ಬೆಳೆ ವಿಮೆ ಹಣ ಜಮೆಯಾಗಿಲ್ಲವೇ? ಚೆಕ್ ಮಾಡಿ

Written by Ramlinganna

Updated on:

Call this insurance helpline number ಬೆಳೆ ವಿಮೆ ಯೋಜನೆಯಡಿ 2021-22ರ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮುಗಳಿಗೆ ಸಂಬಂಧಿಸಿದಂತೆ ವಿಮಾ ಸಂಸ್ಥೆಯಿಂದ ತಿರಸ್ಕೃತಗೊಂಡ ಪ್ರಸ್ತಾವನೆಗಳಿಗೆ ಆಕ್ಷೇಪಣೆ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಏಪ್ರೀಲ್ 15 ಕೊನೆಯ ದಿನವಾಗಿದೆ.

2021-22ನೇ ಸಾಲಿನ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ವಿಮಾ ಪರಿಹಾರ ಪಡೆಯಲು ಅರ್ಹರಿದ್ದು,  ಬೆಳೆಯ ಸಮೀಕ್ಷೆ ವಿವರದೊಂದಿಗೆ ಬೆಳೆ ಹೋಲಿಕೆ ಮಾಡಿದ ನಂತರ ತಾಳೆಯಾಗದ ಕೆಲ ಪ್ರಸ್ತಾವನೆಗಳನ್ನು ಸಂಬಂಧಿಸಿದ ವಿಮಾ ಕಂಪನಿಯವರು ತಿರಸ್ಕರಿಸಿ ವಿಮಾ ಮೊತ್ತ ಜಮೆ ಮಾಡಿರುವುದಿಲ್ಲ.

ಈ ರೀತಿ ಬೆಳೆ ಸಮೀಕ್ಷೆ ವಿವರಗಳೊಂದಿಗೆ ಹೋಂದಾಣಿಕೆಯಾಗದೆ ತಿರಸ್ಕೃತಗೊಂಡ ದಾವಣಗೆರೆ ಜಿಲ್ಲೆಯ ರೈತರ ಪ್ರಸ್ತಾವನೆಗಳನ್ನು ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಪ್ರದರ್ಶಿಸಲಾಗಿದೆ.

ರೈತರು ಆಕ್ಷೇಪಣೆಯೊಂದಿಗೆ ವಿಮಾ ಕಂತು ಪಾವತಿಸಿದ ರಸೀದಿ ಹೊಂದಿರಬೇಕು. 2021-22ನೇ ಸಾಲಿನ ಪಹಣಿಯಲ್ಲಿ ವಿಮೆಗೆ ನೋಂದಾಯಿಸಿದ ಬೆಳೆ ನಮೂದಾಗಿರಬೇಕು. ಬೆಂಬಲ ಬೆಲೆ ಪ್ರಯೋಜನ ಪಡೆದಿದ್ದಲ್ಲಿ ರಸೀದಿ ಲಗತ್ತಿಸಬೇಕು. ವಿಮೆಗೆ ನೋಂದಾಯಿತ ಬೆಳೆ ಉತ್ಪನ್ನವನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಲ್ಲಿ ರಸೀದಿ ಲಗತ್ತಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Call this insurance helpline number ಆಕ್ಷೇಪಣೆ ಸಲ್ಲಿಸಲು ಏಪ್ರೀಲ್ 28 ರವರೆಗೆ ಕಾಲಾವಕಾಶ

2021-22ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆಯನ್ನು ನೋಂದಣಿ ಮಾಡಿಕೊಂಡ ರೈತರು ಪ್ರಸ್ತಾವನೆಗಳನ್ನು ಬೆಳೆ ಸಮೀಕ್ಷೆ ದತ್ತಾಂಶಗಳೊಂದಿಗೆ ಹೋಲಿಕೆ ಮಾಡಿದಾಗ ತಾಳೆಯಾಗದೆ ಇರುವ ಮಂಗಾರು ಹಂಗಾಮಿನ220 ಹಾಗೂ ಹಿಂಗಾರು ಹಂಗಾಮಿನ 47 ಪ್ರಸ್ತಾವನೆಗಳು ಸೇರಿ ಒಟ್ಟು 267 ಪ್ರಸ್ತಾವನೆಗಳು ತಿರಸ್ಕೃತಗೊಂಡಿದೆ.

