Bhoomi online landrecords ಜಮೀನಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಈಗ ರೈತರಿಗೆ ಭೂಮಿ ಆನ್ಲೈನ್ ತಂತ್ರಾಂಶದಲ್ಲಿ ಸಿಗಲಿದೆ. ಹೌದು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಮತ್ತು ಭೂ ಮಾಲಿಕರಿಗೆ ವಿವರವಾದ ಮಾಹಿತಿಯನ್ನು ಸುಲಭವಾಗಿ ಆನ್ಲೈನ್ ಮೂಲಕ ನೀಡುವ ಉದ್ದೇಶದಿಂದಾಗಿ 2000 ರಲ್ಲಿ ರಾಜ್ಯ ಸರ್ಕಾರವು ಭೂಮಿ ಆರ್ಟಿಸಿ ಆನ್ಲೈನ್ ಪೋರ್ಟಲ್ ಆರಂಭಿಸಿದೆ.
ಈ ಪೋರ್ಟಲ್ ಅಡಿಯಲ್ಲಿ ರೈತರಿಗೆ, ಸಾರ್ವಜನಿಕರಿಗೆ ಕೈಬರಹದ ಪಹಣಿಗಳನ್ನು ಡಾಟಾ ನಮೂದಿಸುವ ಮುಖಾಂತರ ಗಣಕೀರಣಗೊಳಿಸಿ ಪಹಣಿ ಸೇರಿದಂತೆ ಇತರ ಭೂ ದಾಖಲೆಗಳ್ನು ವಿತರಿಸಲು ಆರಂಭಿಸಲಾಗಿದೆ. ಹಾಗಾದರೆ ಭೂಮಿ ಆರ್ಟಿಸಿ ಮೂಲಕ ಯಾವ ಯಾವ ಸೌಲಭ್ಯ ಸಿಗುತ್ತದೆ ಎಂಬುದರ ಸಂಪೂರ್ಣ ಮಾಹಿತಿ
ರೈತರು ತಮ್ಮ ಜಮೀನಿನ ಹಕ್ಕುಗಳು, ಹಿಡುವಳಿ, ಮತ್ತು ಬೆಳೆಗಳ ದಾಖಲೆಗಳನ್ನು ಆನ್ಲೈನ್ ನಲ್ಲಿ ಪರಿಶೀಲಿಸಬಹುದು. ಮುಟೇಷನ್ ಗಳ, ಜಮೀನಿನ ಸರ್ವೆನಂಬರ್, ಖಾತಾ ವಿವರ, ಕಂದಾಯ ಇಲಾಖೆಯು ಒದಗಿಸುವ ಭೂ ದಾಖಲೆಗಳ ನಕ್ಷೆ, ಸೇರಿದಂತೆ ಇನ್ನಿತರ ಮಾಹಿತಿಯು ಒಂದು ಸೂರಿನಡಿಯಲ್ಲಿ ರೈತರಿಗೆ ಸೌಲಭ್ಯ ಸಿಗಲು ಇದನ್ನು ಆರಂಭಿಸಲಾಗಿದೆ.
ಭೂ ದಾಖಲೆಗಳ ದತ್ತಾಂಶಗಳನ್ನು ಉಪಯೋಗಿಸಿ ಪಹಣಿಯಲ್ಲಾಗುವ ಮಾಲಿಕತ್ವ ಬದಲಾವಣೆ, ಅಥವಾ ಇನ್ನಾವುದೇ ಬದಲಾವಣೆಗಳಾದಲ್ಲಿ ರೈತರು ಮನೆಯಲ್ಲಿಯೇ ಕುಳಿತು ತಮ್ಮಲ್ಲಿರುವ ಮೊಬೈಲ್ ಮೂಲಕ ಪರಶೀಲಿಸಬಹುದು.. ಇದಕ್ಕಾಗಿ ರಾಜ್ಯದ ಎಲ್ಲಾ 176 ತಾಲೂಕುಗಳು ಹೆಚ್ಚುವರಿ ಮತ್ತು ವಿಶೇಷ ತಾಲೂಕುಗಳಲ್ಲಿ ಭೂಮಿ ಬ್ಯಾಕ್ ಆಫೀಸ್ ಸ್ಥಾಪಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳು, ತಾಲೂಕುಗಳು, ಹೋಬಳಿ ಮತ್ತು ಗ್ರಾಮಗಳ ವಿವರವೂ ಇಲ್ಲಿ ಸಿಗುತ್ತದೆ.
