for Pm kisan money call ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ 18ನೇ ಕಂತಿನ ಹಣ ತಮ್ಮ ಖಾತೆಗೆ ಜಮೆಯಾಗಿಲ್ಲವೇ? ನಿಮಗೇಕೆ ಜಮೆಯಾಗಿಲ್ಲ? ಕಾರಣವೇನು? ಎಂಬುದರ ಮಾಹಿತಿಯನ್ನು ರೈತರು ಪಡೆಯಬಗಹುದು.
ಹೌದು, ರೈತರು ಮನೆಯಲ್ಲಿಯೇ ಕುಳಿತು ತಮ್ಮ ಮೊಬೈಲ್ ನಿಂದ ಪಿಎಂ ಕಿಸಾನ್ ಹಣ ಏಕೆ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಸ್ಟೇಟಸ್ ಮೂಲಕ ಚೆಕ್ ಮಾಡಬಹುದು. ಒಂದು ವೇಳೆ ಜಮೆಯಾಗಿಲ್ಲವೆಂದರೆ ಏಕೆ ಜಮೆಯಾಗಿಲ್ಲ ಎಂಬುದನ್ನು ಉಚಿತ ಸಹಾಯವಾಣಿಗೆ ಕರೆ ಮಾಡಿ ವಿಚಾರಿಸಬಹುದು.
ಪಿಎಂ ಕಿಸಾನ್ ಜಮೆಯಾಗಿದೆಯೋ ಇಲ್ಲವೋ ಮೊದಲು ಸ್ಟೇಟಸ್ ಹೀಗೆ ಚೆಕ್ ಮಾಡಿ
ಪಿಎಂ ಕಿಸಾನ್ ಯೋಜನೆಯ ಎಷ್ಟು ಕಂತುಗಳು ನಿಮಗೆ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://pmkisan.gov.in/BeneficiaryStatus_New.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಪಿಎಂ ಕಿಸಾನ್ ಯೋಜನೆಯ ನೋಂದಣಿ ಸಂಖ್ಯೆ ನಮೂದಿಸಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಆ ಓಟಿಪಿ ಸಂಖ್ಯೆಯನ್ನು ನಮೂದಿಸಿ ನೀವು ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಚೆಕ್ ಮಾಡಬಹುದು.
ಪಿಎಂ ಕಿಸಾನ್ ಹಣ ಜಮೆಯಾಗದವರು ಯಾರಿಗೆ ಕರೆ ಮಾಡಬೇಕು? (pm kisan free toll free number)
ಪಿಎಂ ಕಿಸಾನ್ ಹಣ ಜಮೆಯಾಗದ ರೈತರು ಪಿಎಂ ಕಿಸಾನ್ ಯೋಜನೆಯ ಉಚಿತ ಸಹಾಯವಾಣಿಯನ್ನು ಆರಂಭಿಸಿದೆ. ಪಿಎಂ ಕಿಸಾನ್ ಸಹಾಯವಾಣಿ 155261 ಅಥವಾ 011-24300606 ಗೆ ಕರೆ ಮಾಡಿ ವಿಚಾರಿಸಬಹುದು.
ಇದನ್ನೂ ಓದಿ : ಜಮೀನಿನ ಓರಿಜಿನಲ್ ಸರ್ವೆ ಟಿಪ್ಪಣಿ ಪುಸ್ತಕ ಮೊಬೈಲಿನಲ್ಲಿ ಒಂದೇ ನಿಮಿಷದಲ್ಲಿ ಡೌನ್ಲೋಡ್ ಮಾಡಿ
for Pm kisan money call ಪಿಎಂ ಕಿಸಾನ್ ಯೋಜನೆಯ18ನೇ ಕಂತಿನ ಹಣ ಜಮೆ
ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಪ್ರತಿ ವರ್ಷ ಮೂರು ಬಾರಿ 4 ತಿಂಗಳಿಗೊಮ್ಮೆ ತಲಾ 2 ಸಾವಿರ ರೂಪಾಯಿಯಂತೆ ಒಟ್ಟು 6 ಸಾವಿರ ರೂಪಾಯಿ ರೈತರ ಖಾತೆಗೆ ಜಮೆ ಮಾಡಲಾಗುವುದು. ಕಳೆದ ತಿಂಗಳು 18ನೇ ಕಂತಿನ ಹಣ ರೈತರ ಖಾತೆಗೆ ಜಮೆ ಮಾಡಲಾಯಿತು.
