ಜನನ ಮರಣ ಪ್ರಮಾಣ ಪತ್ರ ಇಲ್ಲೇ ಪಡೆಯಿರಿ

Written by Ramlinganna

Published on:

Birth death certificate : ಜನನ ಮರಣ ಪ್ರಮಾಣ ಪತ್ರ ಪಡೆಯಲು ಈಗ ದೂರ ಹೋಗಬೇಕಿಲ್ಲ. ನಿಮ್ಮ ಹತ್ತಿರದ ಗ್ರಾಮ ಪಂಚಾಯತ್ ನಲ್ಲೇ ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ಜನರು ಇನ್ನೂಮುಂದೆ ಪದೆ ಪದೆ ಕೆಲಸ ಬಿಟ್ಟು ಕಚೇರಿಗಳಿಗೂ ಅಲೆಯಬೇಕಿಲ್ಲ. ನೋಂದಣಿಗೂ ಎಲ್ಲಿಯೂ ಹೋಗಬೇಕಿಲ್ಲ. ಹಿಂದೆಲ್ಲಾ ಜನನ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ ಪಡೆಯಬೇಕೆಂದರೆ ನಾಡ ಕಚೇರಿಯಿಂದ ತಹಶೀಲ್ದಾರ ಕಚೇರಿಯವರೆಗೂ ಅಲೆದಾಡಬೇಕಾಗುತ್ತಿತ್ತು.  ಆದರೂ ಸರಿಯಾದ ಸಮಯಕ್ಕೆ ಸಿಗುತ್ತಿರಲಿಲ್ಲ. ಹಾಗಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಈಗ ಸಾರ್ವಜನಿಕರು ತಮ್ಮ ಗ್ರಾಮಗಳಲ್ಲೇ ಜನನ ಮರಣ ಪ್ರಮಾಣ ಪತ್ರ ಪಡೆಯಬಹುದು.

ಡಿಜಿಟಲ್ ಸಹಿ ಆಧಾರಿತ ಜನನ, ಮರಣ ನೋಂದಣಿ ಪ್ರಮಾಣ ಪತ್ರವನ್ನು ಗ್ರಾಮ ಪಂಚಾಯತಿಯಲ್ಲೇ ನೀಡಲಾಗುತ್ತದೆ. ಜನನ, ಮರಣ ಸಂಭವಿಸಿದ 30 ದಿನದ ಒಳಗೆ ನೋಂದಾಯಿಸಿ ಇ-ಜನ್ಮ ತಂತ್ರಾಂಶದ ಮೂಲಕ ಪ್ರಮಾಣ ಪತ್ರ ವಿತರಿಸಲು ಡಿಜಿಟಲ್ ಸಹಿ ಬಳಸಲಾಗುವುದು.

ರಾಜ್ಯದಲ್ಲಿ ಜುಲೈ 1 ರಿಂದ ಜಾರಿಗೆ ಬರುವಂತೆ ಜನನ ಅಥವಾ ಮರಣ ಘಟನೆ ಸಂಭವಿಸಿದ 30 ದಿನಗಳ ಒಳಗಾಗಿ ನೋಂದಣಿ ಮಾಡಿ ಪ್ರಮಾಣ ಪತ್ರ ವಿತರಿಸುವ ಅಧಿಕಾರವನ್ನುಗ್ರಾಮ ಪಂಚಾಯತಿ ಕಾರ್ಯದರ್ಶಿಗಳಿಗೆ ನೀಡಿ ಜನನ ಮರಣಗಳ ಮುಖ್ಯ ನೋಂದಣಾಧಿಕಾರಿ ಸುತ್ತೋಲೆ ಹೊರಡಿಸಿದ್ದಾರೆ.

ಇದನ್ನೂ ಓದಿ ಯಾವ ಯಾವ ಸರ್ವೆ ನಂಬರ್ FID ಗೆ ಲಿಂಕ್ ಆಗಿವೆ? ಇಲ್ಲೇ ಚೆಕ್ ಮಾಡಿ

ಸುತ್ತೋಲೆ ಅನ್ವಯ ಜನನ,ಮರಣ ಘಟನೆಗಳು ಸಂಭವಿಸಿದ 30 ದಿನಗಳವರೆಗಿನ ಪ್ರಕರಣಗಳಲ್ಲಿ ನೋಂದಾಯಿಸಲು ಪಂಚಾಯತಿ ಕಾರ್ಯದರ್ಶಿ ಹಾಗೂ 30 ದಿನಗಳಿಂದ ಒಂದು ವರ್ಷದವರೆಗಿನ ಪ್ರಕರಣಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳನ್ನು ಜನನ, ಮರಣ ನೋಂದಣಾಧಿಕಾರಿಗಳನ್ನಾಗಿ ಆದೇಶ ಹೊರಡಿಸಲಾಗಿದೆ.