ಇದನ್ನೂ ಓದಿ : Google Map ನಲ್ಲಿ ನಿಮ್ಮ ಲೋಕೇಷನ್ ಸೇರಿಸಬೇಕೇ? ಇಲ್ಲಿದೆ ಮಾಹಿತಿ
ಆನ್ಲೈನ್ ಮೂಲಕ ರೈತರಿಗೆ ಸುಲಭವಾಗಿ ಸೌಲಭ್ಯ ಸಿಗುವುದಕ್ಕಾಗಿ ಆರಂಭಿಸಲಾದ ಭೂಮಿಯಿಂದ ಪ್ರತಿದಿನ ಸಾಕಷ್ಟು ಜನ ಮಾಹಿತಿ ಪಡಯುತ್ತಿದ್ದಾರೆ. ರೈತರು ಆನ್ಲೈನ್ ಮೂಲಕವೇ ಶುಲ್ಕ ಪಾವತಿಸಿ ಪಹಣಿ, ಮುಟೇಷನ್, ಖಾತೆಗಳನ್ನು ಪ್ರಿಂಟ್ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ ಪಹಣಿಗಳನ್ನು ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿ, 6019 ಗ್ರಾಮ ಪಂಚಾಯತಿಗಳಲ್ಲಿ ಹಾಗೂ ರಾಜ್ಯ ವಿವಿಧ ಕಡೆ ಸ್ಥಾಪಿಸಲಾಗಿರುವ ಟೆಲಿ ಕೇಂದ್ರಗಳಲ್ಲಿಯೂ ವಿತರಿಸಲಾಗುತ್ತಿದೆ. ಭೂಮಿ ತಂತ್ರಾಂಶದಿಂದ ಪಹಣಿ, (ಆರ್.ಟಿ.ಸಿ) ಮುಟೇಷನ ಪ್ರತಿ, ಮುಟೇಷನ್ ಸ್ಥಿತಿ, ಟಿಪ್ಪಣಿ ಪ್ರತಿಯನ್ನು ಪಡೆಯಬಹುದು.
Bhoomi online landrecords ಭೂಮಿ ಎಂದರೇನು?
ಭೂಮಿ ಕರ್ನಾಟಕ ರಾಜ್ಯದ ಲ್ಯಾಂಡ್ ರಿಕಾರ್ಡ್ ಪೋರ್ಟಲ್ ಆಗಿದ್ದು, ಬಳಕೆದಾರರು ಪ್ರಮುಖ ದಾಖಲೆಗಳನ್ನು ವೀಕ್ಷಿಸಬಹುದು ಮತ್ತು ಡೌನ್ಲೋಡ್ ಸಹ ಮಾಡಿಕೊಳ್ಳಲು ಸರ್ಕಾರ ಆರಂಭಿಸಲಾದ ಒಂದು ಸಮಗ್ರ ದಾಖಲಾತಿಗಳ ಪೋರ್ಟಲ್ ಆಗಿದೆ.
Bhoomi online landrecords ಪಹಣಿ (ಆರ್.ಟಿಸಿ)ಯಲ್ಲಿ ಏನೇನು ಮಾಹಿತಿ ಇರುತ್ತದೆ?
ಪಹಣಿ ಎಂದು ಕರೆಯಲ್ಪಡುವ ಆರ್.ಟಿಸಿಯಲ್ಲಿ ಭೂಮಾಲಿಕರ ಬಗ್ಗೆ ಮಾಹಿತಿ, ಮಣ್ಣಿನ ಪ್ರಕಾರದ ಗುರುತಿಸುವಿಕೆ, ಭೂಮಿಯ ಪ್ರಕಾರ, ಭೂಮಿಯಲ್ಲಿ ಬೆಳೆಗಳು, ಭೂಮಿಯ ವಿಸ್ತೀರ್ಣ, ಸ್ವಾಧೀನದ ಸ್ವರೂಪ, ಜಮೀನಿನಲ್ಲಿ ಬ್ಯಾಂಕ್ ಸಾಲಗಳಂತಹ ಹೊಣೆಗಾರಿಕೆ, ಹಿಡುವಳಿ ಸೇರಿದಂತೆ ಇನ್ನಿತರ ಮಾಹಿತಿ ಇರುತ್ತದೆ.
ಭೂಮಿ ಆರ್.ಟಿಸಿ ಲ್ಯಾಂಡ್ ರಿಕಾರ್ಡ್ ನಲ್ಲಿ ಸಿಗುವ ಸೌಲಭ್ಯ ವೀಕ್ಷಿಸಲು ಈ
https://landrecords.karnataka.gov.in/Service84/
ಲಿಂಕ್ ಮೇಲೆ ಕ್ಲಿಕ್ ಮಾಡಬಹುದು.
ರೈತರಿಗೆ ಭೂಮಿ ಆರ್ಟಿಸಿಯಿಂದಾಗುವ ಪ್ರಯೋಜನೆಗಳು
ಸಾಲದ ಅರ್ಜಿಗಾಗಿ ಭೂ ದಾಖಲೆಗಳ್ನು ಪಡೆದುಕೊಳ್ಳಬಹುದು. ಆರ್.ಟಿ.ಸಿ (ಪಹಣಿ) ನಕಲನ್ನು ಮಾಲೀಕರ ಹೆಸರು ಅಥವಾ ಸರ್ವೆ ನಂಬರ್ ನಮೂದಿಸಿ ಹುಡುಕಿ ಡೌನ್ಲೋಡ್ ಮಾಡಿಕೊಳ್ಳಬಹುದು. ಬೆಳೆವಿಮೆಗಾಗಿ ಆರ್.ಟಿಸಿ ಮೂಲಕ ಬೆಳೆ ಡಾಟಾ ಪಡೆದುಕೊಳ್ಳಬಹುದು. ಭೂಮಿ ಸಂಬಂಧಇಸಿದ ವಿವಾದಗಳ್ನು ಪರಿಶೀಲಿಸಬಹುದು.