ಇತ್ತೀಚೆಗೆ ರಸಗೊಬ್ಬರ ಬೆಲೆ ಏಕಾಏಕಿ ಗಗನಕ್ಕೇರಿ ರೈತರಿಗೆ ಶಾಕ್ ನೀಡಿತ್ತು ಬರೋಬ್ಬರಿ 700 ರೂಪಾಯಿ ಏರಿಕೆಯಾಗಿದ್ದರಿಂದ ದೇಶಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಕೊನೆಗೂ ರೈತರಿಗೆ ಕಡಿಮೆ ದರದಲ್ಲಿ ಡಿಎಪಿ ಸಿಗಬೇಕೆಂದು ಡಿಎಪಿ ರಸಗೊಬ್ಬರಕ್ಕೆ ನೀಡುವ ಸಬ್ಸಿಡಿಯ (DAP Subsidy ) ಪ್ರಮಾಣವನ್ನು ಶೇಕಡಾ 140 ರಷ್ಟು ಹೆಚ್ಚಿಸಿದೆ.
ಡಿಎಪಿ ರಸಗೊಬ್ಬರದ ಬೆಲೆಯಲ್ಲಿ ತೀವ್ರ ಹೆಚ್ಚಳವಾಗಿದ್ದರೂ ರೈತರಿಗೆ ಇದು ಹಳೆಯ ಬೆಲೆಯಲ್ಲೇ ಸಿಗವಂತೆ ಆಗಬೇಕು ಎಂಬ ಉದ್ದೇಶದಿಂದ ಸರ್ಕಾರವು ಈ ಕ್ರಮಕೈಗೊಂಡಿದೆ.
ಇದನ್ನೂ ಓದಿ ಈ ರೈತರೇಕೆ ಪಿಎಂ ಕಿಸಾನ್ ಪಟ್ಟಿಯಿಂದ ಹೊರಗುಳಿಯಲಿದ್ದಾರೆ?
ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಪ್ರಧಾನಿಯವರ ಕಚೇರಿಯ ಹೇಳಿಕೆ ತಿಳಿಸಿದೆ.
ಡಿಎಪಿಯ ಪ್ರತಿ ಚೀಲಕ್ಕೆ ನೀಡುತ್ತಿದ್ದ 500 ರೂಪಾಯಿ ಸಬ್ಸಿಡಿಯನ್ನು 1200 ಕ್ಕೆ ಹೆಚ್ಚಿಸುವ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಈ ತೀರ್ಮಾನದಿಂದಾಗಿ ಇನ್ನೂ ಮುಂದೆ ರೈತರು 1200 ರೂಪಾಯಿಗೆ ಒಂದು ಚೀಲ ಡಿಎಪಿ ಪಡೆಯಲಿದ್ದಾರೆ. ಬೆಲೆಯಲ್ಲಿ ಆಗಿರುವ ಹೊರೆಯನ್ನು ತಾನೇ ಹೊರುವ ತೀರ್ಮಾನವನ್ನು ಕೇಂದ್ರಕೈಗೊಂಡಿದೆ. ಇದಕ್ಕೆ ಸರ್ಕಾರವು 14,775 ಕೋಟಿ ರೂಪಾಯಿ ವಿನಿಯೋಗಿಸಲಿದೆ.
DAP Subsidy ರೈತರಿಗೆ ಹಳೆಯ ಬೆಲೆಯಲ್ಲಿ ಸಿಗಲಿದೆ ಡಿಎಪಿ
ಕಳೆದ ವರ್ಷ ಒಂದು ಚೀಲ ಡಿಎಪಿ ಬೆಲೆ 1700 ಆಗಿತ್ತು. ಇದಕ್ಕೆಕೇಂದ್ರ 500 ರೂಪಾಯಿ ರಷ್ಟು ಸಬ್ಸಿಡಿ ನೀಡುತ್ತಿತ್ತು. ಹಾಗಾಗಿ ಕಂಪನಿಗಳು ರಸಗೊಬ್ಬರವನ್ನು ರೈತರಿಗೆ ಪ್ರತಿ ಚೀಲಕ್ಕೆ 1200 ರಂತೆ ಮಾರಾಟ ಮಾಡುತ್ತಿದ್ದವು. ಆದರೆ ಕಳೆದ ತಿಂಗಳು ಏಕಾಏಕಿ ಪ್ರತಿ 50ಕೆಜಿ ಚೀಲಕ್ಕೆ 700 ರೂಪಾಯಿ ಹೆಚ್ಚಾಗಿದ್ದರಿಂದ ಪ್ರತಿ ಚೀಲಕ್ಕೆ 1900 ರೂಪಾಯಿಗೆ ಮಾರಾಟವಾಗುತ್ತಿತ್ತು. ಇದರಿಂದಾಗಿ ದೇಶಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ‘ಬೆಲೆ ಏರಿಕೆಯ ಎಲ್ಲ ಹೊರೆಯನ್ನು ಹೊರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸಬ್ಸಿಡಿ ಮೊತ್ತ ಹೆಚ್ಚಿಸಿದೆ.
ಡಿಎಪಿ ಬಳಕೆ ಹೆಚ್ಚಾಗುತ್ತಿದೆ
ಕೃಷಿಯಲ್ಲಿ ಡಿಎಪಿ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಾವಯವ ಗೊಬ್ಬರಕ್ಕಿಂತ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಗುತ್ತಿದ್ದರಿಂದ ಜಮೀನು ಬರಡಾಗುತ್ತಿದೆ. ಜಮೀನು ಫಲವತ್ತತೆ ಕಳೆದುಕೊಳ್ಳುತ್ತಿದೆ. ಇದರಿಂದಾಗಿ ಬೆಳೆಗಳ ಇಳುವರಿಯೂ ಕಡಿಮೆಯಾಗುತ್ತದೆ. ಕಡಿಮೆ ಬೆಲೆಗೆ ಡಿಎಪಿ ಸಿಗುತ್ತದೆ ಎಂದು ರೈತರು ಖರೀದಿ ಮಾಡುುತ್ತಾರೆ ಆದರೆ ಅದರಿಂದಾಗುವ ಪರಿಣಾಮದ ಬಗ್ಗೆ ವಿಚಾರಿಸುವುದಿಲ್ಲ. ಸಾವಯವ ಗೊಬ್ಬರಗಳ ಬಳಕೆ ಮಾಡಬೇಕೆಂದು ಅನಭವಿಗಳು ಹೇಳುತ್ತಿರುತ್ತಾರೆ. ಆದರೂ ಸಹ ಇತ್ತೀಚೆಗೆ ಸಾವಯವ ಗೊಬ್ಬರ ಮಾಡಲು ಸಾವಯವ ಕೃಷಿ ಮಾಡಲು ರೈತರು ಆಸಕ್ತಿವಹಿಸುತ್ತಿಲ್ಲ. ಹೆಚ್ಚಿನ ಇಳುವರಿ ಪಡೆಯಲು ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದಾರೆ. ಒಬ್ಬರನ್ನೊಡಿ ಇನ್ನೊಬ್ಬ ರೈತರು ಸಹ ಸಾವಯವ ಗೊಬ್ಬರಕ್ಕಿಂತ ರಾಸಾಯನಿಕ ಗೊಬ್ಬರಗಳನ್ನೇ ಹೆಚ್ಚು ಬಳಕೆ ಮಾಡುತ್ತಿದ್ದಾರೆ.