂದೆ ಶಿಷ್ಯ ವೇತನಕ್ಕೆ ಅರ್ಜಿ ಸಲ್ಲಿಸಿದವರು ತಮಗೆ ಪ್ರತಿ ವರ್ಷ ಸ್ಕಾಲರಶಿಪ್ ಬರುತ್ತಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

Check your child scholarship status ಶಿಷ್ಯವೇತನವನ್ನು ಮೊಬೈಲ್ ನಲ್ಲೇ ಚೆಕ್ ಮಾಡುವುದು ಹೇಗೆ?

ವಿದ್ಯಾರ್ಥಿಗಳು ಪಾಲಕರು ತಮ್ಮ ಮಕ್ಕಳಿಗೆ ಪ್ರತಿ ವರ್ಷ ಎಷ್ಟು ಸ್ಕಾಲರ್ ಶಿಪ್ ಬರುತ್ತಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಲು ಈ

http://ssp.karnataka.gov.in

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ಕಾಣುವ ಮೆಟ್ರಿಕ್ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಅರ್ಜಿ ಸ್ಥಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಮೇಲೆ ಕ್ಲಿಕ್ ಮಾಡಬೇಕು.  ನಂತರ ವಿದ್ಯಾರ್ಥಿಯ ಮಾರ್ಕ್ಸ್ ಕಾರ್ಡ್ ನಲ್ಲಿರುವ SATS ID ಗುರುತಿನ ಸಂಖ್ಯೆ ನಮೂದಿಸಬೇಕು. ನಂತರ ಯಾವ ವರ್ಷದ ಸ್ಟೇಟಸ್ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ವರ್ಷ ಆಯ್ಕೆ ಮಾಡಿಕೊಂಡು ಹುಡುಕು ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಮಗುವಿಗೆ ಸ್ಕಾಲರ್ ಶಿಪ್ ಎಷ್ಟು ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು. ವಿದ್ಯಾರ್ಥಿಯು 2018 ರಿಂದ ಇಲ್ಲಿಯವರೆಗೆ ಯಾವ ವರ್ಷದಲ್ಲಿ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ನೋಡಬಹುದು.

ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿರುವ ಅರ್ಹತೆಗಳು

ವಿದ್ಯಾರ್ಥಿಯು ಖಾಸಗಿ ಅಥವಾ ಸರ್ಕಾರಿ ಶಾಲೆಯಲ್ಲಿ ಓದುತ್ತಿರಬೇಕು. ವಿದ್ಯಾರ್ಥಿಯ ಬಳಿ ಆಧಾರ್ ಕಾರ್ಡ್ ಇರಬೇಕು. ಹಿಂದಿನ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿಅರ್ಜಿ ಸಲ್ಲಿಸುವಂತಿಲ್ಲ. ಈ ಹಿಂದೆ ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡಿದ್ದರೆ ಮತ್ತು 2022-23ನೇ ಸಾಲಿನ ನವೀನ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ ಉನ್ನತ ವ್ಯಾಸಂಗಕ್ಕೆ 15 ಲಕ್ಷ ರೂಪಾಯಿಯವರೆಗೆ ಬಡ್ಡಿರಹಿತ ಸಾಲ ನೀಡಲು ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ವಿದ್ಯಾರ್ಥಿಯ ಬಳಿ ರಾಷ್ಟ್ರೀಕೃತ ಬ್ಯಾಂಕ್ ಅಕೌಂಟ್ ಅಥವಾ ಅಂಚೆ ಕಚೇರಿಯಲ್ಲಿನ ಐಪಿಪಿಬಿ ಅಕೌಂಡ್ ಹೊಂದಿರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಗತ್ತಿಸಬೇಕು.

ನೀವು ಹೊಸದಾಗಿ ಅರ್ಜಿ ಸಲ್ಲಿಸುತ್ತಿದ್ದರೇನು ಮಾಡಬೇಕು?

ವಿದ್ಯಾರ್ಥಿಯು ಹೊಸದಾಗಿ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸುತ್ತಿದ್ದರೆ ನೀವು ಯಾವ ಸಮುದಾಯಕ್ಕೆ ಸೇರಿದ್ದೀರೋ  ಎಂಬುದನ್ನು ಯೋಜನೆಗಳು ಕೆಳಗಡೆ ಕಾಣು ಯೋಜನೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಹೊಸ ಖಾತೆಯನ್ನು ಸೃಜಿಸಲು ಇಲ್ಲಿ ಕ್ಲಿಕ್ ಮಾಡಿ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮಾರ್ಕ್ಸ್ ಕಾರ್ಡ್ ನಲ್ಲಿರುವ SATS ID ಗುರುತಿನ ಸಂಖ್ಯೆಯನ್ನು ನಮೂದಿಸಿ ಮುಂದೆ ಕೇಳಲಾದ ಅಗತ್ಯ ಮಾಹಿತಿಗಳು ಸೇರಿದಂತೆ ತಂದೆ, ತಾಯಿಯ ಹೆಸರು ಶಾಲೆಯ ಹೆಸರು ಸರಿಯಾಗಿ ಭರ್ತಿ ಮಾಡಬೇಕು.

ಅರ್ಜಿ ಭರ್ತಿ ಮಾಡಲು ಸಮಸ್ಯೆಯಾಗುತ್ತಿದ್ದರೆ ಅಲ್ಲಿ ಎಲ್ಲಾ ಇಲಾಖೆಗಳ  ಸಂಪರ್ಕದ ನಂಬರ್ ಕೊಟ್ಟಿರುತ್ತಾರೆ. ವಿದ್ಯಾರ್ಥಿಗಳು ಯಾವ ಸಮುದಾಯಕ್ಕೆ ಸೇರಿದ್ದಾರೋ ಆ ಸಮುದಾಯ ಇಲಾಖೆಯ ನಂಬರಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು.

ಬಹುತೇಕ ಪಾಲಕರು  ತಮ್ಮ ಮಕ್ಕಳಿಗೆ ಸರ್ಕಾರದ ವತಿಯಿಂದ ಸಿಗುವ ಸ್ಕಾಲರ್ ಶಿಪ್ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.

Leave a Comment