check Ration card list : ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ವಿತರಿಸಲು ಸರ್ಕಾರ ಕೊನೆಗೂ ಒಪ್ಪಿಕೊಂಡಿದೆ.
ಹೀಗಾಗಿ ಇನ್ನು ಮುಂದೆ ಹಣದ ಬದಲು ಬಿಪಿಎಲ್ ಕುಟುಂಬದ ಪ್ರತಿ ಸದಸ್ಯನಿಗೆ ಕೇಂದ್ರದ ಪಾಲೂ ಸೇರಿದಂತೆ ಹತ್ತು ಕೆಜಿ ಅಕ್ಕಿ ಸಿಗಲಿದೆ. ತಿಂಗಳಾಂತ್ಯ ಅಥವಾ ಮಾರ್ಚ್ 10 ರೊಳಗೆ ಹಣದ ಬದಲು ಅಕ್ಕಿ ವಿತರಣೆ ಜಾರಿಯಾಗಲಿದೆ.
ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು. ಕೇಂದ್ರ ಸರ್ಕಾರ ಭಾರತೀಯ ಆಹಾರ ನಿಗಮದ (ಎಫ್ಸಿಐ) ಮೂಲಕ ಮುಕ್ತ ಮಾರುಕಟ್ಟೆ ಮರಾಟ ಯೋಜನೆಯಡಿ (ಒಎಂಎಸ್ಎಸ್) ಕೆಜಿ ಅಕ್ಕಿಗೆ 22.50 ರೂಪಾಯಿನಂತೆ ಪ್ರತಿ ತಿಂಗಳು 2 ಲಕ್ಷಕ್ಕಿಂತ ಅಧಿಕ ಮೆಟ್ರಿಕ್ ಟನ್ ಅಕ್ಕಿಯನ್ನು ನಮಗೆ ಮಾರಾಟ ಮಾಡಲಿದೆ ಎಂದರು.
ಬಿಪಿಎಲ್ ಕಾರ್ಡ್ ನ ಪ್ರತಿ ಸದಸ್ಯನಿಗೆ ಕೆಜಿಗೆ 34 ರೂಪಾಯಿಯಂತೆ 5 ಕೆಜಿ ಅಕ್ಕಿಗೆ 170 ರೂಪಾಯಿ, ಅಂತ್ಯೋದಯ ಕಾರ್ಡ್ ನ ನಾಲ್ಕು ಸದಸ್ಯರಿದ್ದರೆ ಕುಟುಂಬಕ್ಕೆ170 ರೂಪಾಯಿ ಐದು ಸದಸ್ಯರಿದ್ದರೆ 510 ರೂಪಾಯಿ ಮತ್ತು 6 ಸದಸ್ಯರಿದ್ದರೆ 850 ರೂಪಾಯಿ ಹಣ ಹಾಕಲಾಗುತ್ತಿತ್ತು ಎಂದು ಸಚಿವರು ಮಾಹಿತಿ ನೀಡಿದರು.
10 ಕೆಜಿ ಆಹಾರ ಪದಾರ್ಥ
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಕೇಂದ್ರ, ರಾಜ್ಯದ 1.02 ಕೋಟಿ ಬಿಪಿಎಲ್, 10.80 ಲಕ್ಷ ಅಂತ್ಯೋದಯ ಕಾರ್ಡ್ ಗಳಿಗೆ ಉಚಿತ ಆಹಾರ ಪದಾರ್ಥ ವಿತರಿಸುತ್ತಿದೆ.
ಇದನ್ನೂ ಓದಿ : ನಿಮ್ಮ ಜಮೀನಿನ ಸರ್ವೆ ನಂಬರ್ ಮ್ಯಾಪ್ ಹೀಗೆ ಡೌನ್ಲೋಡ್ ಮಾಡಿ
ಹಾಗಾಗಿ ಪ್ರತಿ ಸದಸ್ಯನಿಗೆ 3 ಅಕ್ಕಿ, 2 ಕೆಜಿ ರಾಗಿ ಸೇರಿ ಒಟ್ಟು 5 ಕೆಜಿ ಹಾಗೂ ಪ್ರತಿ ಅಂತ್ಯೋದಯ ಕಾರ್ಡಿಗೆ 20 ಕೆಜಿ ಅಕ್ಕಿ, 15 ಕೆಜಿ ರಾಗಿ ಸೇರಿ ಒಟ್ಟು 35 ಕೆಜಿ ಆಹಾರ ಪದಾರ್ಥ ಉಚಿತವಾಗಿ ಸಿಗುತ್ತಿದೆ. ಇದೀಗ ರಾಜ್ಯವು ಅನ್ನಭಾಗ್ಯ ಯೋಜನೆಯಡಿ ಪ್ರತಿ ಬಿಪಿಎಲ್ ಸದಸ್ಯನಿಗೆ 5 ಕೆಜಿ ಉಚಿತವಾಗಿ ಅಕ್ಕಿ ನೀಡುವುದರಿಂದ ಉಚಿತವಾಗಿ 10 ಕೆಜಿ ದೊರೆತಂತಾಗಲಿದೆ.
check Ration card list ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಯಾರು ಯಾರಿಗೆ ಸಿಗಲಿದೆ?
