ಕಳೆದ ಮುಂಗಾರು ಹಂಗಾಮಿನಲ್ಲಿ ಬರದಿಂದಾಗಿ ಬೆಳೆ ನಷ್ಟ ಅನುಭವಿಸಿದ ರೈತರ ಖಾತೆಗೆ Bara parihara bidugade ಅಂದರೆ ತಲಾ 2 ಸಾವಿರ ರೂಪಾಯಿ ಹಣವನ್ನು ರಾಜ್ಯ ಸರ್ಕಾರ ಜಮೆ ಮಾಡಿದೆ.
ಹೌದು, ಚಾಮರಾಜನಗರ ಜಿಲ್ಲೆಯ 47552 ಫಲಾನುಭವಿಗಳ ಖಾತೆಗೆ 8.90 ಕೋಟಿ ರೂಪಾಯಿ ಹಣ ಜಮೆಯಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಕಳೆದ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಕಾಡಿದ್ದರಿಂದ ಜಿಲ್ಲೆಯ ಸಾವಿರಾರು ರೈತರು ಬೆಳೆ ನಷ್ಟ ಅನುಭವಿಸಿದ್ದರು. ಸರ್ಕಾರ ಕೂಡ ಜಿಲ್ಲೆಯ ಐದೂ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು.
ಮೊದಲ ಹಂತದಲ್ಲಿ ನ ಷ್ಟ ಅನುಭವಿಸಿದ ರೈತರಿಗೆ 2 ಸಾವಿರ ರೂಪಾಯಿ ಪಾವತಿ ಮಾಡುವುದಾಗಿ ಸರ್ಕಾರ ಹೇಳಿತ್ತು. ಇದಕ್ಕಾಗಿ 105 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿತ್ತು.
ಫ್ರೂಟ್ಸ್ ತಂತ್ರಾಂಶದಲ್ಲಿ ಪಡೆದ ಬೆಳೆ ನ ಷ್ಟ ಮಾಹಿತಿ ಆಧಾರದಲ್ಲಿ ಕಂದಾಯ ಇಲಾಖೆಯ ಪ್ರಕಾರ ತಂತ್ರಾಂಶದ ಮೂಲಕ ಬರ ಪರಿಹಾರ ನೀಡಲಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಏಳು ಬ್ಯಾಚುಗಳಲ್ಲಿ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಆರು ಬ್ಯಾಚ್ ನವರಿಗೆ ಹಣ ಪಾವತಿಯಾಗಿದ್ದು, ಏಳನೇ ಬ್ಯಾಚ್ ನ ರೈತರ ಖಾತೆಗಳಿಗೆ ಒಂದೆರಡು ದಿನಗಳಲ್ಲಿ ಹಣ ಜಮೆಯಾಗಲಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಐದು ತಾಲೂಕುಗಳ ವ್ಯಾಪ್ತಿಯಲ್ಲಿ ಮಳೆಯಾಶ್ರಿತ 39,263 ಹೆಕ್ಟೇರ್ ಗಳಲ್ಲಿಮತ್ತು ನೀರಾವರಿ ಆಶ್ರಿತ 3542 ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ.
ಇದನ್ನೂ ಓದಿ : ಜಮೀನಿಗೆ ಹೋಗಲು ಕಾಲುದಾರಿ ಬಂಡಿದಾರಿ ಇದೆಯೇ? ಇಲ್ಲೇ ಚೆಕ್ ಮಾಡಿ
ಗುಂಡ್ಲುಪೇಟೆ ತಾಲೂಕಿನಲ್ಲಿ 20089 ಹೆಕ್ಟೇರ್ ಬೆಳೆ ನ ಷ್ಟವಾಗಿದ್ದು, 20581 ಫಲಾನುಭವಿಗಳಿಗೆ 2000 ರೂಪಾಯಿಯಂತೆ 2.89 ಕೋಟಿ ರೂಪಾಯಿ ಪಾವತಿ ಮಾಡಲಾಗಿದೆ.
ಚಾಮರಾಜನಗರ ತಾಲೂಕಿನಲ್ಲಿ 13103 ಹೆಕ್ಟೇರ್ ನಲ್ಲಿ ಬೆಳೆ ಹಾನಿಯಾಗಿದ್ದು, 14441 ರೈತರಿಗೆ 2.57 ಕೋಟಿ ರೂಪಾಯಿ ಪರಿಹಾರ ದೊರೆತಿದೆ.
ಹನೂರು ತಾಲೂಕಿನಲ್ಲಿ5188 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶವಲ್ಲದೆ 3542 ಹೆಕ್ಟೇರ್ ನೀರಾವರಿ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಹಾಳಾಗಿತ್ತು. ತಾಲೂಕಿನ 11105 ಫಲಾನುಭವಗಳಿಗೆ 2.18 ಕೋಟಿ ರೂಪಾಯಿ ಜಮೆಯಾಗಿದೆ.
ಬರ ಪರಿಹಾರ ಪಡೆದವರ ಮಾಹಿತಿ, ನಾಡ ಕಚೇರಿಗಳು ಹಾಗೂ ಆಯಾ ಗ್ರಾಮ ಪಂಚಾಯತಿಗಳಲ್ಲಿ ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Bara parihara bidugade: ಬೆಳೆ ಹಾನಿ ಪರಿಹಾರ ಜಮೆಯ ಸ್ಟೇಟಸ್ ಇಲ್ಲೇ ಚೆಕ್ ಮಾಡಿ?
ಬೆಳೆ ಹಾನಿ ಪರಿಹಾರದ ಸ್ಟೇಟಸ್ ಚೆಕ್ ಮಾಡಲು ಈ
https://landrecords.karnataka.gov.in/PariharaPayment/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪರಿಹಾರ ಹಣ ಸಂದಾಯ ವರದಿ ಕಾಣಿಸುತ್ತದೆ. ಅಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ಸೆಲೆಕ್ಟ್ ಕಾಲಾಮಿಟಿ ಟೈಪ್ ನಲ್ಲಿ ಫ್ಲಡ್ ಅಥವಾ ಡ್ರಾಟ್ ಆಯ್ಕೆ ಮಾಡಿಕೊಳ್ಳಬೇಕು. ನಂತರ 2023ನೇ ವರ್ಷ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು. ನಂತರ ಕ್ಯಾಪ್ಚ್ಯಾ ಕೋಡ್ ಹಾಕಿ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಜಮೆಯಾಗಿರುವ ಸ್ಟೇಟಸ್ ಚೆಕ್ ಮಾಡಬಹುದು.