ಇದನ್ನೂ ಓದಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಇಲ್ಲೇ ಚೆಕ್ ಮಾಡಿ- ಏ. 11 ರವರೆಗೆ ಹೆಸರು ಸೇರಿಸಲು ಅವಕಾಶ

ತಿರಸ್ಕೃತಗೊಂಡ ರೈತರ ಪಟ್ಟಿಯನ್ನು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಪಂ ಸೂಚನಾ ಫಲಕಗಳಲ್ಲಿ ಪ್ರಕಟಿಸಲಾಗಿದ್ದು, 28 ರವರೆಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.

ಆಕ್ಷೇಪಣಾ ಅರ್ಜಿಯೊಂದಿಗೆ ಬೆಳೆ ನಮೂದಾಗಿರುವ ಪಹಣಿ, ಬೆಂಬಲ ಬೆಲೆ ಪ್ರಯೋಜನ ಪಡೆದಿದ್ದಲ್ಲಿ, ರಸೀದಿ, ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಳೆ ಮಾರಾಟ ಮಾಡಿದಲ್ಲಿ ಹೊಸದುರ್ಗ ತಾಲೂಕಿನ ರೈತರು ಸಂಬಂಧಪಟ್ಟ ದಾಖಲೆ ಸಲ್ಲಿಸಬೇಕು ಎಂದು ಕೃಷಿ ಸಹಾಯಕ ನಿರ್ದೇಶಕ ಸಿ.ಎಸ್. ಈಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮ ಬೆಳೆ ವಿಮೆಯ ಅರ್ಜಿ ಸ್ಟೇಟಸ್ ಚೆಕ್ ಮಾಡಿ

ಬೆಳೆ ವಿಮೆ ಮಾಡಿಸಿದ ರೈತರು ತಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಲು ಈ

https://www.samrakshane.karnataka.gov.in/Premium/CheckStatusMain_aadhaar.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ವಿಮಾ ಕಂಪನಿಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಿ ಅರ್ಜಿಯ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

ಬೆಳೆ ವಿಮೆ ಹಣ ನಿಮಗೇಕೆ ಜಮೆಯಾಗಿಲ್ಲ? ಈ ನಂಬರಿಗೆ ಕರೆ ಮಾಡಿ

ಮುಂಗಾರು ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ನಿಮಗೆ ಇನ್ನೂ ವಿಮೆ ಹಣ ಜಮೆಯಾಗಿಲ್ಲವೇ? ಬೆಳೆ ವಿಮೆ ನಿಮಗೇಕೆ ತಡವಾಗಿದೆ? ಯಾವ ಕಾರಣಕ್ಕಾಗಿ ಜಮೆಯಾಗಿಲ್ಲ ಎಂಬುದನ್ನು ತಿಳಿದುಕೊಳ್ಳಲು ಬೆಳೆ ವಿಮಾ ಕಂಪನಿಗೆ ಕರೆ ಮಾಡಬೇಕು. ಒಂದು ವೇಳೆ ನಿಮ್ಮ ಬಳಿ ಬೆಳೆ ವಿಮಾ ಕಂಪನಿಯ ಸಂಪರ್ಕಿಸುವ ನಂಬರ್ ಇಲ್ಲದಿದ್ದರೆ ಉಚಿತ ಸಹಾಯವಾಣಿಗೆ ಕರೆ ಮಾಡಬೇಕು.

ಬೆಳೆ ವಿಮೆಯ ಉಚಿತ ಸಹಾಯವಾಣಿ 

ಬೆಳೆ ವಿಮೆ ಮಾಡಿಸಿದ ರೈತರು ನಿಮ್ಮ ಜಿಲ್ಲೆಯ ವಿಮಾ ಕಂಪನಿಯ ಸಿಬ್ಬಂದಿ ನಂಬರ್ ಪಡೆಯಲು

1800 180 1551 ಗೆ

ಕರೆ ಮಾಡಬೇಕು.  ಆಗ ವಿಮಾ ಕಂಪನಿಯ ಸಿಬ್ಬಂದಿ ಕರೆ ಸ್ವೀಕರಿಸುತ್ತಾರೆ. ಬೆಳೆ ವಿಮೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿ ಪಡೆಯಬಹುದು.  ನಿಮ್ಮ ಜಿಲ್ಲೆಯೆ ಯಾವ ವಿಮಾ ಕಂಪನಿಗೆ ನಿಗದಿಪಡಿಸಲಾಗಿದೆ. ಹಾಗೂ ಆ ಜಿಲ್ಲೆಯ ವಿಮಾ ಕಂಪನಿಯ ಸಿಬ್ಬಂದಿ ನಂಬರ್ ಕೊಡುತ್ತಾರೆ.

Leave a Comment