11-E nakshe podi : ರೈತರ ಜಮೀನಿಗೆ ಸಂಬಂಧಿಸಿದ 11 ಇ ನಕ್ಷೆ, ಪೋಡಿ, ಆಕಾರ್ ಬಂದ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಗ್ರಾಮ ಪಂಚಾಯತ್ ನಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೇ ಪಡೆಯಬಹುದು.
ಜನಜಾಗರಣ ಯೂಟೂಬ್ ಚಾನಲಿಗೆ ಸಬಸ್ಕ್ರೈಬ್ ಮಾಡಿ
ಹೌದು, ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಮೋಜಣಿ ವ್ಯವಸ್ಥೆಯ ಎಲ್ಲಾ ಸೇವೆಗಳನ್ನು ಗ್ರಾಮ ಪಂಚಾಯತ್ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೇ ಒದಗಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕರು ಸೂಚಿಸಿ ಆದೇಶ ಹೊರಡಿಸಿದ್ದಾರೆ.
ಇದುವರೆಗೆ ತಾಲೂಕು ಕಚೇರಿ ಹಾಗೂ ಹೋಬಳಿ ಮಟ್ಟದ ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿ ಮಾತ್ರ ಭೂಮಾಪನ ಕಂದಾಯ ವ್ಯವಸ್ಥೆ, ಭೂ ದಾಖಲೆಗಳ ಮೋಜಣಿ ವ್ಯವಸ್ಥೆಯಡಿ ಇ ನಕ್ಷೆ, ತತ್ಕಾಲ್ ಪೋಡಿ, ಭೂ ಪರಿವರ್ತನೆಗಾಗಿ ಅರ್ಜಿ ಹಾಗೂ ಹದ್ದುಬಸ್ತು ಸೇವೆ ನೀಡಲಾಗುತ್ತಿತ್ತು. ಈಗ ಈ ಎಲ್ಲಾ ದಾಖಲೆಗಳನ್ನು ಬಾಪೂಜಿ ಸೇವಾ ಕೇಂದ್ರಗಳಲ್ಲಿಯೇ ಸಿಗಲಿದೆ.
ಇದನ್ನೂ ಓದಿ : ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ಮಾಡಿ ಬೆಳೆ ಹಾನಿ, ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ಪಡೆಯಿರಿ
ನಾಗರಿಕರು ತಮ್ಮ ಸ್ವಂತ ಖಾಸಗಿ ಭೂಮಿಗಾಗಿ 11 ಇ ಪೋಡಿ ಮತ್ತು ಭೂ ಪರಿವರ್ತನೆಗಾಗಿ ತಾವೇ ನಕ್ಷೆ ತಯಾರಿಸಲು ಸರ್ಕಾರದ ವತಿಯಿಂದ ಸ್ವಾವಲಂಬಿ ಯೋಜನೆಯನ್ನುಜಾರಿಗೆ ತರಲಾಗಿದೆ. ನಾಗರಿಕರು,11 ಪೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತು ಹಾಗೂ ಇತರ ನಕ್ಷೆಗಳ ಪ್ರಿಂಟ್ ನ್ನು ಸಹ ಇನ್ನೂ ಮುಂದೆ ಕಚೇರಿಗಳಿಗೆ ಅಲೆಯಬೇಕಿಲ್ಲ. ಈ ಎಲ್ಲಾ ಸೇವೆಗಳನ್ನುಆನ್ಲೈನ್ ನಲ್ಲೇ ಪಡೆಯಬಹುದು. ಅಂದರೆ ಆನ್ಲೈನ್ ನಲ್ಲೇ ನಕ್ಷೆಗಳ ಪ್ರಿಂಟ್ ಪಡೆಯಬಹುದು ಮತ್ತು ಅರ್ಜಿಗಳ ಸ್ಟೇಟಸ್ ಸಹ ಚೆಕ್ ಮಾಡಬಹುದು.
