ಯಾವ ಸರ್ವೆ ನಂಬರಿಗೆ ಬರ ಪರಿಹಾರ ಜಮೆ? ಇಲ್ಲೇ ಚೆಕ್ ಮಾಡಿ

Written by Ramlinganna

Updated on:

Baragala parihara check : ರೈತರು ಈಗ ತಮ್ಮ ಯಾವ ಸರ್ವೆ ನಂಬರಿಗೆ ಬರ ಪರಿಹಾರ ಹಣ ಜಮೆಯಾಗಿದೆ ಎಂಬುದನ್ನು ಮೊಬೈಲ್ ನಲ್ಲಿಯೇ ಚೆಕ್ ಮಾಡಬಹುದು.

ಹೌದು, ರೈತರು ಕೇವಲ ಒಂದೇ ನಿಮಿಷದಲ್ಲಿ ಬರಗಾಲ ಪರಿಹಾರ ಹಣವನ್ನು ಯಾವ ಯಾವ ಸರ್ವೆ ನಂಬರಿಗೆ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ  ಮಾಹಿತಿ.

ರಾಜ್ಯದ ರೈತರ ಬರಗಾಲ ಪರಿಹಾರ ಹಣ ಜಮೆ ಮಾಡಲಾಗಿದೆ. ಉಳಿದ ಕಂತನ್ನು ಸಹ ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ. ಹಾಗಾಗಿ ರೈತರು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

Baragala parihara check ರೈತರಿಗೆ ಪರಿಹಾರ ಹಣ ಜಮೆಯಾಗಿದ್ದನ್ನು ಸರ್ವೆ ನಂಬರ್ ಹಾಕಿ ಬರ ಪರಿಹಾರ ಚೆಕ್ ಮಾಡಿ

ಬರ ಪರಿಹಾರ ಹಣ ಯಾವ ಯಾವ ರೈತರಿಗೆ ಯಾವ ಸರ್ವೆ ನಂಬರಿಗೆ  ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://parihara.karnataka.gov.in/service92/       

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ  ನಿಮಗೆ ಭೂಮಿ ಆನ್ಲೈನ್ ಪರಿಹಾರ ಇನ್ಪುಟ್ ಸಬ್ಸಿಡಿ ಪಾವತಿ ವಿವರಗಳು ಪೇಜ್ ಕಾಣಿಸುತ್ತದೆ.

ಅಲ್ಲಿ ನೀವು Select Year / ವರ್ಷ  2023-24 ಆಯ್ಕೆ ಮಾಡಿಕೊಳ್ಳಬೇಕು. ನಂತರ Select Season / ಋತು ಆಯ್ಕೆ ಮಾಡಿಯಲ್ಲಿ ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ Select Calamity ವಿಪತ್ತು ಆಯ್ಕೆ ಮಾಡಿಯಲ್ಲಿ ಬರ ಆಯ್ಕೆ ಮಾಡಬೇಕು. ನಂತರ Get Data / ಹುಡುಕು ಮೇಲೆ ಕ್ಲಿಕ್ ಮಾಡಬೇಕು.

ಅಲ್ಲಿ ನಿಮಗೆ ಆಧಾರ್ ಸಂಖ್ಯೆ, ರೈತರ ಗುರುತಿನ ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ಸರ್ವೆ ನಂಬರ್  ಹೀಗೆ ನಾಲ್ಕು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ಸರ್ವೆ ನಂಬರ್ ಆಯ್ಕೆ ಮಾಡಿಕೊಳ್ಳಬೇಕು.  ಬರ ಪರಿಹಾರ ಹಣ ಯಾವ ಸರ್ವೆ ನಂಬರಿಗೆ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಸರ್ವೆ ನಂಬರ್ ನಮೂದಿಸಬೇಕು. ನಂತರ ಸರ್ ನಾಕ್ ನಲ್ಲಿ ಸ್ಟಾರ್ ಹಾಗೂ ಹಿಸ್ಸಾ ನಂಬರ್ ನಲ್ಲಿಯೂ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ  Fetch/ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು.

ಆಗ ನಿಮಗೆ ನೀವು ನಮೂದಿಸಿದ  ಸರ್ವೆ ನಂಬರಿಗೆ ಬರಗಾಲ ಪರಿಹಾರ ಹಣ ಎಷ್ಟು ಜಮೆಯಾಗಿದೆ. ಯಾವ ಬ್ಯಾಂಕಿಗೆ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.

ಇದನ್ನೂ ಓದಿ ನಿಮ್ಮ ಸರ್ವೆ ನಂಬರಿನಲ್ಲಿ ಯಾವ ರೈತರಿಗೆಷ್ಟು ಜಮೀನಿದೆ? ಚೆಕ್ ಮಾಡಿ

ಒಂದು ವೇಳೆ ನಿಮಗೆ ನೀವು ನಮೂದಿಸಿದ ಸರ್ವೆ ನಂಬರಿಗೆ ಹಣ ಜಮೆಯಾಗಿಲ್ಲವಾದರೆ Data not found ಎಂದು ಕಾಣಿಸುತ್ತದೆ.

Baragala parihara check ಯಾವ ಯಾವ ಬೆಳೆಗೆ ಎಷ್ಟು ಬರ ಪರಿಹಾರ ಜಮೆ?

ರೈತರ ಎಲ್ಲಾ ಬೆಳೆಗೆ ಒಂದೇ ರೀತಿ ಬರಗಾಲ ಪರಿಹಾರ ಹಣ ಜಮೆಯಾಗುವುದಿಲ್ಲ. ಹೌದು, ಎನ್.ಡಿ.ಆರ್.ಎಫ್ / ಎಸ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ ರಾಜ್ಯ ಸರ್ಕಾರವು ಪ್ರತಿ ಹೆಕ್ಟೇರ್ (ಗರಿಷ್ಠ ಎರಡು ಹೆಕ್ಟೇರ್ ಗೆ) ಪರಿಹಾರ ಮೊತ್ತವನ್ನು ನಿಗದಿಪಡಿಸಿದೆ. ಮಳೆಯಾಶ್ರಿತ / ಖುಷ್ಕಿ ಬೆಳೆಗೆ 8500 ರೂಪಾಯಿ ನಿಗದಿಪಡಿಸಲಾಗಿದೆ. ನೀರಾವರಿ ಬೆಳೆಗೆ 17000 ರೂಪಾಯಿ ನಿಗದಿಪಡಿಸಲಾಗಿದೆ. ಹಾಗೂ ಬಹುವಾರ್ಷಿಕ /  ತೋಟಗಾರಿಕೆ ಬೆಳೆಗಳಿಗೆ 22500 ರೂಪಾಯಿವರೆಗೆ ಪರಿಹಾರ ನೀಡಲು ನಿಗದಿಪಡಿಸಲಾಗಿದೆ.

Leave a Comment