ನಿಮ್ಮ ಜಮೀನಿನ ಸುತ್ತಮುತ್ತ ಯಾರಿಗೆ ಎಷ್ಟು ಎಕರೆಯಿದೆ? ಚೆಕ್ ಮಾಡಿ

Written by Ramlinganna

Updated on:

Check whose land is there around your land in mobile ರೈತರು ತಮ್ಮ ಜಮೀನಿನ ಸುತ್ತಮುತ್ತಲಿರುವ ಜಮೀನಿನ ಮಾಲಿಕರಾರು? ಯಾರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ರೈತರು ತಮ್ಮ ಜಮೀನಿನ ಸುತ್ತಮುತ್ತಲಿರುವ ರೈತರ ಜಮೀನುಗಳು ಯಾರ ಹೆಸರಿನಲ್ಲಿದೆ ಹಾಗೂ ಎಷ್ಟು ಎಕರೆ ಅವರ ಹೆಸರಿನಲ್ಲಿದೆ? ಖರಾಬು ಜಮೀನು ಎಷ್ಟಿದೆ?  ಜಮೀನಿನ ಮಣ್ಣು ಯಾವ ಪ್ರಕಾರದಲ್ಲಿದೆ? ನಿಮ್ಮ ಸರ್ವೆ ನಂಬರ್ ನಲ್ಲಿ ಯಾರ ಯಾರ ಹೆಸರಿದೆ? ಹೆಸರುಗಳು ಜಂಟಿಯಾಗಿದೆಯೋ ಅಥವಾ ಜಮೀನು ಮಾಲಿಕರ ಹೆಸರಿಗಿದೆಯೇ ಎಂಬುದನ್ನು ಸಹ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಚೆಕ್ ಮಾಡುವುದು ಅಂದುಕೊಂಡಿದ್ದೀರಾ… ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Check whose land is there around your land in mobile ರೈತರ ಜಮೀನಿನ ಸುತ್ತಮುತ್ತಲಿನ ಎಷ್ಟು ಎಕರೆಯಿದೆ? ಚೆಕ್ ಮಾಡಿ

ರೈತರು ತಮ್ಮ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲೇ ತಮ್ಮ ಹೊಲದ ಸುತ್ತಮುತ್ತಲಿರುವ ಜಮೀನು ಯಾರ ಯಾರ ಹೆಸರಿಗಿದೆ ಎಂಬುದನ್ನು ಚೆಕ್ ಮಾಡಲು ಈ

https://mahitikanaja.karnataka.gov.in/Revenue/RevenueRTCInfo?ServiceId=1020&Type=TABLE&DepartmentId=2066

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಆರ್.ಟಿ.ಸಿ  ಮಾಹಿತಿ ವೀಕ್ಷಿಸುವ ಒಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಯಾವ ಜಿಲ್ಲೆಗೆ ಸಂಬಂಧಿಸಿದ್ದಾರೋ ಆ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಂಡು ಹೋಬಳಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಾದ ಮೇಲೆ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಕೊನೆಗೆ ಸಮೀಕ್ಷೆ ಸಂಖ್ಯೆ ಅಂದರೆ ರೈತರ ಯಾವ ಜಮೀನಿನ ಸುತ್ತಮುತ್ತಲಿರುವ ಮಾಲಿಕರ ಹೆಸರು ನೋಡಬೇಕೆಂದುಕೊಂಡಿದ್ದಾರೋ ಆ ಸರ್ವೆ ನಂಬರ್ ನಮೂದಿಸಬೇಕು. ಸರ್ವೆ ನಂಬರ್ ನಮೂದಿಸಿದ ನಂತರ ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು.

