ಹಿಂಗಾರು ಬೆಳೆಗಳ ವಿಮೆ ಮಾಡಿಸಲು ಕೊನೆಯ ದಿನಾಂಕ

Written by Ramlinganna

Updated on:

Crop insurance cut off dates ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಯಾವ ಬೆಳೆಗೆ ವಿಮೆ ಮಾಡಿಸಲು ಕೊನೆಯ ದಿನಾಂಕ ಯಾವುದು ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಕೇಂದ್ರ ಸರ್ಕಾರವು ಜಾರಿಗೆ ತಂದ ಯೋಜನೆಗಳಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಮಾಡಿಸಲು ಕೊನೆಯ ದಿನಾಂಕ ಯಾವುದು ಎಂಬುದನ್ನು ಮೊಬೈಲ್ ನಲ್ಲೆ ನೋಡಬಹುದು.. ಪ್ರಧಾನಮಂತ್ರಿ ಫಸಲ್ ಬಿಮಾ ಈ ಯೋಜನೆಯಡಿ ರೈತರು ವಿಮೆ ಏಕೆ ಮಾಡಿಸಬೇಕು. ಬೆಳೆಗೆ ವಿಮೆ ಮಾಡಿಸಲು ಕೊನೆಯ ದಿನಾಂಕ ಯಾವುದು?  ವಿಮೆ ಮಾಡಿಸುವುದರಿಂದ ರೈತರಿಗಾಗುವ ಪ್ರಯೋಜನಗಳ ಮಾಹಿತಿ ಇಲ್ಲಿದೆ.

ಹವಾಮಾನ ವೈಪರೀತ್ಯದಿಂದಾಗಿ ರೈತರು ಪದೇ ಪದೇ ನಷ್ಟವಾಗುತ್ತಿರುತ್ತದೆ. ಅತೀವೃಷ್ಟಿ, ಅನಾವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿರುತ್ತಾರೆ. ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತಂದಿದೆ.

ರೈತರು ಫಸಲ್ ಬಿಮಾ ಯೋಜನೆಯಡಿ ಸರ್ಕಾರ ನಿಗದಿ ಮಾಡಿದ ಪ್ರಿಮಿಯಂ ಕಟ್ಟಬೇಕು. ಪ್ರಿಮಿಯಂನ್ನು ರೈತರು ಬಿತ್ತನೆ ಕಾರ್ಯ ಪ್ರಾರಂಭ ಹಂತದಲ್ಲೇ ಮಾಡಬಹುದು.  ವಿಮೆ ಮಾಡಿಸಿದ ರೈತರ ಬೆಳೆಗಳು ನೈಸರ್ಗಿಕ ವಿಕೋಪಗಳಿಂದಾಗಲೇ ಅಥವಾ ತಮ್ಮ ಕೈಮೀರಿದ ಯಾವುದೇ ಘಟನೆಯಿಂದ ಬೆಳೆ ಹಾನಿ ಸಂಭವಿಸಿದರೆ ರೈತರು ವಿಮೆ ಮಾಡಿದ ಮೊತ್ತವನ್ನು ಇನ್ಸುರೆನ್ಸ್ ಕಂಪನಿಯಿಂದ ಪಡೆಯುತ್ತಾರೆ.

Crop insurance cut off dates ವಿಮೆ ಮಾಡಿಸಲು ಕೊನೆಯ ದಿನಾಂಕ ಯಾವುದು? ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಹಿಂಗಾರು ಬೆಳೆಗಳ ವಿಮೆ ಮಾಡಿಸುವ ಕೊನೆಯ ದಿನಾಂಕ ಚೆಕ್ ಮಾಡಲು ಈ

https://www.samrakshane.karnataka.gov.in/PublicView/FindCutOff.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಸಂರಕ್ಷಣೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಯಾವ ಜಿಲ್ಲೆಗೆ ಸಂಬಂಧಿಸಿದ್ದೀರೋ ಆ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಉದಾಹರಣೆಗೆ ನೀವು ಕಲಬುರಗಿ ಜಿಲ್ಲೆಯವರಾಗಿದ್ದರೆ  ಕಲಬುರಗಿ ಆಯ್ಕೆ ಮಾಡಿಕೊಳ್ಳಿ. ಇತರ ಜಿಲ್ಲೆಯ ರೈತರು ತಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು.

