ಈ ರೈತರ ಖಾತೆಗೆ 15 ದಿನದಲ್ಲಿ ಬೆಳೆ ಪರಿಹಾರ ಬಿಡುಗಡೆ-ಇಲ್ಲಿದೆ ಮಾಹಿತಿ

Written by Ramlinganna

Published on:

Bele parihara hana release : ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಅತಿವೃಷ್ಟಿ ಮತ್ತು ವ್ಯಾಪಕ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಮಳೆಯಿಂದ ಬೆಳೆ ಹಾನಿಯಾಗಿದ್ದು, ಬೆಳೆ ಹಾನಿಗೊಳಗಾದ ರೈತರಿಗೆ ಮುಂದಿನ 10-15 ದಿನದಲ್ಲಿ ರಾಜ್ಯ ಸರ್ಕಾರದಿಂದ ಮೊದಲನೇ ಕಂತಿನ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎನ್.ಡಿ.ಆರ್.ಎಫ್. ಪರಿಹಾರದ ಜೊತೆಗೆ ಪ್ರತಿ ಹೆಕ್ಟೇರ್‌ಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಎಸ್.ಡಿ.ಆರ್.ಎಫ್ ನಿಧಿಯಡಿ 8,500 ರೂಪಾಯಿ ಪರಿಹಾರ ನೀಡಲಾಗುವುದು ಎಂದು ಕಳೆದ ಸೆಪ್ಟೆಂಬರ್ 30 ರಂದು ಇಲ್ಲಿಯೇ ಮುಖ್ಯಮಂತ್ರಿಗಳು ಘೋಷಿಸಿದ್ದು, ಅದರಂತೆ ಹಣ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ ಎಂದರು.

Bele parihara hana release ಬೆಳೆ ಹಾನಿ ಪರಿಹಾರ

ಪ್ರಾಥಮಿಕ ಅಂದಾಜಿನ ಪ್ರಕಾರ ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ 3,24,777 ಹೆಕ್ಟೆರ್ ಬೆಳೆ ಹಾನಿಯಾಗಿದ್ದೆ ಎಂದು ಅಂದಾಜಿಸಲಾಗಿತ್ತಾದರು ಜಂಟಿ ಸಮೀಕ್ಷೆಯಿಂದ 3,07,206 ಹೆಕ್ಟೇರ್ ಹಾನಿಯಾಗಿದ್ದು ಕಂಡುಬAದಿದೆ. ಬೆಳೆ ಹಾನಿ ಕುರಿತು ಪರಿಹಾರ ಪೋರ್ಟಲ್ ನಲ್ಲಿ ದಾಖಲಾದ 4,17,596 ರೈತರ ಪೈಕಿ ಶುಕ್ರವಾರದ ವರೆಗೆ 4,15,996 ಅನುಮೋದನೆ ನೀಡಿದೆ. ತಾಂತ್ರಿಕ ಮತ್ತು ನಾನಾ ಕಾರಣದಿಂದ 1,148 ತಿರಸ್ಕೃತಗೊಂಡಿದ್ದು, 1,006 ಅನುಮೋದನೆಗೆ ಬಾಕಿ ಇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಇದನ್ನೂ ಓದಿ ನಿಮ್ಮ ಜಮೀನು ಹಿಂದೆ ಯಾರ ಯಾರ ಹೆಸರಿನಲ್ಲಿತ್ತು? ಇಲ್ಲೇ ಚೆಕ್ ಮಾಡಿ

ಬೆಂಗಳೂರುದಾಚೆ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ವಿಶೇಷ ಬಂಡವಾಳ ಹೂಡಿಕೆ ಮಾಡಲು ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ (ಐoಛಿಚಿಟ ಇಛಿoಟಿomಥಿ ಂಛಿಛಿeಟeಡಿಚಿಣoಡಿ Pಡಿogಡಿಚಿmme – ಐಇಂP) ಜಾರಿಗೆ ತರಲಾಗುತ್ತಿದೆ. ತುಮಕೂರು-ಚಿತ್ರದುರ್ಗ, ಹುಬ್ಬಳ್ಳಿ-ಬೆಳಗಾವಿ-ಧಾರವಾಡ, ಶಿವಮೊಗ್ಗ, ಬಳ್ಳಾರಿ, ಮಂಗಳೂರು, ಮೈಸೂರು, ಕಲಬುರಗಿ ಹೀಗೆ ಆಯಾ ಭಾಗಗಳನ್ನಿ ಕ್ಲಸ್ಟರ್ ಎಂದು ಪರಿಗಣಿಸಿ ಅಲ್ಲಿ ಇನ್ಕೂಬೇಷನ್ ಸೆಂಟರ್, ಸೆಂಟರ್ ಆಫ್ ಎಕ್ಸಿಲೆನ್ಸ್, ಎಸಿಲೇಟರ್ ಕಾರ್ಯಕ್ರಮಗಳು ಜಾರಿಗೆ ತರಲಾಗುತ್ತದೆ. ಉದ್ಯಮಶೀಲತೆ ಹೆಚ್ಚಿಸುವುದಲ್ಲದೆ ಉದ್ಯೋಗ ಸೃಷ್ಟಿ ನಮ್ಮ ಮುಖ್ಯ ಗುರಿಯಾಗಿದೆ. ಕಲಬುರಗಿ ಕ್ಲಸ್ಟರ್ ಘೋಷಣೆ ಮಾಡಿದ ಪರಿಣಾಮ ಇಲ್ಲಿ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ, ಸೆಂಟರ್ ಆಫ್ ಎಕ್ಸಿಲೆನ್ಸ್ ,  ಆವಿಷ್ಕಾರ ಕೇಂದ್ರಗಳು, ಭಾಷಾ ಪ್ರಯೋಗಾಲಯ, ಅಗ್ರಿಟೆಕ್ ಎಸಿಲೇಟರ್ ಬರಲು ಸಾಧ್ಯವಾಗಲಿದೆ ಎಂದರು.