ಅನ್ನಭಾಗ್ಯ ಯೋಜನೆಯಡಿಯಲ್ಲಿ ನೋಂದಣಿ ಮಾಡಿಸಿದ ಯಾರು ಯಾರು ಫಲಾನುಭವಿಗಳಿಗೆ ಇನ್ನೂ ಮುಂದೆ 10 ಕೆಜಿ ಅಕ್ಕಿ ಸಿಗಲಿದೆ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಬಹುದು. ಹೌದು, ಚೆಕ್ ಮಾಡಲು ಈ
https://ahara.karnataka.gov.in/Home/EServices
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಆಹಾರ ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಇ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಹಳ್ಳಿ ಪಟ್ಟಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಜಿಲ್ಲೆ ತಾಲೂಕು, ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಂಡು ನಂತರ ವಿಲೇಜ್ ಮೇಲೆ ಕ್ಲಿಕ್ ಮಾಡಬೇಕು.ಮಾಡಬೇಕು.ನಂತರ ಗೋ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಊರಿನಲ್ಲಿ ಯಾರು ಯಾರು ರೇಶನ್ ಕಾರ್ಡ್ ಪಡೆದಿದ್ದಾರೆ ಅವರ ಹೆಸರು ಕಾಣಿಸುತ್ತದೆ. ನಿಮ್ಮ ಹೆಸರು ವಿಳಾಸದ ಮುಂದೆ ರೇಶನ್ ಕಾರ್ಡ್ ಯಾವ ಪ್ರಕಾರದ್ದಾಗಿದೆ ಎಂಬುದು ಕಾಣಿಸುತ್ತದೆ. Priority Household Not Eligible for Kerosene ಇದ್ದರೆ ನಿಮಗೆ10 ಕೆಜಿ ಅಕ್ಕಿ ಸಿಗಲಿದೆ. ಅಂದರೆ ನಿಮ್ಮ ಕುಟುಂಬದಲ್ಲಿ ಎಷ್ಟುಸದಸ್ಯರಿದ್ದರೆ ಕಾಣಿಸುತ್ತದೆ. ಅಸ್ಟುಸದಸ್ಯರಿಗೆ ಪ್ರತಿ ತಿಂಗಳಿಗೆ10 ಕೆಜಿ ಅಕ್ಕಿ ಸಿಗಲಿದೆ.
2023 ರ ಜುಲೈ ನಿಂದ 2024 ರ ಅಕ್ಟೋಬರ್ ವರೆಗೆ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ 10,452 ಕೋಟಿ ರೂಪಾಯಿ ವರ್ಗಾಯಿಸಲಾಗಿದೆ.
ಬಾಕಿ ಉಳಿದಿರುವ 3 ತಿಂಗಳಿನ ಹಣವನ್ನು ಡಿಬಿಟಿ ಮೂಲಕ ಕಾರ್ಡ್ ದಾರರ ಖಾತೆಗೆ ಶೀಘ್ರ ಜಮೆ ಮಾಡುವುದಾಗಿ ಸಚಿವರು ಭರವಸೆ ನೀಡಿದರು. ರದ್ದಾದ ಲಕ್ಷಾಂತರ ಬಿಪಿಎಲ್ ಚೀಟಿಗಳನ್ನು ಮರು ಸ್ಥಾಪಿಸಲಾಗಿದ್ದು, ಅವುಗಳಿಗೂ ಹೆಚ್ಚುವರಿ ಅಕ್ಕಿ ದೊರೆಯಲಿದೆ. ಭತ್ತ ಬೆಳೆಯುವ ರಾಜ್ಯಗಳಲ್ಲಿ ಕೇಂದ್ರ ಸರ್ಕಾರವು ಪ್ರತಿ ಕೆಜಿ 40 ರೂಪಾಯಿಯಂತೆ ಅಕ್ಕಿ ಖರೀದಿಸಿ ನಮಗೆ ಸಬ್ಸಿಡಿ ದರದಲ್ಲಿ ನೀಡುತ್ತಿದೆ.