11-E nakshe podi ಆನ್ಲೈನ್ ನಲ್ಲೇ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
11 ಇ ಪೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತು ಹಾಗೂ ಮೋಜಿಣಿಯ ಸ್ಟೇಟಸ್ ಚೆಕ್ ಮಾಡಲು ಈ
https://bhoomojini.karnataka.gov.in/service19/report/Applicationdetails
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೋಜಿಣಿಯ ಸ್ಟೇಟಸ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಅಲ್ಲಿ View / Download Survey Documents ಅಥವಾ Pay and get original survey documents ಎಂಬ ಎರಡು ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ಅಪ್ಲಿಕೇಶನ್ ನಂಬರ್, ನಿಮ್ಮ ಮೊಬೈಲ್ ನಂಬರ್, ಇನ್ನಿತರ ಮಾಹಿತಿ ಭರ್ತಿ ಮಾಡಿ ಗೆಟ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಬಹುದು.
ಸರ್ವೆ ದಾಖಲೆಗಳನ್ನು ಚೆಕ್ ಮಾಡಬೇಕಾದರೆ ವೀವ್ ಡೌನ್ಲೋಡ್ ಸರ್ವೆ ಡಾಕುಮೆಂಟ್ ಮೇಲೆ ಕ್ಲಿಕ್ ಮಾಡಬೇಕು. ಓರಿಜನಲ್ ಸರ್ವೆ ದಾಖಲೆಗಳನ್ನು ಪಡೆಯಬೇಕಾದರ Pay and get orginal Survey documents ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಅಟ್ಲಾಸ್, ಸರ್ವೆ ಪಕ್ಕಾ ಬುಕ್, ಟಿಪ್ಪಣಿ, ಅಕಾರ್ ಬಂದ್, ಸರ್ವೆ ಪ್ರತಿ ಪುಸ್ತಕ ದಾಖಲೆಗಳ ಪಟ್ಟಿ ಕಾಣಿಸುತ್ತದೆ. ಅದರಲ್ಲಿ ನೀವು ಯಾವುದಕ್ಕಾಗಿ ಅರ್ಜಿ ಸಲ್ಲಿಸುತ್ತಾರೋ
ನಿರ್ಧರಿಸಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಸೆಂಡ್ ಓಟಿಪಿ ಮೇಲೆ ಕ್ಲಿಕ್ ಮಾಡಿ ದಾಖಲೆಗಳಿಗಾಗಿ ಆನ್ಲೈನ್ ನಲ್ಲೇ ಅರ್ಚಿ ಸಲ್ಲಿಸಬಹುದು.
ಬಾಪೂಜಿ ಸೇವಾ ಕೇಂದ್ರದಲ್ಲೇ ವ್ಯವಸ್ಥೆ
ಇದರಿಂದ ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಸೇವೆ ಒದಗಿಸಲು ಸಾಧ್ಯವಾಗದೆ ಗ್ರಾಮಾಂತರ ಜನರು ಸೇವೆ ಪಡೆಯಲು ಗ್ರಾಮಗಳಿಂದ ತಾಲೂಕು ಕಚೇರಿಗಳತ್ತ ಮುಖ ಮಾಡಬೇಕಾಗಿತ್ತು. ಈ ಸಮಸ್ಯೆ ಪರಿಹರಿಸಲು ಗ್ರಾಮೀಣರಿಗೆ ಅಗತ್ಯವಿರುವ ಭೂಮಾಪನ ಕಂದಾಯ ವ್ಯವಸ್ಥೆ ಹಾಗೂ ಭೂ ದಾಖಲೆಗಳ ಮೋಜಣಿ ವ್ಯವಸ್ಥೆಯಡಿ ಸೇವೆಗಳನ್ನು ತ್ವರಿತವಾಗಿ ಪಂಚಾಯತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೀಡಲು ಸರ್ಕಾರವು ಮುಂದಾಗಿದೆ.