ಕಲಬುರಗಿ ಜಿ.ಡಿ.ಪಿ ಹೆಚ್ಚಳಕ್ಕೆ ಪ್ರಯತ್ನ: ರಾಜ್ಯದ ಜಿಡಿಪಿಗೆ ಬೆಂಗಳೂರು ಶೇ.40ರಷ್ಟು ಕೊಡುಗೆ ನೀಡಿದ್ದರೆ, ದಕ್ಷಿಣ ಕನ್ನಡ ಪಾಲು ಶೇ.5.40. ಉಳಿದ ಜಿಲ್ಲೆಗಳ ಪ್ರಮಾಣ ತುಂಬಾನೆ ಕಡಿಮೆ ಇದೆ.

ಬೆಂಗಳೂರು ಗ್ರಾಮೀಣ ಮತ್ತು ಕಲಬುರಗಿ ಕೊಡುಗೆ ಶೇ.1.9 ಇದೆ. ನವೋದ್ಯಮ ಸ್ಥಾಪನೆ, ಕೈಗಾರಿಕೆಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಮಾನವ ಸಂಪನ್ಮೂನ ಬೆಳವಣಿಗೆ, ಕೌಶಲ್ಯ ಅಭಿವೃದ್ಧಿ, ಆವಿಷ್ಕಾರ ಕೇಂದ್ರ, ಕೃಷಿ ವಲಯದ ಸ್ಥಿರತೆ, ಪ್ರವಾಸೋದ್ಯಮದ ಬಲಪಡಿಸುವ ಗುರಿಯೊಂದಿಗೆ ನವ ಕಲಬುರಗಿಯನ್ನು ಅಭಿವೃದ್ಧಿಪಡಿಸಲಾಗುವುದು.  ಮುಂದಿನ ಒಂದು ವರ್ಷದೊಳಗೆ ಈ ಎಲ್ಲಾ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಕಲಬುರಗಿಯ ಜಿಡಿಪಿಯನ್ನು 1.9% ರಿಂದ 2.15% ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದರು.

ಮಹನೀಯರ ಹುಟ್ಟೂರು ತಲಾ 1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ನಾಡಿನ ಹಿರಿಮೆ ಮತ್ತು ಗರಿಮೆ ಹೆಚ್ಚಿಸಿದ ಭಾರತ ರತ್ನ ಪುರಸ್ಕೃತ ಸರ್.ಎಂ.ವಿಶ್ವೇರಯ್ಯ, ಡಾ. ಸಿ.ಎನ್.ಆರ್.ರಾವ್, ಪಂಡಿತ್ ಭೀಮಸೇನ್ ಜೋಷಿ ಮತ್ತು ಕನ್ನಡ ನಾಡಿಗೆ, ಭಾಷೆಗೆ ತಮ್ಮದೆಯಾದ ಕೊಡುಗೆ ನೀಡಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹುಟ್ಟೂರಿನ ಅಭಿವೃದ್ದಿಗಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ತಲಾ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು. ಗ್ರಾಮಸ್ಥರೊಂದಿಗೆ ಚರ್ಚಿಸಿ ಇದಕ್ಕೆ ಅಂತಿಮ ರೂಪ ನೀಡಲಾಗುವುದು. ಕರ್ನಾಟಕ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕನ್ನಡಕ್ಕಾಗಿ ಶ್ರಮಿಸಿದ ಈ ಮಹಿನೀಯರ ಹುಟ್ಟೂರಿನ ಅಭಿವೃದ್ದಿಗೆ ಇಲಾಖೆ ಶ್ರಮಿಸಲಿದೆ ಎಂದು ಘೋಷಿಸಲು ಹರ್ಷವಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮದ ನಿಯಮಿತದ ಅಧ್ಯಕ್ಷೆ ಹಾಗೂ ಉತ್ತರ ಶಾಸಕಿ ಕನೀಜ್ ಫಾತೀಮಾ, ಶಾಸಕರಾದ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರುಗಳಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ಕೆ.ಕೆ.ಆರ್.ಟಿ.ಸಿ. ಅಧ್ಯಕ್ಷ ಅರುಣಕುಮಾರ ಎಮ್. ವೈ. ಪಾಟೀಲ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆಯ ಆಯುಕ್ತ ಅವಿನಾಶ ಶಿಂಧೆ ಇದ್ದರು.

Leave a Comment