ಆಗ ಆ ಜಿಲ್ಲೆಯಲ್ಲಿ ಯಾವ ಯಾವ ಹಿಂಗಾರು ಬೆಳೆಗಳಿಗೆ ವಿಮೆ ಮಾಡಿಸಬಹುದು ಹಾಗೂ ಕೊನೆಯ ದಿನಾಂಕ ಯಾವುದು ಎಂಬ ಪಟ್ಟಿ ಕಾಣುತ್ತದೆ.

ವಿಮೆ ಮಾಡಿಸಲು ಬೇಕಾಗುವ ಅರ್ಹತೆಗಳು

ರೈತರು ಆಯಾ ಪ್ರಾಂತ್ಯದ ಕೃಷಿ ಸಚಿವಾಲಯ ಸೂಚಿಸಿರುವ ಬೆಳೆಗಳನ್ನೇ ಬೆಳೆಸಬೇಕು. ಆಯಾ ಪ್ರದೇಶದ ಭೂಮಿ ಹಾಗೂ ಹವಾಮಾನವನ್ನು ಆಧರಿಸಿ ಬೆಳೆಗಳನ್ನು ಸೂಚಿಸಿರಲಾಗುತ್ತದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ಅರ್ಜಿ ಸಲ್ಲಿಸಿದ ರೈತರಿಗೆ ಮಾತ್ರ ವಿಮೆ ನೀಡಲಾಗುವುದು. ಅತೀವೃಷ್ಟಿ, ಅನಾವೃಷ್ಟಿ, ನೈಸರ್ಗಿಕ ಬೆಂಕಿ, ಬಿರುಗಾಳಿ, ಪ್ರವಾಹದಿಂದಾಗಿ ಬೆಳೆಗಳಿಗೆ ಹಾನಿ ಸಂಭವಿಸಿದರೆ ಪರಿಹಾರ ನೀಡಲಾಗುವುದು. ಬೆಳೆ ಹಾನಿಯಾದಾಗ ಸಂಬಂಧಿಸಿದ ವಿಮಾ ಕಂಪನಿಗೆ ದೂರು ನೀಡಬೇಕಾಗುತ್ತದೆ. ಆಗ ವಿಿಿ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರಕ್ಕೆ ಸೂಚಿಸುತ್ತಾರೆ.

ಯಾವ ಬೆಳೆಗೆ ವಿಮೆ ಮಾಡಿಸಲು ಕೊನೆಯ ದಿನಾಂಕ ಯಾವುದು?

ಸೂರ್ಯಕಾಂತಿ, ಕುಸುಬೆ, ಜೋಳ ಬೆಳಗಳ ವಿಮೆಗೆ ನವೆಂಬರ್ 30 ಕೊನೆಯ ದಿನವಾಗಿದೆ. ಅದೇ ರೀತಿ ಕಡಲೆ ಬೆಳೆಗೆ ಡಿಸೆಂಬರ್ 12 ಕೊನೆಯ ದಿನವಾಗಿದೆ. ಗೋಧಿ ಮತ್ತು ಭತ್ತ ಬೆಳೆಗೆ ಡಿಸೆಂಬರ್ 31 ಕೊನೆಯ ದಿನವಾಗಿದೆ.

ಇದನ್ನೂ ಓದಿ PM kisan ಅರ್ಹ ಮತ್ತು ಅನರ್ಹ ರೈತರ ಪಟ್ಟಿ ಬಿಡುಗಡೆ

ಬೆಳೆ ವಿಮೆ ಕುರಿತಂತೆ  ಮಾಹಿತಿ ಪಡೆಯಲು ಈ ನಂಬರಿಗೆ ಕರೆ ಮಾಡಿ

ರೈತರು ಬೆಳೆ ವಿಮೆ ಕುರಿತಂತೆ ಮಾಹಿತಿ ಪಡೆಯಲು ಅಂದರೆ ಬೆಳೆ ವಿಮೆ ಏಕೆ ಮಾಡಿಸಬೇಕು? ಬೆಳೆ ವಿಮೆ ಮಾಡಿಸುವುದರಿಂದಾಗುವ ಪ್ರಯೋಜನದ ಮಾಹಿತಿ ಪಡೆಯಲು ಕಿಸಾನ್ ಕಾಲ್ ಸೆಂಟರ್ 1800 180 1551 ಗೆ ಕರೆ ಮಾಡಿ ವಿಚಾರಿಸಬಹುದು.

Leave a Comment