ಪಿಎಂ ಕಿಸಾನ್ ಯೋಜನೆಗೆ ಅರ್ಹತೆ ಪಡೆದರೂ ಜಮೆಯಾಗುತ್ತಿಲ್ಲವೇ?
ಪಿಎಂ ಕಿಸಾನ್ ಯೋಜನೆಗೆ ಅರ್ಹತೆ ಪಡೆದಿದ್ದರೂ ಸಹ ನಿಮಗೆ ಏಕೆ ಪಿಎಂ ಕಿಸಾನ್ ಹಣ ಜಮೆಯಾಗುತ್ತಿಲ್ಲ. ರೈತರು ತಮ್ಮ ಹೆಸರು ಆಧಾರ್ ಕಾರ್ಡ್ ಜಮೀನಿನ ಪಹಣಿ (ಉತಾರ) ಹಾಗೂ ಬ್ಯಾಂಕ್ ಪಾಸ್ ಬುಕ್ ನಲ್ಲಿ ಒಂದೇ ರೀತಿಯಾಗಿರಬೇಕು. ಹೆಸರು ಮತ್ತು ತಂದೆಯ ಹೆಸರು ವ್ಯತ್ಯಾಸವಾಗಿದ್ದರೆ ಜಮೆಯಾಗುವುದಿಲ್ಲ.
ಆಧಾರ್ ಸಿಡಿಂಗ್ಗ್ ಮಾಡಿಸಿರಬೇಕು?
ಸರ್ಕಾರಿ ಸಬ್ಸಿಡಿ ಸೌಲಭ್ಯಗಳು ಇನ್ನೂ ಮುಂದೆ ರೈತರ ಖಾತೆಗೆ ಜಮೆಯಾಗಬೇಕಾದರೆ ಆಧಾರ್ ಸೀಡಿಂಗ್ ಆಗಿರಬೇಕು. ಇದನ್ನೂ ನೀವು ನಿಮ್ಮ ಬ್ಯಾಂಕ್ ಶಾಖೆಯಲ್ಲಿ ಆಧಾರ್ ಸೀಡಿಂಂಗ್ ಅರ್ಜಿ ಪಡೆದು ಅಲ್ಲೇ ಬಯೋಮೆಟ್ರಿಕ್ ಮೂಲಕ ಆಧಾರ್ ಸೀಡಿಂಗ್ ಮಾಡಿಕೊಳ್ಳಬೇಕು. ಆಗ ನಿಮಗೆ ಸರ್ಕಾರದ ಸೌಲಭ್ಯಗಳು ಸಿಗುತ್ತವೆ. ಇಲ್ಲಿದಿದ್ದರೆ ನಿಮ್ಮ ಖಾತೆಗೆ ಹಣ ಜಮೆಯಾಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ. ಇದೇ ತಿಂಗಳು ಅಕ್ಟೋಬರ್ 5 ರಂದು ಪಿಎಂ ಕಿಸಾನ್ ಯೋಜನೆಯ 18ನೇ ಕಂತು ಬಿುಗಡೆಯಾಗಿತ್ತು. ಆಗ ಬಹತೇಕ ರೈತರಿಗೆ ಹಣವೇ ಜಮೆಯಾಗಿಲ್ಲ ಹಿಂದಿನ ಕಂತು ಜಮೆಯಾಗಿವೆ ಆದರೆ 18ನೇ ಕಂತಿನ ಹಣ ಜಮೆಯಾಗಿದ್ದಲ್ಲ ಇದಕ್ಕೆ ಕಾರಣ ಆಧಾರ್ ಸಿಡ್ ಮಾಡಿಸದೆ ಇರುವ ರೈತರಿಗೆ ಹಣ ಜಮೆಯಾಗಿಲ್ಲ.