ಜನನ ಮರಣ ನಡೆದ 21 ದಿನಗಳ ಒಳಗಾಗಿ ನೋಂದಣಿ ಮಾಡಿ ಉಚಿತವಾಗಿ ಒಂದು ಪ್ರಮಾಣ ಪತ್ರ ವಿತರಿಸಬೇಕು. 21 ದಿನಗಳಿಂದ 30 ದಿನಗಳ ನಡುವೆ ನೋಂದಣಿ ಮಾಡಿದರೆ 2 ರೂಪಾಯಿ ವಿಳಂಬ ಶುಲ್ಕ, 30 ದಿನಗಳಿಂದ ಒಂದು ವರ್ಷದ ವರೆಗಿನ ಪ್ರಕರಣಗಳಲ್ಲಿ 5 ರೂಪಾಯಿ ಶುಲ್ಕ ಪಡೆದು ನೋಂದಣಿ ಮಾಡಬಹುದು.

ಕರ್ನಾಟಕ ಜನನ, ಮರಣ ನೋಂದಣಿ ನಿಯಮಗಳ ಪ್ರಕಾರ 1 ವರ್ಷದ ಬಳಿಕ ನೋಂದಣಿ ಮಾಡಿದರೆ ಪ್ರಥಮ ದರ್ಜೆ ದಂಡಾಧಿಕಾರಿ ಅವರ ಆದೇಶದ ಜತೆಗೆ 10 ರೂಪಾಯಿ ವಿಳಂಬ ಶುಲ್ಕ ಪಡೆದು ನೋಂದಣಿ ಮಾಡಬೇಕು.

Birth death certificate ಜನನ ಮರಣ ಪ್ರಮಾಣ ಪತ್ರ  ಆನ್ಲೈನ್ ನಲ್ಲೇ ಪಡೆಯಿರಿ

ಜನನ ಮರಣ ಪ್ರಮಾಣ ಪತ್ರ ಆನ್ಲೈನ್ ನಲ್ಲಿ ಪಡೆಯಲು ಈ

https://ejanma.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ ಬರ್ತ್ ಸರ್ಟಿಫಿಕೇಟ್ ಬೇಕೋ ಅಥವಾ ಡೆತ್ ಸರ್ಟಿಫಿಕೇಟ್ ಬೇಕೋ ಎಂಬುದನ್ನು ಗುರುತಿಸಬೇಕು.  ಯಾವ ಸರ್ಟಿಫಿಕೇಟ್ ಬೇಕೋ ಅದರ ಮೇಲೆ ಕ್ಲಿಕ್ ಮಾಡಬೇಕು. ಬರ್ತ್ ಸರ್ಟಿಫಿಕೇಟ್ ಬೇಕಾದರೆ ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ಹಾಕಿ ಕ್ಯಾಪ್ಚ್ಯಾ ಕೋಡ್ ಹಾಕಿ ಬರ್ತ್ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು.

ರಾಜ್ಯಾದ್ಯಂತ 5950 ಗ್ರಾಮ ಪಂಚಾಯತಿಗಳಿವೆ. ಎಲ್ಲಾ ಪಂಚಾಯತಿಗಳಲ್ಲೂ ಈ ಸೇವೆ ಕಲ್ಪಿಲಾಗುವುದು. ಜೊತೆಗೆ, ವಿವಾಹ ನೋಂದಣಿಯೂ ಗ್ರಾಮ ಪಂಚಾಯತಿಗಳಲ್ಲೇ ನಡೆಯಲಿದೆ ಎಂದು ಮಾಹಿತಿ ನೀಡಲಾಗಿದೆ.  ಈ ವರೆಗೆ ವಿವಾಹ ನೋಂದಣಿ ಕಾರ್ಯ ಕೇವಲ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲೇ ನಡೆಯುತ್ತಿತ್ತು. ಪಿಡಿಓಗಳನ್ನು ಜನನ ಮರಣ ಪತ್ರ ವಿತರಣಾಧಿಕಾರಿಗಳನ್ನಾಗಿ ನೇಮಿಸುವ ಬದಲು ಗ್ರಾಮ ಪಂಚಾಯತಿ ಕಾರ್ಯದರ್ಶಿಯವರನ್ನು ಉಪ ನೋಂದಣಾಧಿಕಾರಿಯನ್ನಾಗಿ ನೇಮಿಸಲಾಗಿದೆ.

Leave a Comment