ಆಗ ಇನ್ನೊಂದು ಪೇಜ್ ಕೆಳಗಡೆ ಕಾಣುತ್ತದೆ. ಅಲ್ಲಿ ಹಿಸ್ಸಾ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು.  ಇದಾದಮೇಲೆ ಲ್ಯಾಂಡ್ಕೋಡ್ ಕಾಣುತ್ತದೆ. ಆರ್.ಟಿಸಿ ಮಾಹಿತಿ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಮೂದಿಸಿದ ಸರ್ವೆ ನಂಬರಿನ ಮಾಹಿತಿ ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಮಾನ್ಯವಾಗಿದೆ ಎಂಬುದು ಕಾಣುತ್ತದೆ. ನಂತರ ತಾಲೂಕು, ಹೋಬಳಿ ಹಾಗೂ ನಿಮ್ಮ ಗ್ರಾಮದ ಹೆಸರು ಕಾಣುತ್ತದೆ.

ಇದನ್ನೂ ಓದಿ : ಯಾವ ರೈತರಿಗೆ ಬೆಳೆ ವಿಮೆ ಹಣ ಜಮೆಯಾಗುತ್ತದೆ? ಯಾರಿಗೆ ಜಮೆಯಾಗಲ್ಲ? ಇಲ್ಲಿದೆ ಮಾಹಿತಿ

ಇದರ ಕೆಳಗಡೆ ಸರ್ವೆ ನಂಬರ್ ಕಾಣುತ್ತದೆ. ಖರಾಬು ಜಮೀನು ಎಷ್ಟಿದೆ ? ನೀವು ನಮೂದಿಸಿದ ಸರ್ವೆ ನಂಬರ್ ನಲ್ಲಿ ಒಟ್ಟು ಎಷ್ಟು ಎಕರೆ ಜಮೀನಿದೆ. ಜಮೀನು ಪಟ್ಟಾವಾಗಿದೆಯೇ? ಮಣ್ಣಿನ ಪ್ರಕಾರ ಯಾವುದು ಕಾಣುತ್ತದೆ.

ನಿಮ್ಮ ಜಮೀನಿನ ಸುತ್ತಮುತ್ತಲಿರುವ ಮಾಲೀಕರ ವಿವರಗಳು

ನೀವು ನಮೂದಿಸಿದ ಸರ್ವೆ ನಂಬರಿನ ಸುತ್ತಮುತ್ತಲಿರುವ ಜಮೀನುಗಳ ಮಾಲಿಕರ ಹೆಸರು, ತಂದೆಯ ಹೆಸರು ಅವರ ಹೆಸರಿಗೆ ಎಷ್ಟು ಎಕರೆ ಹಾಗೂ ಗುಂಟೆಯಲ್ಲಿ ಜಮೀನಿದೆ ಹಾಗೂ ಜಂಟಿ ಮಾಲಿಕರಿದ್ದರೆ ಅವರ ಹೆಸರು ಕಾಣುತ್ತದೆ. ನಿಮ್ಮ ಜಮೀನಿನ ಖಾತಾ ಸಂಖ್ಯೆಯೂ ಕಾಣುತ್ತದೆ.  ನಿಮ್ಮ ಜಮೀನಿನ ಸುತ್ತಮುತ್ತಲಿರುವ ಮಾಲಿಕರ ಹೆಸರು ಅಂದರೆ ಸಿಮ್ಮ ಸರ್ವೆ ನಂಬರ್ ನಲ್ಲಿ ಯಾರ ಯಾರ ಹೆಸರಿಗೆ ಜಮೀನಿದೆ ಎಂಬ ಮಾಹಿತಿಯನ್ನು ರೈತರು ಸರಳವಾಗಿ ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.  ಈ ಮಾಹಿತಿ ನೋಡಲು ರೈತರಿಗೆ ಯಾರ ಸಹಾಯವೂ ಬೇಕಿಲ್ಲ.  ಕೇವಲ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಹಾಗೂ ಸರ್ವೆ ನಂಬರ್ ನಮೂದಿಸಿದರೆ ಸಾಕು, ನಿಮ್ಮ ಜಮೀನಿನ ಸುತ್ತುಮುತ್ತಲಿರುವ ಮಾಲಿಕರ ಮಾಹಿತಿ ನಿಮ್ಮ ಕೈಯಲ್ಲಿರುತ್ತದೆ.

Leave a Comment